ಕೃಷ್ಣಾ- ಪಂಚಗಂಗಾ ನದಿಗಳ ಸಂಗಮ ಕ್ಷೇತ್ರದ ಸುಕ್ಷೇತ್ರ ನರಸಿಂಹವಾಡಿ ಶ್ರೀ ದತ್ತಮಂದಿರ ಜಲಾವೃತ

ಆಷಾಢ ಏಕಾದಶಿ ದರ್ಶನಕ್ಕೆ ಪರದಾಡುತ್ತಿರುವ ಭಕ್ತರು

Team Udayavani, Jul 17, 2024, 5:33 PM IST

9–chikkodi

ಚಿಕ್ಕೋಡಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಕೃಷ್ಣಾ ಮತ್ತು ಪಂಚಗಂಗಾ ನದಿ ನೀರಿನ ಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಇದರಿಂದ ಗಡಿಭಾಗದ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಶಿರೋಳ ತಾಲೂಕಿನ ಸುಕ್ಷೇತ್ರ ನರಸಿಂಹವಾಡಿ ಶ್ರೀ ದತ್ತ ಮಂದಿರ ಜಲಾವೃತಗೊಂಡಿದೆ.

ಕೃಷ್ಣಾ ನದಿ ಮತ್ತು ಪಂಚಗಂಗಾ ನದಿ ಸಂಗಮ ಕ್ಷೇತ್ರವಾದ ನರಸಿಂಹವಾಡಿ ಶ್ರೀ ದತ್ತ ದೇವಸ್ಥಾನಕ್ಕೆ ಮಂಗಳವಾರ ನೀರು ನುಗ್ಗಿದೆ. ದೇವವಸ್ಥಾನ ಅರ್ಧ ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಹೀಗಾಗಿ ದೇವಸ್ಥಾನ ಅರ್ಚಕರು ನೀರಿನಲ್ಲಿ ಶ್ರೀ ದತ್ತನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಬೇರೆ ಕಡೆ ಸ್ಥಳಾಂತರಿಸಿದರು.

ಮಹಾರಾಷ್ಟ್ರ, ಕರ್ನಾಟಕ ಮತ್ತು ನೆರೆಯ ಗೋವಾ ರಾಜ್ಯದಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ದತ್ತನ ದರ್ಶನ ಪಡೆಯಲು ಆಗಮೀಸುತ್ತಾರೆ. ಆದರೆ ಮಂಗಳವಾರ ದೇವಸ್ಥಾನ ಮುಳುಗಡೆ ಆಗಿರುವುದರಿಂದ ದರ್ಶನ ಮಾಡಲು ಭಕ್ತರು ಪರದಾಡಿದರು.

ಮಧ್ಯಾಹ್ನದ ನಂತರ ಶ್ರೀ ದತ್ತನ ಮೂರ್ತಿಯನ್ನು ಅರ್ಚಕರು ಸುರಕ್ಷಿತ ಸ್ಥಳಕ್ಕೆ ಪ್ರತಿಷ್ಠಾಪನೆ ಮಾಡಿ ಭಕ್ತರ ದರ್ಶನಕ್ಕೆ ಅನುಕೂಲ ಕಲ್ಪಿಸಿದರು.

ಮಹಾರಾಷ್ಟ್ರದ ಕೊಂಕಣ ಭಾಗದ  ಮಹಾಬಳೇಶ್ವರ, ಕೋಯ್ನಾ, ನವಜಾ ಹಾಗೂ ಕಾಳಮ್ಮವಾಡಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿದಿದೆ. ರಾಜ್ಯದ ಕೃಷ್ಣಾ, ದೂಧಗಂಗಾ ಮತ್ತು ವೇಧಗಂಗಾ ನದಿ ನೀರಿನ ಮಟ್ಟದಲ್ಲಿ ಭಾರಿ ಏರಿಕೆ ಕಂಡಿದೆ. ಚಿಕ್ಕೋಡಿ ಉಪವಿಭಾಗದ ಕೆಳಹಂತದ ಐದು ಸೇತುವೆ ಜಲಾವೃತಗೊಂಡು ಸಂಚಾರ ಕಡಿತವಾಗಿವೆ.

ಕೃಷ್ಣಾ ನದಿಗೆ ಮಹಾರಾಷ್ಟçದಿಂದ ಅಧಿಕ ನೀರು ಹರಿದು ಬರಲಾರಂಭಿಸಿದೆ. ಒಂದೇ ದಿನ ಕೃಷ್ಣಾ ನದಿ ಮೂರು ಅಡಿಯಷ್ಟು ನೀರು ಹೆಚ್ಚಳವಾಗಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.  ದೂಧಗಂಗಾ ಮತ್ತು ವೇಧಗಂಗಾ ನದಿಯೂ ಕೂಡಾ ಅಪಾಯ ಮಟ್ಟ ಹರಿಯುತ್ತಿದೆ.

ದೂಧಗಂಗಾ ನದಿಯ  ಚಿಕ್ಕೋಡಿ ತಾಲೂಕಿನ ಮಲಿಕವಾಡ-ದತ್ತವಾಡ, ನಿಪ್ಪಾಣಿ ತಾಲೂಕಿನ ಕಾರದಗಾ-ಭೋಜ, ವೇಧಗಂಗಾ ನದಿಯ ಬಾರವಾಡ-ಕುನ್ನೂರ, ಭೋಜವಾಡಿ-ಕುನ್ನೂರ, ಕೃಷ್ಣಾ ನದಿಯ ಮಾಂಜರಿ-ಬಾ.ಸವದತ್ತಿ ಸೇತುವೆ ಜಲಾವೃತಗೊಂಡಿವೆ. ರ‍್ಯಾಯ ರಸ್ತೆ ಇರುವುದರಿಂದ ಪ್ರಯಾಣಿಕರು ಸುತ್ತುಬಳಿಸಿ ಪ್ರಯಾಣ ಮಾಡುತ್ತಿದ್ದಾರೆ.

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜದಿಂದ ಕೃಷ್ಣಾ ನದಿಗೆ 60 ಸಾವಿರ ಅಧಿಕ ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ.

ಟಾಪ್ ನ್ಯೂಸ್

Police

Udupi: ಕರ್ತವ್ಯಲೋಪ: 80 ಪೊಲೀಸ್‌ ಸಿಬಂದಿ ಅಮಾನತು; ಎಸ್‌ಪಿ ಕಟ್ಟುನಿಟ್ಟಿನ ಕ್ರಮ

Mang-Murder

Mangaluru: ಶ್ರೀಮತಿ ಶೆಟ್ಟಿ ಕೊ* ಪ್ರಕರಣ: ಮೂವರ ಅಪರಾಧ ಸಾಬೀತು

Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು

Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು

Kota-Poojari

Officers Meeting: ವಸತಿ ಯೋಜನೆ ಫ‌ಲಾನುಭವಿಗಳಿಗೆ ಶೀಘ್ರ ಅನುದಾನ: ಸಂಸದ ಕೋಟ ಸೂಚನೆ

1-Horoscope

Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ

Kolila

Uppinangady: ಮುಂದಿನ ಸೆಪ್ಟಂಬರ್‌ನಲ್ಲಿ ಕೊಯಿಲ ಪಶುವೈದ್ಯಕೀಯ ಕಾಲೇಜು ಪ್ರಾರಂಭ

Perduru-Highway

Highway Work: ಪೆರ್ಡೂರಿನಲ್ಲಿ ಪರ್ಯಾಯ ಸಾಧ್ಯತೆ ಪರಿಶೀಲಿಸಲು ಹೈಕೋರ್ಟ್‌ ಸಲಹೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‌Belagavi: ಕಾಂಗ್ರೆಸ್‌ ನ ಅಲ್ಪಸಂಖ್ಯಾತ ತುಷ್ಟೀಕರಣದಿಂದ ರಾಜ್ಯದಲ್ಲಿ ಗಲಭೆ: ಶೆಟ್ಟರ್

‌Belagavi: ಕಾಂಗ್ರೆಸ್‌ ನ ಅಲ್ಪಸಂಖ್ಯಾತ ತುಷ್ಟೀಕರಣದಿಂದ ರಾಜ್ಯದಲ್ಲಿ ಗಲಭೆ: ಶೆಟ್ಟರ್

Belagavi: ರಾಜ್ಯ ಗೃಹ ಇಲಾಖೆಯು ಎಸ್ ಡಿಪಿಐ ಕಪಿಮುಷ್ಠಿಯಲ್ಲಿ ಸಿಲುಕಿದೆ: ಸುನೀಲ್‌ ಕುಮಾರ್‌

Belagavi: ರಾಜ್ಯ ಗೃಹ ಇಲಾಖೆಯು ಎಸ್ ಡಿಪಿಐ ಕಪಿಮುಷ್ಠಿಯಲ್ಲಿ ಸಿಲುಕಿದೆ: ಸುನೀಲ್‌ ಕುಮಾರ್‌

ವಂದೇ ಭಾರತ್‌ಗೆ ಬೆಳಗಾವಿ ಜನರ ಅಸಮಾಧಾನ-ಪುಣೆಯಿಂದ ಹುಬ್ಬಳ್ಳಿಗೆ ಹೊಸ ರೈಲು

ವಂದೇ ಭಾರತ್‌ಗೆ ಬೆಳಗಾವಿ ಜನರ ಅಸಮಾಧಾನ-ಪುಣೆಯಿಂದ ಹುಬ್ಬಳ್ಳಿಗೆ ಹೊಸ ರೈಲು

ಕಬ್ಬೂರ ಪಟ್ಟಣದಲ್ಲಿ ಧಾರುಣ ಘಟನೆ; ಬಾಲಕಿ ಮೃತ್ಯು

Chikodi: ಜೆಸಿಬಿಗೆ ಸಿಲುಕಿ ಮೂರು ವರ್ಷದ ಬಾಲಕಿ ದಾರುಣ ಮೃತ್ಯು

ಸರ್ಕಾರಿ ಶಾಲೆ ಅಭಿವೃದ್ಧಿಗೆ ದಾನಿಗಳು ಮುಖ್ಯ: ಸಚಿವ ಮಧು ಬಂಗಾರಪ್ಪ

ಸರ್ಕಾರಿ ಶಾಲೆ ಅಭಿವೃದ್ಧಿಗೆ ದಾನಿಗಳು ಮುಖ್ಯ: ಸಚಿವ ಮಧು ಬಂಗಾರಪ್ಪ

MUST WATCH

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

ಹೊಸ ಸೇರ್ಪಡೆ

Police

Udupi: ಕರ್ತವ್ಯಲೋಪ: 80 ಪೊಲೀಸ್‌ ಸಿಬಂದಿ ಅಮಾನತು; ಎಸ್‌ಪಿ ಕಟ್ಟುನಿಟ್ಟಿನ ಕ್ರಮ

Mang-Murder

Mangaluru: ಶ್ರೀಮತಿ ಶೆಟ್ಟಿ ಕೊ* ಪ್ರಕರಣ: ಮೂವರ ಅಪರಾಧ ಸಾಬೀತು

Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು

Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು

Kota-Poojari

Officers Meeting: ವಸತಿ ಯೋಜನೆ ಫ‌ಲಾನುಭವಿಗಳಿಗೆ ಶೀಘ್ರ ಅನುದಾನ: ಸಂಸದ ಕೋಟ ಸೂಚನೆ

1-Horoscope

Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.