ಮಗನ ಸಾಧನೆಗೆ ಅಪ್ಪ-ಅಮ್ಮ ದಿಲ್‌ಖುಷ್
Team Udayavani, Nov 23, 2018, 5:17 PM IST
ಬೆಳಗಾವಿ: ಬಾಲ್ಯದಿಂದಲೂ ಕ್ರಿಕೆಟ್ ಹುಚ್ಚು ಬೆಳೆಸಿಕೊಂಡಿರುವ ಮಗ ರೋನಿತ್ ಸಾಧನೆ ತವರು ಪಿಚ್‌ನಲ್ಲಿ ನೋಡಿ ಅತ್ಯಂತ ಖುಷಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಅವನಿಂದ ನಿರೀಕ್ಷಿಸುತ್ತಿದ್ದೇವೆ.
ಮಗನ ಸಾಧನೆಯನ್ನು ಕಣ್ತುಂಬಿಕೊಳ್ಳಲು ಆಟೋ ನಗರದ ಕೆಎಸ್‌ಸಿಎ ಮೈದಾನಕ್ಕೆ ಬಂದಿದ್ದ ಕರ್ನಾಟಕ ತಂಡದ ವೇಗದ ಬೌಲರ್ ರೋನಿತ್‌ನ ತಾಯಿ ಸರಿತಾ ಮೋರೆ ಉದಯವಾಣಿಯೊಂದಿಗೆ ಸಂತಸ ಹಂಚಿಕೊಂಡರು.
ಕರ್ನಾಟಕ ತಂಡದ ಪರವಾಗಿ ಇದೇ ಮೊದಲ ರಣಜಿ ಟ್ರೋಫಿ ಆಡುತ್ತಿರುವ ರೋನಿತ್ ಮೋರೆ ಕುಂದಾನಗರಿಯಲ್ಲಿ ಮೊದಲ ಪಂದ್ಯ ಇದಾಗಿದೆ. ರಾಜ್ಯ ತಂಡದಲ್ಲಿ ಅವಕಾಶ ಸಿಗದಿದ್ದಕ್ಕೆ ಹಿಮಾಚಲ ಪ್ರದೇಶದ ಪರವಾಗಿ ಆಡಿದ್ದ ರೋನಿತ್‌ಗೆ ಮೂರು ವರ್ಷಗಳ ಬಳಿಕ ಅವಕಾಶ ಸಿಕ್ಕಿದೆ. ಬೆಳಗಾವಿಯಲ್ಲಿ ಅಭಿಮಾನಿಗಳ ಹಷೋದ್ಘಾರದ ಮಧ್ಯೆಯೇ ಆಟ ಆರಂಭಿಸಿರುವ ರೋನಿತ್ ಐದು ವಿಕೆಟ್ ಪಡೆದು ಬೆಳಗಾವಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಚಿಕ್ಕಂದಿನಿಂದಲೂ ರೋನಿತ್ ಕ್ರಿಕೆಟ್ ಆಡುತ್ತಲೇ ಬೆಳೆದಿದ್ದಾನೆ. ಗೋಮಟೇಶದಲ್ಲಿ ಪ್ರೌಢಶಾಲೆ ಮುಗಿಸಿ, ಗೋಗಟೆ ಹಾಗೂ ಜೈನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದಾನೆ. ಸಣ್ಣ ಪುಟ್ಟ ಪಂದ್ಯಾವಳಿಯಲ್ಲಿ ಆಡುತ್ತ ಈಗ ರಣಜಿಯಲ್ಲಿ ಭಾಗವಹಿಸಿ ತವರಿಗೆ ಆಡಲು ಬಂದಿದ್ದು ನಮಗೆ ತುಂಬ ಹೆಮ್ಮೆಯ ತರುತ್ತಿದೆ. ಜೊತೆಗೆ ಎದುರಾಳಿಯ 5 ವಿಕೆಟ್ ಪಡೆದು ಮಿಂಚಿರುವುದು ನಮಗೆ ಎಲ್ಲಿಲ್ಲದ ಸಂತಸ ತಂದಿದೆ ಎನ್ನುತ್ತಾರೆ ತಾಯಿ ಸರಿತಾ.
ಕರ್ನಾಟಕ ತಂಡದಲ್ಲಿ ಬಹಳ ವರ್ಷಗಳ ನಂತರ ಅವಕಾಶ ಸಿಕ್ಕರೂ ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದಾನೆ. ಮುಂದೆ ಇನ್ನೂ ಉತ್ತಮ ಸಾಧನೆ ಮಾಡುತ್ತಾನೆ. ಈತನ ಸಾಧನೆಯ ಹಿಂದೆ ಸಹೋದರ ನಿಖೀಲ್ ಹಾಗೂ ತಂದೆ ಗಜಾನನ ಅವರ ಪ್ರೋತ್ಸಾಹ ಹೆಚ್ಚಿದೆ ಎನ್ನುತ್ತಾರೆ ತಾಯಿ ಸರಿತಾ. ಮಕ್ಕಳ ಪ್ರತಿಭೆಯನ್ನು ಯಾರೂ ಹತ್ತಿಕ್ಕಬಾರದು.
ಮಕ್ಕಳ ಆಸಕ್ತಿಯನ್ನು ಗುರುತಿಸಿ ಅವರಿಗೆ ಇಷ್ಟವಾದ ಕ್ಷೇತ್ರದ ಆಯ್ಕೆ ಮಾಡಿಕೊಳ್ಳಲು ಬಿಟ್ಟು ಕೊಡಬೇಕು. ಅವರಿಗೆ ಆಸಕ್ತಿ ಇಲ್ಲದಿದ್ದರೂ ನಾವು ಒತ್ತಾಯಪೂರ್ವಕವಾಗಿ ಕಳುಹಿಸಬಾರದು ಎಂದು ತಂದೆ ಗಜಾನನ ಮೋರೆ ಹೇಳುತ್ತಾರೆ.
ತಮ್ಮನ ಆಟ ನೋಡಲು ಬೆಂಗಳೂರಿ ನಿಂದ ಬಂದಿದ್ದೇನೆ. ಉತ್ತಮ ಪ್ರದರ್ಶನ ನೀಡುತ್ತಾನೆ ಎಂಬುದು ನಮಗೆ ಮೊದಲೇ ಗೊತ್ತಿತ್ತು. ಬೆಳಗಾವಿಯಲ್ಲಿ ಕರ್ನಾಟಕ ತಂಡ ಗೆಲ್ಲುವ ವಿಶ್ವಾಸವಿದೆ. ನನ್ನ ಸಹೋದರನೊಂದಿಗೆ ಉಳಿದ ಎಲ್ಲ ಆಟಗಾರರ ಶ್ರಮವೂ ಇದೆ ಎನ್ನುತ್ತಾರೆ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿರುವ ರೋನಿತ್‌ನ ಸಹೋದರ ನಿಖೀಲ್.
ಕೈ ಬೀಸಿದ ಮಗ-ಪೋಷಕರ ಆನಂದ ಮಗನ ಸಾಧನೆಯನ್ನು ಕಣ್ತುಂಬಿಕೊಳ್ಳಲು ಮೈದಾನದ ಪ್ರಸ್‌ಕ್ಲಬ್ ಬಾಕ್ಸ್‌ನಲ್ಲಿ ಕುಳಿತಿದ್ದ ರೋನಿತ್ ಪೋಷಕರು ಆನಂದ ಬಾಷ್ಪ ಹರಿಸಿದರು. ಮಗ 5 ವಿಕೆಟ್ ಕಬಳಿಸಿ ಆಲೌಟ್ ಮಾಡಿ ಪೆವಿಲಿಯನ್‌ನತ್ತ ಬರುವಾಗ ತಂದೆ-ತಾಯಿಯನ್ನು ನೋಡಿ ಕೈ ಬೀಸಿದನು. ಆಗ ಎದ್ದು ನಿಂತು ಸಂಭ್ರಮಿಸುತ್ತಿದ್ದ ತಂದೆ ಗಜಾನನ ಹಾಗೂ ತಾಯಿ-ಸರಿತಾ ಅವರು ಮಗನನ್ನು ನೋಡಿ ಆನಂದ ಭಾಷ್ಪ ಸುರಿಸಿದರು.
ಧೋನಿ ಅಭಿಮಾನಿ
ರೋನಿತ್ ಮೋರೆ ಕ್ರಿಕೆಟ್ ಆಡುವಾಗ ಅನೇಕ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಆಟ ನೋಡುತ್ತಿದ್ದ. ಜೊತೆಗೆ ಈತ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರಸಿಂಗ್ ಅವರ ಅಭಿಮಾನಿ ಎಂದು ಅಭಿಮಾನದಿಂದ ಹೇಳಿಕೊಂಡರು ತಾಯಿ ಸರಿತಾ.
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.