![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Aug 31, 2019, 10:50 AM IST
ಅಥಣಿ: ಪ್ರವಾಹ ಹೊಡೆತಕ್ಕೆ ಹಾಳಾದ ಪುಸ್ತಕಗಳು.
ಅಥಣಿ: ಕೃಷ್ಣಾ ನದಿ ಪ್ರವಾಹ ಕಡಿಮೆಯಾದರೂ ನೆರೆ ಸಂತ್ರಸ್ತರ ಬದುಕಿನ ಸಂಕಷ್ಟಗಳು ಸರಿಯದೆ ದಿನ ದಿನಕ್ಕೆ ಹೆಚ್ಚುತ್ತಾ ಸಂತ್ರಸ್ತರು ಬದುಕು ದುಸ್ತರವಾಗುತ್ತಿದೆ.
ಒಂದೆಡೆ ಅಥಣಿ ತಾಲೂಕಿನ ಸೌವದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆ ಪ್ರವಾಹಕ್ಕೆಡಾಗಿ ಶಾಲೆಯಲ್ಲಿರುವ ಎಲ್ಲ ಪಠ್ಯ ಪುಸ್ತಕಗಳು ನೀರಿನಲ್ಲಿ ನೆನೆದು ಹೋಗಿವೆ. ಇನ್ನೊಂದೆಡೆ ಪ್ರವಾಹದಿಂದ ತಾಲೂಕಿನ 24 ಗ್ರಾಮಗಳ ಜನತೆ ತಮಗಾದ ಅನಾಹುತದಿಂದ ಸಂತ್ರಸ್ತರ ಕಣ್ಣೀರು ಇನ್ನು ನಿಲ್ಲುತ್ತಿಲ್ಲ. ನೆರೆ ಹಾವಳಿಗೆ ಒಳಗಾದವರು ತಮ್ಮ ಗ್ರಾಮಗಳಿಗೆ ಮರಳಿ ವಾಪಸ್ ಬಂದಾಗ ಅಲ್ಲಿನ ಮನೆಗಳು ಸಂಪೂರ್ಣ ಕುಸಿದು ಅದರಲ್ಲಿ ಉಳಿದ ಮನೆಗಳು ಶಿಥಿಲಾವಸ್ಥೆ ತಲುಪಿ ನಾಗರಿಕರ ಬದುಕು ಬೀದಿಗೆ ಬಂದಿರುವುದು ದುರಂತವಾಗಿದೆ. ಶಾಲೆಗಳ ಕಟ್ಟಡ ಶಿಥಿಲಾವಸ್ಥೆ: ನೆರೆ ಪೀಡಿತ ಶಾಲೆಗಳ ಬಹುತೇಕ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಅವುಗಳಲ್ಲಿ ತರಗತಿ ನಡೆಸಲು ಸಂಬಂಧಪಟ್ಟ ಕಟ್ಟಡ ತಾಂತ್ರಿಕ ಸಲಹೆಗಾರರ ಸಲಹೆಯ ಜೊತೆಗೆ ಕಟ್ಟಡಗಳು ದಿನದಿಂದ ದಿನಕ್ಕೆ ಕುಸಿಯುತ್ತಾ ಸಾಗಿದ್ದು, ಅವುಗಳ ಗುಣಮಟ್ಟದ ಬಗೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕ ಸಮೂಹ ಮೇಲಿಂದ ಮೇಲೆ ನಿಗಾ ವಹಿಸಿ ಜಾಗೃತಿಯಿಂದ ಮರು ತರಗತಿ ನಡೆಸಬೇಕು ಎಂದು ಪ್ರಜ್ಞಾವಂತರೂ ಒತ್ತಾಯಿಸಿದ್ದಾರೆ.ಪ್ರವಾಹಕ್ಕೆ ಒಳಗಾದ ಯಾವುದೇ ಗ್ರಾಮಗಳಿಗೆ ಕಾಲಿಟ್ಟರೆ ಸಾಕು ಮುಖಕ್ಕೆ ಕೆಟ್ಟ ವಾಸನೆ ಬಡೆಯುತ್ತಿದೆ. ಇಂತ ಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆ ಮತ್ತು ಪಶು ಸಂಗೋಪನಾ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯ ಮಾಡಿದಾಗ ಮಾತ್ರ ಜನರಿಗೆ ಹಾಗೂ ದನ ಕರುಗಳಿಗೆ ಬರತಕ್ಕಂತ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಾಧ್ಯ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
•ವಿಜಯಕುಮಾರ ಅಡಹಳ್ಳಿ
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.