ರಸ್ತೆ ಸಂಚಾರಿ ನಿಯಮ ಪಾಲಿಸಿ: ಮುರನಾಳ
Team Udayavani, Nov 28, 2020, 2:46 PM IST
ಮೂಡಲಗಿ: ರಸ್ತೆ ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವ ಮೂಲಕ ಅಪಘಾತಗಳಿಂದ ಮುಕ್ತರಾಗಬೇಕು ಎಂದು ಸಿಪಿಐ ವೆಂಕಟೇಶ ಮುರನಾಳ ಹೇಳಿದರು.
ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ರಸ್ತೆ ಸುರಕ್ಷಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಾಹನ ಚಲಾಯಿಸುವಾಗ ತಾಳ್ಮೆ ಮತ್ತು ಜವಾಬ್ದಾರಿ ಇರಬೇಕು ಎಂದರು.
ಪ್ರತಿ ವರ್ಷ ದೇಶದಲ್ಲಿ ವಾಹನ ಅಪಘಾತಗಲ್ಲಿ 1.5 ಲಕ್ಷ ಜನರು ಸಾವನ್ನಪ್ಪುತ್ತಿದ್ದು, ಅದರಲ್ಲಿ ಯುವಕರಪ್ರಮಾಣ ಅ ಕವಾಗಿದೆ. ಮೊಬೈಲ್ ಬಳಕೆ, ಮದ್ಯ ಸೇವನೆ, ವಾಹನ ಚಲಾಯಿಸುವಾಗ ಸಂಭಾಷಣೆ ಮತ್ತು ರಸ್ತೆ ಚಿನ್ಹೆಗಳನ್ನು ಪಾಲಿಸಿದೆ ಇರುವುದು ಆಗಿದೆ ಎಂದರು. ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ ಮಾತನಾಡಿ, ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ ಅಪಘಾರ ರಹಿತ ಸಮಾಜವನ್ನು ನಿರ್ಮಿಸಲು ಮುಂದಾಗಬೇಕು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಪುಲಕೇಶಿ ಸೋನವಾಲಕರ ಮಾತನಾಡಿ, ರಸ್ತೆ ಸರಕ್ಷತಾ ಅಭಿಯಾನದ ಉದ್ದೇಶ ಜನರಲ್ಲಿ ಮತ್ತು ವಾಹನ ಚಾಲಕರಲ್ಲಿ ಸಂಚಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಎಂದರು.
ನೂರಕ್ಕೂ ಅಧಿಕ ವಾಹನಗಳ ಹಿಂಬದಿಗೆ ರೇಡಿಯಂ ಪಟ್ಟಿ ಅಂಟಿಸಿ, ವಾಹನ ಚಾಲಕರಿಗೆಸಂಚಾರ ಜಾಗೃತಿ ಮೂಡಿಸಲಾಯಿತು. ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ವೆಂಕಟೇಶಸೋನವಾಲಕರ, ಲಯನ್ಸ್ ಡಿಸಿಗಳಾದ ಶ್ರೀಶೈಲ ಲೋಕನ್ನವರ, ಈರಣ್ಣ ಕೊಣ್ಣೂರ, ಮಲ್ಲಿನಾಥ ಶೆಟ್ಟಿ,ಸಂಜಯ ಮೋಕಾಸಿ, ಸಂಜಯ ಮಂದ್ರೋಳಿ, ಡಾ|ಎಸ್.ಎಸ್. ಪಾಟೀಲ, ಡಾ| ಪ್ರಕಾಶ ನಿಡಗುಂದಿ, ಡಾ| ಸಂಜಯ ಶಿಂ ಹಟ್ಟಿ, ಶಿವಾನಂದ ಕಿತ್ತೂರ, ವೆಂಕಟೇಶ ಪಾಟೀಲ, ಗಿರೀಶ ಆಸಂಗಿ, ಸಂದೀಪ ಸೋನವಾಲಕರ, ಮಹಾವೀರ ಸಲ್ಲಾಗೋಳ, ಸೋಮಶೇಖರ ಹಿರೇಮಠ, ವಿಶಾಲ ಶೀಲವಂತ, ಸುಪ್ರೀತ ಸೋನವಾಲಕರ, ಶಿವಬೋಧ ಯರಝರವಿ, ಪ್ರಮೋದ ಪಾಟೀಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.