ಕಾಲುವೆಗೆ ನೀರು ಬಿಡದಿದ್ದರೆ ಉಗ್ರ ಹೋರಾಟ
Team Udayavani, Sep 10, 2019, 11:24 AM IST
ಐಗಳಿ: ಕರಿಮಸೂತಿ ಏತ ನೀರಾವರಿ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಐಗಳಿ ಕ್ರಾಸ್ ರಸ್ತೆ ತಡೆ ನಡೆಸಿದ ರೈತರನ್ನುದ್ದೇಶಿಸಿ ಅಥಣಿ ನೀರಾವರಿ ಅಧಿಕಾರಿ ಮಾತನಾಡಿದರು.
ಐಗಳಿ: ಅಥಣಿ ತಾಲೂಕಿನ ಪೂರ್ವಭಾಗದ ಐಗಳಿ, ಅರಟಾಳ, ಬಾಡಗಿ ಮತ್ತು ಕೊಕಟನೂರ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಮಳೆಯಾಗದೇ ಇರುವುದರಿಂದ ಈ ಹಳ್ಳಿಗಳಿಗೆ ಕಾಲುವೆ ನೀರು ಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ಐಗಳಿ ಕ್ರಾಸ್ ರಸ್ತೆ ತಡೆಗೆ ಮುಂದಾದಾಗ ಪೊಲೀಸ್ ಇಲಾಖೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಅವರನ್ನು ಸಮಾಧಾನ ಪಡಿಸಿ ಮರಳಿ ಕಳಿಸಿದ ಘಟನೆ ಸೋಮವಾರ ನಡೆದಿದೆ.
ಈ ಮುಂಚೆ ಮಳೆಯಾಗಿ ಅಲ್ಪ ಸ್ವಲ್ಪ ಭೂಮಿ ಹಸಿಯಾಗಿದ್ದರಿಂದ ಕೆಲ ರೈತರು ಬಿತ್ತನೆ ಮಾಡಿದ್ದು ಮಳೆ ಇಲ್ಲದೇ ಹಾಗೂ ಕಾಲುವೆ ನೀರು ಕೂಡ ಬಾರದೇ ಬೆಳೆಗಳು ಒಣಗುತ್ತಿವೆ. ಜನ ಜಾನುವಾರುಗಳ ಬದುಕು ದುಸ್ತರವಾಗುತ್ತಿದೆ. ಕೂಡಲೇ ಕಾಲುವೆ ನೀರು ಹರಿಸಬೇಕೆನ್ನುವುದು ರೈತರ ಬೇಡಿಕೆಯಾಗಿತ್ತು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿ ರೈತರನ್ನು ಸಮಾಧಾನ ಪಡಿಸಿ ಮಾತನಾಡಿದ ಪಿಎಸ್‌ಐ ರಾಕೇಶ ಬಗಲಿ, ನೀರಾವರಿ ಅಧಿಕಾರಿಗಳು ಬರುವವರೆಗೆ ರಸ್ತೆ ತಡೆ ಮಾಡುವುದು ಬೇಡ ನಮ್ಮೊಂದಿಗೆ ಸಹಕರಿಸಿ ಎಂದು ಹೇಳಿದಾಗ ಒಪ್ಪಿದ ರೈತರು ರಸ್ತೆ ಬದಿ ಧರಣಿ ಕುಳಿತರು. ಈ ವೇಳೆ ರೈತ ಮುಖಂಡರಾದ ರಮೇಶ ಮಡಿವಾಳ, ಸಚಿನ ಬಳ್ಳೊಳ್ಳಿ, ದುಂಡಪ್ಪ ತನಂಗಿ, ನಿಂಗೊಡಾ ತೆಲಸಂಗ, ಸಂಗಪ್ಪ ಕರೆಗಾರ, ಜಗದೀಶ ತೆಲಸಂಗ ಸೇರಿದಂತೆ ಅನೇಕರು ಮಾತನಾಡಿ, ನಾವು ತಾಳ್ಮೆ ಕಳೆದುಕೊಳ್ಳುವುದು ಬೇಡ. ನಮ್ಮ ಸಮಸ್ಯೆ ಬಗೆ ಹರಿಯುವವರೆಗೆ ಇಲ್ಲೇ ಧರಣಿ ಕುಳಿತುಕೊಳ್ಳೋಣ ಎಂದರು.
ಸ್ಥಳಕ್ಕಾಗಮಿಸಿದ ನೀರಾವರಿ ನಿಗಮದ ತಾಲೂಕು ಅಧಿಕಾರಿ ಎಂ.ಜಿ.ಕೆ.ನಾಗಪ್ಪ ರೈತರನ್ನುದ್ದೇಶಿಸಿ ಮಾತನಾಡಿ, ಮಹಾಪೂರದಿಂದ ವ್ಯವಸ್ಥೆ ಹಾಳಾಗಿತ್ತು. ಅದನ್ನು ದುರಸ್ತಿಗೊಳಿಸಿ ನೀರು ಬಿಡುವಲ್ಲಿ ವಿಳಂಬವಾಗಿದೆ. ಅಲ್ಲದೇ ಹಿಂದಿನ ರೈತರು ಸಹಕಾರ ನೀಡುತ್ತಿಲ್ಲ ಮತ್ತು ಅನುದಾನ ಕೂಡ ಇಲ್ಲ ಎಂದಾಗ ರೈತರು ಪ್ರತಿರೋಧ ವ್ಯಕ್ತಪಡಿಸಿ ಅಧಿಕಾರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆಗ ಪಿಎಸ್‌ಐ ಬಗಲಿ ರೈತರನ್ನು ಸಮಾಧಾನ ಪಡಿಸಿದರು. ಸೆ. 10ರಿಂದ 20 ರವರೆಗೆ ಐಗಳಿ, ಕೊಕಟನೂರ, ಅರಟಾಳ ಹಾಗೂ ಬಾಡಗಿ ಗ್ರಾಮಗಳ ವ್ಯಾಪ್ತಿಯ ರೈತರಿಗೆ ನೀರು ಹರಿಸುವುದಾಗಿ ಹೇಳಿದರು.
ಮಂಗಳವಾರ ಕಾಲುವೆಗೆ ನೀರು ಹರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿ ರೈತರು ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ಸಿದರಾಯ ಬಳ್ಳೊಳ್ಳಿ, ಚಂದು ವಾಘಮೋರೆ, ಶಿವಪ್ಪ ಬಂಡರಬಟ್ಟಿ, ಸದಾಶಿವ ಏಳೂರ, ಮಚ್ಚೇಂದ್ರ ತೆಲಸಂಗ, ಈಶ್ವರ ಬಳ್ಳೊಳ್ಳಿ, ಸದಾಶಿವ ಶಿಂದೂರ ಸೇರಿದಂತೆ ಐಗಳಿ, ಅರಟಾಳ, ಬಾಡಗಿ, ಕೊಕಟನೂರ ಗ್ರಾಮಗಳ ನೂರಾರು ರೈತರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.