Farmers ಪಂಪಸೆಟ್ ಕಳ್ಳತನ: ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು
ಬೈಲಹೊಂಗಲ ಪೊಲೀಸರ ಭರ್ಜರಿ ಭೇಟೆ
Team Udayavani, Jul 19, 2024, 9:40 PM IST
ಬೈಲಹೊಂಗಲ : ತಾಲೂಕಿನ ನಯಾನಗರ ಗ್ರಾಮದ ಹತ್ತಿರ ಮಲಪ್ರಭಾ ನದಿ ದಡದ ರೈತರ 10 ಪಂಪಸೆಟ್ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಧಾರವಾಡದ ಮಾಳಾಪೂರ ಖಾದ್ರಿಗಲ್ಲಿಯ ನಿವಾಸಿಗಳಾದ ಮೊಹಮ್ಮದ ನದೀಮ ಮಹಮ್ಮದ ಹನೀಫ ಹೆಬ್ಬಳ್ಳಿ (33), ರಿಯಾಜ ರಫೀಕ ಕಾರಿಗಾರ (28), ಸಮೀರ ನಜೀರ ಹೆಬ್ಬಳ್ಳಿ (21), ಜಾಕೀರಹುಸೇನ ನೂರಹ್ಮದ ಮಾಲದಾರ (25) ಎಂದು ಗುರುತಿಸಲಾಗಿದೆ.
ಇವರ ಕಡೆಯಿಂದ ಅಂದಾಜು 2 ಲಕ್ಷ ರೂ.ಮೌಲ್ಯದ 10 ಪಂಪಸೆಟ್‌ಗಳನ್ನು ಹಾಗೂ ಅಪರಾಧಕ್ಕೆ ಬಳಸಿದ್ದ 3ಲಕ್ಷ ರೂ.ಮೌಲ್ಯದ ಟಾಟಾ ಎಸ್ ವಾಹನವನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಿನ್ನೆಲೆ
ತಾಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿಯ ದಡದಲ್ಲಿರುವ ರೈತರ ಜಮೀನಿನಲ್ಲಿರುವ ರೈತರ 10 ಪಂಪಸೆಟ್‍ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡ ಬೆಳಗಾವಿ ಎಸ್‌ಪಿ ಭೀಮಾಶಂಕರ ಗುಳೇದ, ಕೆಎಸ್‌ಪಿಎಸ್ ಶೃತಿ ಕೆ., ಹೆಚ್ಚುವರಿ ಎಸ್‌ಪಿ ಆರ್.ಬಿ.ಬಸರಗಿ, ಡಿವೈಎಸ್ಪಿ ರವಿ ನಾಯ್ಕ ನೇತೃತ್ವದಲ್ಲಿ ಕಳ್ಳತನ ಪತ್ತೆಗೆ ತಂಡವನ್ನು ರಚಿಸಲಾಗಿತ್ತು.
ಪಿಐ ಪಿ.ವ್ಹಿ.ಸಾಲಿಮಠ, ಪಿಎಸ್‌ಐಗಳಾದ ಗುರುರಾಜ ಕಲಬುರ್ಗಿ, ಎಫ್.ವಾಯ್.ಮಲ್ಲೂರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಸ್.ಯು.ಮೆಣಸಿನಕಾಯಿ, ಚೇತನ ಬುದ್ನಿ, ಎಂ.ಬಿ.ಕಂಬಾರ, ಎಮ್.ಎಸ್.ದೇಶನೂರ, ಟೆಕ್ನಿಕಲ್ ವಿಭಾಗದ ಸಿಬ್ಬಂದಿ ವಿನೋದ ಠಕ್ಕನವರ, ಸಚೀನ ಪಾಟೀಲ ಅವರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಬೈಲಹೊಂಗಲ ಪೊಲೀಸರ ಕಾರ್ಯಕ್ಕೆ ಎಸ್.ಪಿ. ಭೀಮಾಶಂಕರ ಗುಳೇದ, ರೈತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.