ಬರದಿಂದ ಕಂಗೆಟ್ಟು ಗಣೇಶನನ್ನೇ ಹೂತು ಬಿಟ್ಟ!
Team Udayavani, Sep 12, 2017, 3:44 PM IST
ಚಿಕ್ಕೋಡಿ: ಬರ ಎಷ್ಟರ ಮಟ್ಟಿಗೆ ಜನರನ್ನು ಕಂಗಾಲಾಗಿಸಿದೆ ಎನ್ನುವದಕ್ಕೆ ಈ ಘಟನೆ ಜ್ವಲಂತ
ಸಾಕ್ಷಿ. ಜನರು ಜನಪ್ರತಿನಿಧಿಗಳ ಮೇಲೆ ಮಾತ್ರವಲ್ಲ ದೇವರ ಮೇಲೂ ಆಕ್ರೋಶಗೊಂಡಿರುವುದಕ್ಕೆ ಸಾಕ್ಷಿಯಾಗಿ ಪೂಜೆ ಮಾಡಲಾಗಿದ್ದ ಗಣೇಶನ ಮಣ್ಣಿನ ವಿಗ್ರಹವನ್ನು ನೀರಿನಲ್ಲಿ ಜಲಸ್ತಂಭನ ಮಾಡುವ ಬದಲು ಹೊಂಡ ತೆಗೆದು ಹೂತ ಘಟನೆ ನಡೆದಿದೆ.
ರಾಯಭಾಗ ತಾಲೂಕಿನ ನಸಲಾಪುರದಲ್ಲಿ ಈ ಘಟನೆ ನಡೆದಿದ್ದು ಶಿವಗೌಡ ಪಾಟೀಲ್ ಎಂಬ ರೈತ ಗಣೇಶನನ್ನು ಪೂಜಿಸಿ ಮಳೆಗಾಗಿ ಪ್ರಾರ್ಥಿಸಿದ್ದ. ಮಳೆ ಬರದೆ ಇದ್ದುದರಿಂದ ಕಂಗಾಲಾಗಿ ಹೊಲದಲ್ಲಿ ಹೊಂಡ ತೆಗೆದು ಗಣೇಶನನ್ನು ಹೂತು ಹಾಕಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಗೌಡ ಕಳೆದ 10 ವರ್ಷಗಳಿಂದ ಮಳೆ ಇಲ್ಲ. ಬಾವಿಗಳಲ್ಲಿ ನೀರಿಲ್ಲ.ಹೀಗಾಗಿ ಜನರು ಬಾವಿಗೆ ಹಾಕುವುದು ಬೇಡ ಅಂದರು. ದೇವರಿಗೂ ಗೊತ್ತಾಗಲಿ ಎಂದು ಬೆಳೆ ಹಾಳಾದ ಹೊಲದಲ್ಲಿ ಹೂತು ಹಾಕಿದ್ದೇವೆ ಎಂದು ಹತಾಶರಾಗಿ ನುಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.