ಮಾಜಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ನಿಧನ
Team Udayavani, May 17, 2019, 11:07 PM IST
ಬೆಳಗಾವಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಹಿಂದಿನ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಸಂಭಾಜಿ ಪಾಟೀಲ 1990 ರಲ್ಲಿ ಮಹಾಪೌರರಾಗಿದ್ದಾಗ ಹಿಡಕಲ್ ಜಲಾಶಯದಿಂದ ಬೆಳಗಾವಿಗೆ ನೀರು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆಗ ಮುಖ್ಯಮಂತ್ರಿ ಬಂಗಾರಪ್ಪ ಅವರಿಗೆ ಕೇಸರಿಪೇಟಾ ತೊಡಿಸಿ ಬಹಿರಂಗವಾಗಿ ಸನ್ಮಾನ ಮಾಡಿದ ಮೊದಲ ಎಂಇಎಸ್ ಮಹಾಪೌರ ಹಾಗೂ ನಾಯಕ ಎಂಬ ಕೀರ್ತಿ ಸಂಭಾಜಿ ಅವರದ್ದಾಯಿತು. ಎಂಇಎಸ್ ನಾಯಕರಾಗಿದ್ದರೂ ಕನ್ನಡ ಭಾಷಿಕ ಜನರ ಜೊತೆಗೆ ಒಳ್ಳೆಯ ಸಂಬಂಧ ಹೊಂದಿದ್ದರು ಬೆಳಗಾವಿ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತಿದ್ದ ಸಂಭಾಜಿ ಕನ್ನಡಿಗರ ಜೊತೆ ನಿಂತ ಪರಿಣಾಮ 1991 ರಲ್ಲಿ ಬೆಳಗಾವಿ ಮಹಾನಗರಪಾಲಿಕೆ ಮೊಟ್ಟಮೊದಲ ಕನ್ನಡ ಮೇಯರ್ ಅವರನ್ನು ಕಂಡಿತು. ಆಗ ಎಂಇಎಸ್ ನ ಸಂಭಾಜಿ ಸೇರಿದಂತೆ ಆರು ಜನ ಸದಸ್ಯರ ಬೆಂಬಲದಿಂದ ಸಿದ್ದನಗೌಡ ಪಾಟೀಲ ಮೊದಲ ಕನ್ನಡ ಮೇಯರ್ ಆದರು. ಈ ಮೂಲಕ ಸಂಭಾಜಿ ಬೆಳಗಾವಿ ಯಲ್ಲಿ ಭಾಷಾ ರಾಜಕಾರಣದ ಧ್ರುವೀಕರಣ ಕ್ಕೆ ಕಾರಣರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.