ಯುದ್ಧ ಪರಿಕರ ಬಳಸಿದ ಪ್ರಥಮ ಮಹಿಳೆ ರಾಣಿ ಚನ್ನಮ್ಮ: ಖ್ಯಾತ ವಿದ್ವಾಂಸ ಬಾಳಣ್ಣ
ಸಂಸ್ಕೃತಿ ಉಳಿವಿಗಾಗಿ ಕಿತ್ತೂರು ಚೌಕಿಮಠದ ಅಭಿವೃದ್ಧಿಯಾಗಬೇಕು
Team Udayavani, Oct 26, 2024, 5:04 PM IST
ಉದಯವಾಣಿ ಸಮಾಚಾರ
ಚನ್ನಮ್ಮನ ಕಿತ್ತೂರು: ಮಕ್ಕಳನ್ನು ಮತ್ತು ಯುವಕರನ್ನು ಇಂತಹ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ತೊಡಗಿಸಿಕೊಂಡು
ಕಾಯಕ್ರಮಗಳನ್ನು ಮಾಡಬೇಕು. ಇದರಿಂದ ಅವರಲ್ಲಿ ಇತಿಹಾಸ ಪ್ರಜ್ಞೆ, ದೇಶಾಭಿಮಾನ ಬೆಳೆಯುತ್ತದೆ ಶಾಸಕ ಬಾಬಾಸಾಹೇಬ
ಪಾಟೀಲ ಹೇಳಿದರು.
ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮಾಜಿಯ 200ನೇ ವಿಜಯೋತ್ಸವದ ಸಂಭ್ರಮಾಚಾರಣೆಯ ಕಿತ್ತೂರು ಉತ್ಸವದ ಅಂಗವಾಗಿ “ಕಿತ್ತೂರು ರಾಣಿ ಸಂಸ್ಥಾನ’ದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧಕ ಡಾ| ಸಂತೋಷ ಹಾನಗಲ್ಲ ಆಶಯ ನುಡಿಗಳನ್ನಾಡಿ, ಕೆಲವರು ರಾಣಿ ಚನ್ನಮ್ಮಳನ್ನು ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸುತ್ತಿದ್ದಾರೆ. ಇಂತಹ ಆಲೋಚನೆಗಳನ್ನು ಕೈಬಿಡಬೇಕು ಎಂದರು. ದೂರದ ವಿಜಯಪುರದಲ್ಲಿರುವ ರಾಣಿ
ಚನ್ನಮ್ಮ ಅಧ್ಯಯನ ಪೀಠವನ್ನು ಕಿತ್ತೂರು ನಾಡಿಗೆ ಸ್ಥಳಾಂತರಿಸಿದರೆ, ಕಿತ್ತೂರು ಇತಿಹಾಸವನ್ನು ಮತ್ತಷ್ಟು ಹೆಕ್ಕಿ ತೆಗೆಯಲು
ಅನುಕೂಲವಾಗುವುದು ಎಂದು ಹೇಳಿದರು.
ರಾಣಿ ಚನ್ನಮ್ಮಳ ತವರೂರು ಕಾಕತಿಯಲ್ಲಿ ಇರುವ ಮನೆ ಸಂಪೂರ್ಣ ಹಾಳಾಗಿದ್ದು, ಅದನ್ನು ಅಭಿವೃದ್ಧಿ ಮಾಡುವ ಕಾರ್ಯ
ತ್ವರಿತವಾಗಿ ಪ್ರಾರಂಭವಾಗಬೇಕು ಎಂದ ಅವರು, ಗುರು ಸಂಸ್ಕೃತಿ ಉಳಿವಿಗಾಗಿ ಕಿತ್ತೂರು ಚೌಕಿಮಠದ ಅಭಿವೃದ್ಧಿಯಾಗಬೇಕು
ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಶಿಕ್ಷಣ ಇಲಾಖೆ ನಿವೃತ್ತ ಸಹ ನಿರ್ದೇಶಕ ಗಜಾನನ ಮನ್ನಿಕೇರಿ ಮಾತನಾಡಿ, ಇಡೀ ದೇಶಕ್ಕೆ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು
ಹಚ್ಚಿದ ಪ್ರಥಮ ಮಹಿಳೆ ರಾಣಿ ಚನ್ನಮ್ಮ ಎಂದ ಅವರು, ಆಧಾರ ಸಹಿತ ಸಂಶೋಧನೆ ಮಾಡಿದ ಇತಿಹಾಸಕಾರರಿಗೆ ಗೌರವ
ಸೂಚಿಸುವ ಕೆಲಸವಾಗಬೇಕು ಎಂದರು.
ಖ್ಯಾತ ವಿದ್ವಾಂಸರು ಬಾಳಣ್ಣ ಶೀಗಿಹಳ್ಳಿ ಮಾತನಾಡಿ, ಕಿತ್ತೂರಿಗೆ 239 ವರ್ಷಗಳ ಇತಿಹಾಸವಿದೆ. ನಮ್ಮ ಕಿತ್ತೂರು ಸಂಸ್ಥಾನಕ್ಕೆ
ಇರುವ ಸೌಭಾಗ್ಯ ಇಡೀ ದೇಶದಲ್ಲಿ ಬೇರೆ ಯಾವ ಸಂಸ್ಥಾನ ಇಲ್ಲ. ಕಿತ್ತೂರು ರಾಣಿ ಚನ್ನಮ್ಮ ಯುದ್ದ ಪರಿಕರಗಳನ್ನು ಬಳಸಿದ
ಪ್ರಥಮ ಭಾರತದ ಮಹಿಳೆ ಎಂದು ಹೇಳಿದರು.
ಸಾಹಿತಿ ಸಿ.ಕೆ.ಜೋರಾಪೂರ ಮಾತನಾಡಿ, ಒಂದು ಸಣ್ಣ ಸಂಸ್ಥಾನ ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಬೀಗುತ್ತಿದ್ದ ಬ್ರಿಟಿಷರನ್ನು ಸೋಲಿಸಿ, ಅವರಲ್ಲಿ ನಡುಕ ಹುಟ್ಟಿಸುವಂತೆ ಮಾಡಿ, ಸ್ವಾತಂತ್ರ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದದವಳು ರಾಣಿ ಚನ್ನಮ್ಮ. ಕಿತ್ತೂರು ಮಾತ್ರ ಭೂಮಿಯಾಗಿದೆ ಎಂದರು.
ಸಾಹಿತಿ ರಾಜಶೇಖರ ಕೋಟಿ ಮಾತನಾಡಿ, ಎಷ್ಟೇ ದೊಡ್ಡ ರಾಜನಿರಲಿ, ಸಾಮ್ರಾಜ್ಯವೇ ಇರಲಿ ಅವರೆಲ್ಲರಿಗೂ ಒಬ್ಬ ಗುರುಗಳು
ಇರುತ್ತಿದ್ದರು. ಅದೇ ರೀತಿ ಕಿತ್ತೂರು ಸಂಸ್ಥಾನಕ್ಕೆ ರಾಜಗುರುಗಳು ಇದ್ದರು. 1782ರಲ್ಲಿ ಮಲ್ಲಸರ್ಜ ದೇಸಾಯಿ ಕಿತ್ತೂರು ಸಂಸ್ಥಾನ
ಪೀಠವನ್ನು ಅಲಂಕರಿಸುತ್ತಾನೆ. ಅವರ ಕಾಲದಲ್ಲಿಯೇ ಮುದಿ ಮಡಿವಾಳ ಶಿವಯೋಗಿಗಳು ಕಿತ್ತೂರು ಸಂಸ್ಥಾನದ ರಾಜಗುರುಗಳಾಗಿ ರಾಜ ಮಲ್ಲಸರ್ಜನಿಗೆ ಮಾರ್ಗದರ್ಶನ ಮಾಡುತ್ತಾರೆ ಎಂದು ತಿಳಿಸಿದರು.
ಶಿಕ್ಷಣ ತಜ್ಞೆ ಡಾ| ವೀಣಾ ಬಿರಾದಾರ ಮಾತನಾಡಿ, ಕಿತ್ತೂರು ಚನ್ನಮ್ಮಳ ದೇಶಾಭಿಮಾನ ಅನನ್ಯ. ದೇಶದಲ್ಲಿ ಅನೇಕ
ರಾಜಮನೆತನಗಳು ಆಳ್ವಿಕೆ ಮಾಡಿದ್ದು, ಕಿತ್ತೂರು ಸಂಸ್ಥಾನ ದೇಶದ ಎಲ್ಲ ಮನೆತನಗಳಿಗಿಂತ ಭಿನ್ನವಾಗಿ ಆಳ್ವಿಕೆ ಮಾಡಿತ್ತು
ಎಂದರು.
ಈ ವೇಳೆ ರಾಜಶೇಖರ ಕೋಟಿ ವಿರಚಿತ “ಪವಾಡ ಪುರುಷ ಶ್ರೀ ಮಡಿವಾಳೇಶ್ವರ ಚರಿತ್ರೆ’ ಹಾಗೂ ಡಾ| ಸಿ.ಕೆ.ಜೋರಾಪೂರ ಅವರು ರಚಿಸಿದ “ಕರ್ನಾಟಕ ಇತಿಹಾಸ ಒಂದು ಇಣುಕು ನೋಟ’ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.