ಮೊದಲ, 3ನೇ ಮದುವೆ ಬಚ್ಚಿಟ್ಟದ್ದಕ್ಕೆ 2ನೇ ಹೆಂಡತಿಯಿಂದಲೇ ಗಂಡನ ಕೊಲೆಗೆ ಸುಪಾರಿ
Team Udayavani, Mar 23, 2022, 2:17 PM IST
ಬೆಳಗಾವಿ: ಮೊದಲ ಹಾಗೂ ಮೂರನೇ ಮದುವೆ ಬಚ್ಚಿಟ್ಟಿದ್ದಕ್ಕೆ ಕುಪಿತಗೊಂಡ ಎರಡನೇ ಹೆಂಡತಿ 10 ಲಕ್ಷ ರೂ. ಸುಪಾರಿ ಕೊಟ್ಟು ತನ್ನ ಗಂಡನನ್ನು ಕೊಲೆ ಮಾಡಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸಮೇತ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೀಡಾದ ರಾಜು ದೊಡ್ಡಬೊಮ್ಮನವರನ ಪತ್ನಿ ಬೆಳಗಾವಿಯ ಕಿರಣ ರಾಜು ದೊಡ್ಡಬೊಮ್ಮನವರ(26), ಹಿಂದವಾಡಿಯ ಶಶಿಕಾಂತ ಪಾಟೀಲ, ಖಾಸಬಾಗದ ಧರಣೇಂದ್ರ ಕಂಠಿ, ಸಂಜಯ ರಜಪೂತ ಹಾಗೂ ವಿಜಯ ಜಾಗೃತ ಎಂಬಾತರನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಕೊಲೆ ಮಾಡಿದ್ದು ಏಕೆ?
ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದ ರಾಜು ದೊಡ್ಡಬೊಮ್ಮನವರ ಮೊದಲ ಮದುವೆ ಹಾಗೂ ಮೂರನೇ ಮದುವೆ ಆಗಿರುವ ಬಗ್ಗೆ ಎರಡನೇ ಹೆಂಡತಿ ಕಿರಣಗೆ ಹೇಳದೇ ಬಚ್ಚಿಟ್ಟಿದ್ದನು. ಮೊದಲ ಹೆಂಡತಿ ಇದ್ದರೂ ಎರಡನೇ ಮದುವೆ ಆಗಿರುವ ಬಗ್ಗೆ ಕಿರಣಗೆ ಸಿಟ್ಟಿತ್ತು. ನಂತರದಲ್ಲಿ ರಾಜು, ದೀಪಾ ಎಂಬವರೊಂದಿಗೆ ಮೂರನೇ ಮದುವೆಯನ್ನೂ ಮಾಡಿಕೊಂಡಿದ್ದನು. ಇದರಿಂದ ಕಿರಣ ನೊಂದಿದ್ದಳು. ಆಗ ಕಿರಣ ತನ್ನ ಪರಿಚಯಸ್ಥರಿಗೆ ಈ ವಿಷಯ ತಿಳಿಸಿದ್ದಳು. ಜತೆಗೆ ಸಂಜಯ ರಜಪೂತ ಎಂಬಾತನೊಂದಿಗೆ ಕಿರಣ ಸಲುಗೆಯಿಂದ ಇದ್ದಿದ್ದು ರಾಜುಗೆ ಆಗಿ ಬರುತ್ತಿರಲಿಲ್ಲ. ಈ ಬಗ್ಗೆ ಕಿರಣನೊಂದಿಗೆ ರಾಜು ಆಗಾಗ ಜಗಳವಾಡುತ್ತಿದ್ದನು ಎಂದು ತಿಳಿದು ಬಂದಿದೆ.
10 ಲಕ್ಷ ರೂ. ಸುಪಾರಿ
ಎರಡನೇ ಹೆಂಡತಿ ಕಿರಣನೊಂದಿಗೆ ರಾಜು ಆಗಾಗ ಜಗಳ ಮಾಡುತ್ತಿದ್ದನು. ಈಕೆಯನ್ನು ಬಿಟ್ಟು ಮಂಡೋಳಿ ರಸ್ತೆಯಲ್ಲಿರುವ ಭವಾನಿ ನಗರದ ಸಂಸ್ಕೃತ ಅಪಾರ್ಟಮೆಂಟ್ ನಲ್ಲಿ ಇರುತ್ತಿದ್ದನು. ಕೆಲ ತಿಂಗಳಿಂದ ರಾಜುನನ್ನು ಕೊಲೆ ಮಾಡಲು ಕಿರಣ ಪ್ಲ್ಯಾನ್ ಮಾಡಿಕೊಂಡಿದ್ದಳು. ಹೀಗಾಗಿ ಪ್ರಮುಖ ಆರೋಪಿ ಸಂಜಯ ರಜಪೂತನಿಗೆ 10 ಲಕ್ಷ ರೂ. ಸುಪಾರಿ ಕೊಟ್ಟಿದ್ದಳು. ಅದರಂತೆ ಮೊದಲು 5 ಲಕ್ಷ ರೂ. ನಂತರ 5 ಲಕ್ಷ ರೂ. ಹಣ ಕೊಟ್ಟು ತನ್ನ ಗಂಡನನ್ನು ಕೊಲೆ ಮಾಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಮಂಡೋಳಿ ರಸ್ತೆಯ ಭವಾನಿ ನಗರದ ಸಂಸ್ಕೃತ ಅಪಾರ್ಟಮೆಂಟ್‌ನ ಬಾಡಿಗೆ ಮನೆಯಲ್ಲಿದ್ದ ರಾಜು ಮಲ್ಲಪ್ಪ ದೊಡ್ಡಬೊಮ್ಮನ್ನವರ(41) ಎಂಬಾತನ ಕಣ್ಣಿಗೆ ಖಾರದ ಪುಡಿ ಎರಚಿ ಮಾ. 15ರಂದು ಬೆಳಗ್ಗೆ 6:30ರ ಸುಮಾರಿಗೆ ಹತ್ಯೆ ಮಾಡಲಾಗಿತ್ತು. ಆಸ್ಪತ್ರೆಯಲ್ಲಿದ್ದ ಮೂರನೇ ಪತ್ನಿಯನ್ನು ನೋಡಲು ಕಾರಿನಲ್ಲಿ ತೆರಳುತ್ತಿದ್ದಾಗ ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಲಾಗಿತ್ತು. ರಕ್ತದ ಮಡವಿನಲ್ಲಿ ಬಿದ್ದು ಸ್ಥಳದಲ್ಲಿಯೇ ರಾಜು ಮೃತಪಟ್ಟಿದ್ದನು. ಪತ್ನಿ ದೀಪಾ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿದ್ದರು. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಕೊಲೆಯಾದ ನಾಲ್ಕೈದು ದಿನಗಳಲ್ಲಿಯೇ ಹಂತಕರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಬಾಗಲಕೋಟೆ : ಉರುಸ್ನಲ್ಲಿ ಪ್ರಸಾದ ಸೇವಿಸಿ 48 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ಗುಡಾಜಿ, ಇನ್ಸಪೆಕ್ಟರ್ ಸುನೀಲಕುಮಾರ ಹಾಗೂ ಪೊಲೀಸರ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ರಾಜು ದೊಡ್ಡಬೊಮ್ಮನ್ನವರ ಕೆಲವು ವರ್ಷಗಳಿಂದ ರಿಯಲ್ ಎಸ್ಟೇಟ್ ಹಾಗೂ ಬಿಲ್ಡರ್ ಉದ್ಯೋಗದಲ್ಲಿ ತೊಡಗಿಕೊಂಡಿದ್ದನು. ಕೆಲವು ಕಡೆಗೆ ಮನೆ ಕಟ್ಟಿಸಿ ಕೊಡುತ್ತಿದ್ದನು. ಇದರಲ್ಲಿ ಹಲವಾರು ಮನೆಗಳು ಅರ್ಧಂಬರ್ಧ ಆಗಿವೆ. ಗ್ರಾಹಕರು ರಾಜುನ ಬಗ್ಗೆ ಅಸಮಾಧಾನ ಹೊಂದಿದ್ದರು. ಇನ್ನೂ ಕೆಲವರಿಂದ ಹಣ ಪಡೆದು ಜಾಗ ನೀಡುವುದಾಗಿ ಭರವಸೆ ನೀಡಿದ್ದನು. ಆದರೆ ಅನೇಕರಿಗೆ ಜಾಗ ನೀಡಿರಲಿಲ್ಲ ಎಂಬ ಆರೋಪವೂ ರಾಜು ಮೇಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ
Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು
World Rapid Chess: ಕಡೆಗೂ ಅರ್ಜುನ್ ಎರಿಗೈಸಿಗೆ ಅಮೆರಿಕ ವೀಸಾ
Women’s ODI: ಹರ್ಲೀನ್ ಶತಕ; ವಿಂಡೀಸ್ ವಿರುದ್ಧ ಭಾರತಕ್ಕೆ 2-0 ಸರಣಿ ಜಯ
Udupi: ʼಭಾರತೀಯ ಸಂಸ್ಕೃತಿ, ಭಗವದ್ಗೀತೆʼ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.