ಎಲ್ಲ ಇದ್ದೂ ಇಲ್ಲದಂತಾದ ಎಪಿಎಂಸಿ
ಜಿಲ್ಲೆಯಲ್ಲಿಯೇ ಸುಸಜ್ಜಿತ ಕೃಷಿ ಉತ್ಪನ್ನ ಮಾರುಕಟ್ಟೆ,ವ್ಯಾಪಾರಕ್ಕೆ ರೈತರೇ ಬಾರದಿದ್ದರೆ ಎಲ್ಲವೂ ನಗಣ್ಯ
Team Udayavani, Feb 27, 2021, 4:35 PM IST
ಗೋಕಾಕ: ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ಗೋಕಾಕ ತಾಲೂಕು ತನ್ನದೇಯಾದ ಇತಿಹಾಸವನ್ನು ಹೊಂದಿದೆ. ಬ್ರಿಟಿಷರ್ ಕಾಲದಿಂದಲೂ ಇಲ್ಲಿಯ ವ್ಯಾಪಾರ, ವಹಿವಾಟು ಮುಂಚೂಣಿಯಲ್ಲಿದೆ.
ಇದೇ ಕಾರಣದಿಂದ 1948ರಲ್ಲಿ ಇಲ್ಲಿ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಪ್ರಾರಂಭಿಸಲಾಯಿತು.ಇಲ್ಲಿ ಪ್ರಮುಖವಾಗಿ ಹತ್ತಿ, ಗೋವಿನ ಜೋಳ, ಬೆಲ್ಲ ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳ ಜೊತೆಗೆದನಗಳ ಮಾರುಕಟ್ಟೆಗೂ ಹೆಸರುವಾಸಿಯಾಗಿದೆ.116 ಎಕರೆ ಪ್ರದೇಶ ವಿಸ್ತೀರ್ಣ ಹೊಂದಿರುವ ಈ ಎಪಿಎಮ್‌ಸಿಯಲ್ಲಿ ಸುಮಾರು 200ಕ್ಕೂ ಹೆಚ್ಚು ದಳ್ಳಾಳಿ ಅಂಗಡಿಗಳು ಇದ್ದವು. ಎಪಿಎಮ್‌ಸಿ ಪ್ರಾಂಗಣದಲ್ಲಿ ಸದಾ ಹತ್ತಿ ಅಂಡಿಗೆಗಳು, ಗೋವಿನಜೋಳ ತುಂಬಿದ ಚೀಲ ತುಂಬಿದ ಲಾರಿಗಳು, ಬೆಲ್ಲದ ಸವಾಲ ನಡೆಯುತ್ತಿತ್ತು. ನೂರಾರುಹಮಾಲರು ತಮ್ಮ ಹೊಟ್ಟೆ-ಬಟ್ಟೆಗೆ ಕೊರತೆಯಿಲ್ಲದಂತೆ ಜೀವನ ಸಾಗಿಸುತ್ತಿದ್ದರು.
ಆದರೆ ಇಂದು ಹೆಸರಿಗಷ್ಟೇ 102 ದಳ್ಳಾಳಿ ಅಂಗಡಿಗಳು ಚಾಲ್ತಿಯಲ್ಲಿಯಲ್ಲಿವೆ. 17 ಜಿನ್ನಿಂಗ್‌ಫ್ಯಾಕ್ಟರಿಗಳಲ್ಲಿ 7 ಹಾಗೂ 6 ಅರಳೆ ಪ್ರಸ್ಸಿಂಗ್ ಘಟಕಗಳು ಚಾಲ್ತಿಯಲ್ಲಿವೆ. ಇಲ್ಲಿ ಹತ್ತಿಯಿಂದ ಅರಳೆಯನ್ನು ತೆಗೆದು ಪಕ್ಕದ ತಮಿಳುನಾಡಿನ ಕೊಯುಮುತ್ತೂರ, ಮಹಾರಾಷ್ಟ್ರದ ಮುಂಬೈ, ಇಲ್ಲಿಯ ಫಾಲ್ಸ್ ಮಿಲ್ಲಿಗೆ ಮಾರಾಟ ಮಾಡಲಾಗುತ್ತದೆ. ಇಲ್ಲಿಯ ರಿದ್ದಿ-ಸಿದ್ದಿ ಕಾರ್ಖಾನೆಗೆ ಉಪಯೋಗಿಸುವ ಗೋವಿನಜೋಳ ಬಳಕೆಯಿಂದ ಎಪಿಎಮ್‌ಸಿಗೆ ಸೆಸ್ ಅಧಿ ಕವಾಗಿ ಬರುತಿತ್ತು. ಆದರೆ ಎಪಿಎಮ್‌ಸಿ ನೂತನ ತಿದ್ದುಪಡಿ ಕಾಯ್ದೆಯಿಂದಾಗಿಆದಾಯದಲ್ಲಿ ಭಾರೀ ಇಳಿಮುಖವಾಗಿದೆ.
ಇತ್ತೀಚೆಗೆ ಹೊಸ ತಾಲೂಕು ಆಗಿ ಘೋಷಣೆಯಾದ ಮೂಡಲಗಿ ಪಟ್ಟಣದ ದನಗಳ ಪೇಟೆಯು ಗೋಕಾಕ ಎಪಿಎಮ್‌ಸಿ ವ್ಯಾಪ್ತಿಗೆಬರುತ್ತದೆ. ಇಲ್ಲಿ 41 ಎಕರೆ ವಿಸ್ತೀರ್ಣದಲ್ಲಿರುವದನಗಳ ಪೇಟೆಯು ರಾಜ್ಯದಲ್ಲಿಯೇಹೆಸರುವಾಸಿಯಾಗಿದೆ. ಉಪಮಾರುಕಟ್ಟೆಗಳಾದಯಾದವಾಡ, ಅಂಕಲಗಿ, ಘಟಪ್ರಭಾದಲ್ಲಿಯೂ ದನಗಳ ಮಾರಾಟ-ಖರೀದಿ ಕಾರ್ಯ ನಡೆಯುತ್ತದೆ. 2018-19ನೇ ಸಾಲಿನಲ್ಲಿ 2.02 ಕೋಟಿ ಆದಾಯ ಬಂದಿತ್ತು. 2019-20ನೇ ಸಾಲಿನಲ್ಲಿನೆರೆ ಹಾವಳಿಯಿಂದಾಗಿ ಆದಾಯ 1.89 ಕೋಟಿಗೆ ಕುಸಿಯಿತು.
ಕೋವಿಡ್ ಮಹಾಮಾರಿಯಿಂದಾಗಿ ಪ್ರಸಕ್ತ ಸಾಲಿನ ಜನವರಿವರೆಗೆ ಕೇವಲ 80 ಲಕ್ಷ ರೂ. ಗಳ ಆದಾಯ ಬಂದಿದ್ದು, ಈಗ ಬಂದಿರುವ ನೂತನ ಕಾಯ್ದೆಯಿಂದ ಎಪಿಎಮ್‌ಸಿ ಪ್ರಾಂಗಣದಲ್ಲಿಯ ವ್ಯವಹಾರಕ್ಕೆ ಮಾತ್ರ ಸೆಸ್ ಆಕರಣೆ ಮಾಡಲು ಅವಕಾಶವಿರುವುದರಿಂದ ಹೆಚ್ಚಿನ ಆದಾಯದ ನಿರೀಕ್ಷೆ ಇಲ್ಲ. ಎಪಿಎಮ್‌ಸಿಯಲ್ಲಿ ಮೂಲಭೂತಸೌಲಭ್ಯಗಳಿವೆ. ದನಗಳ ಪೇಟೆಯಲ್ಲಿ ವಿಶ್ರಾಂತಿ ಗೃಹವಿದೆ. ರೈತ ಭವನವಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿದೆ. ಅಲ್ಲದೇ ರೈತರಿಗೆ ತಮ್ಮ ಉತ್ಪನ್ನಗಳನ್ನು ಒಣಗಿಸಲು ಕಟ್ಟೆಗಳಿವೆ. ಸುಮಾರು ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಧಾನ್ಯಗಳ ಕ್ಲೀನಿಂಗ್, ಗ್ರೇಡಿಂಗ್, ಮತ್ತು ಪ್ಯಾಕಿಂಗ್‌ಗಾಗಿ ಯಂತ್ರೋಪಕರಣಗಳಿವೆ. ಹುಡ್ಕೋ ಸಾಲ ಯೋಜನೆಯಡಿ ಹಮಾಲರಿಗೆ 36 ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಎಲ್ಲವೂ ಇದ್ದು ರೈತರೇ ಬರದೇ ಹೋದರೆ ಅವುಗಳು ಹಾಳಾಗುವುದರಲ್ಲಿ ಎರಡು ಮಾತಿಲ್ಲ. ಹಮಾಲರು ಕೂಡಾ ಕೆಲಸವಿಲ್ಲದೇ ಬೀದಿಗೆ ಬಿದ್ದಂತದಾಗಿದೆ.
ವಾಣಿಜ್ಯ ಮಳಿಗೆ ಆಧಾರ: ನೂತನ ಕಾಯ್ದೆಯಿಂದ ಇಲ್ಲಿಯ ಎಪಿಎಮ್‌ಸಿ ಆದಾಯಕ್ಕೆ ಹಿನ್ನಡೆಯಾದರೂ ಆಡಳಿತದ ವೆಚ್ಚಕ್ಕೆ ವಾಣಿಜ್ಯ ಮಳಿಗೆ ಹಾಗೂ ಗೋಡೌನ್ ಗಳು ಆಧಾರವಾಗಿವೆ. ಸುಮಾರು 77 ವಾಣಿಜ್ಯ ಮಳಿಗೆಗಳು ಇದ್ದು ಸರಾಸರಿ ಪ್ರತಿ ತಿಂಗಳು 2.75 ಲಕ್ಷ ರೂ. ಆದಾಯವಿದೆ. ಗೋಕಾಕದಲ್ಲಿ 6 ಗೋಡೌನ್‌ಗಳಿದ್ದು ಅದರಲ್ಲಿ 3 ಮಾತ್ರ ಸುಸ್ಥಿತಿಯಲ್ಲಿವೆ. ಮೂಡಲಗಿಯಲ್ಲಿ 1980ನೇ ಸಾಲಿನ ಎನ್‌ಜಿಆರ್‌ಜಿ ಯೋಜನೆಯಡಿ ನಿರ್ಮಿಸಿದ 2 ಗೋಡೌನ್‌ಗಳುಹಾಳಾಗಿವೆ. ಅವುಗಳು ನಿರ್ಮಾಣವಾದರೆ ಇನ್ನಷ್ಟು ಆದಾಯ ನಿರೀಕ್ಷೆ ಮಾಡಬಹುದು.
ಸಿಬ್ಬಂದಿ ಕೊರತೆ : ಇಲ್ಲಿಯ ಎಪಿಎಮ್‌ಸಿಯಲ್ಲಿ ಕಾರ್ಯನಿರ್ವಹಿಸಲು ಮಂಜೂರಾದ 26ಸಿಬ್ಬಂದಿಗಳಲ್ಲಿ ಕೇವಲ 10 ಜನ ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 16ಜನ ಸಿಬ್ಬಂದಿಯಕೊರತೆ ಇದೆ. ಈ ಮೊದಲು 13 ಜನ ಭದ್ರತಾ, ಗಣಕಯಂತ್ರ ಆಪರೇಟರಗಳು ಇದ್ದರು. ಈಗ 7 ಜನರಿಗೆ ಇಳಿಸಲಾಗಿದೆ.
ಸೌಲಭ್ಯಗಳ ಆಗರ :
ಎಪಿಎಮ್‌ಸಿಯಲ್ಲಿ ಮೂಲಭೂತ ಸೌಲಭ್ಯಗಳಿವೆ. ದನಗಳ ಪೇಟೆಯಲ್ಲಿ ವಿಶ್ರಾಂತಿ ಗೃಹವಿದೆ. ರೈತ ಭವನವಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿದೆ. ಅಲ್ಲದೇ ರೈತರಿಗೆ ತಮ್ಮ ಉತ್ಪನ್ನಗಳನ್ನು ಒಣಗಿಸಲು ಕಟ್ಟೆಗಳಿವೆ. ಸುಮಾರು ಒಂದು ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಿಸಲಾದ ಧಾನ್ಯಗಳಕ್ಲೀನಿಂಗ್, ಗ್ರೇಡಿಂಗ್, ಮತ್ತು ಪ್ಯಾಕಿಂಗ್‌ಗಾಗಿ ಯಂತ್ರೋಪಕರಣಗಳಿವೆ. ಹುಡ್ಕೊ ಸಾಲ ಯೋಜನೆಯಡಿ ಹಮಾಲರಿಗೆ 36 ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಎಲ್ಲವೂ ಇದ್ದು ರೈತರೇ ಬರದೇ ಹೋದರೆ ಅವುಗಳು ಹಾಳಾಗುವುದರಲ್ಲಿ ಎರಡು ಮಾತಿಲ್ಲ.
ಮಾರುಕಟ್ಟೆ ಪ್ರಾಂಗಣದಲ್ಲಿಬಂದ ಉತ್ಪನ್ನಗಳ ವಹಿವಾಟಿನ ಮೇಲೆ ಮಾತ್ರ ಸೆಸ್ ವಿಧಿಸಲು ಅವಕಾಶವಿರುವುದರಿಂದ ನಮಗೆ ಆದಾಯ ಬರುತ್ತಿಲ್ಲ. ಮುಖ್ಯವಾಗಿ ಇಲ್ಲಿಯ ರಿದ್ದಿ-ಸಿದ್ದಿ ಕಾರ್ಖಾನೆಯಿಂದ ಸಾಕಷ್ಟು ಆದಾಯ ನಿರೀಕ್ಷೆ ಮಾಡಲಾಗಿತ್ತು. ಈಗ ಬಂದಿರುವ ಕಾಯ್ದೆಯಿಂದಾಗಿ ಆದಾಯ ಇಳಿಮುಖವಾಗಲಿದೆ. -ಬಿ.ಆರ್.ಜಾಲಿಬೇರಿ. ಕಾರ್ಯದರ್ಶಿ, ಎಪಿಎಂಸಿ
ಈ ಮೊದಲೇ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ಎಪಿಎಮ್‌ಸಿಗಳು ನೆರೆ ಹಾಗೂಕೋವಿಡ್-19ನಿಂದ ಮತ್ತಷ್ಟು ಬಳಲಿ ಬೆಂಡಾಗಿವೆ. ಈಗ ತಿದ್ದುಪಡಿ ಕಾಯ್ದೆಯಿಂದ ಎಪಿಎಮ್‌ಸಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಲು ಸರ್ಕಾರ ನಿರ್ಧರಿಸಿ ಕಾರ್ಪೋರೇಟ್ ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿತ್ತಿದೆ. ಇದು ರೈತ ವಿರೋಧಿ ಕಾಯ್ದೆಯಾಗಿದೆ. -ಭೀಮಶಿ ಗದಾಡಿ,. ಕಾಯದರ್ಶಿ, ರಾಜ್ಯ ರೈತ ಸಂಘ.
-ಮಲ್ಲಪ್ಪ ದಾಸಪ್ಪಗೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
MUST WATCH
ಹೊಸ ಸೇರ್ಪಡೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!
Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.