ಸ್ಯಾನಿಟೈಸರ್ ಸಿಂಪಡಣಾ ಘಟಕ ಲೋಕಾರ್ಪಣೆ
ಗೋಕಾಕ-ರಾಮದುರ್ಗದಲ್ಲಿ ನೈರ್ಮಲೀಕರಣ ಸುರಂಗ ಮಾರ್ಗ ಆರಂಭ
Team Udayavani, Apr 11, 2020, 12:35 PM IST
ಗೋಕಾಕ: ಕೊರೊನಾ ಸೋಂಕು ನಿಯಂತ್ರಣಗೊಳಿಸುವ ದ್ರಾವಣ ಸಿಂಪಡಣಾ ಘಟಕವನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಉದ್ಘಾಟಿಸಿದರು.
ಗೋಕಾಕ: ನಗರದ ಬಸವೇಶ್ವರ ವೃತ್ತದಲ್ಲಿ ಕೋವಿಡ್ ಸೋಂಕು ನಿಯಂತ್ರಣಗೊಳಿಸಲು ಬಾಡಿ ಸ್ಯಾನಿಟೈಸರ್ (ದ್ರಾವಣ) ಸಿಂಪಡಣಾ ಘಟಕವನ್ನು ಶುಕ್ರವಾರ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಅಗತ್ಯ ವಸ್ತುಗಳಿಗೆ ಮನೆಯಿಂದ ಹೊರಬರುವವರು ಈ ಮಾರ್ಗದ ಮೂಲಕ ತೆರಳುವಂತೆ ಜಾಗೃತಿ ಮೂಡಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಜನರು ಈ ಮಾರ್ಗದಲ್ಲಿ ಪ್ರವೇಶಿಸಬೇಕು. ನಗರದ ಇನ್ನುಳಿದ ಪ್ರಮುಖ ಸ್ಥಳಗಳಲ್ಲಿ ಇನ್ನೊಂದೆರಡು ದ್ರಾವಣ ಸಿಂಪಡಣಾ
ಕೇಂದ್ರಗಳನ್ನು ತೆರೆಯಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ಪ್ರಭು ಡಿ.ಟಿ., ಪೌರಾಯುಕ್ತ ಶಿವಾನಂದ ಹಿರೇಮಠ,
ಎಂ.ಎಚ್. ಗಜಾಕೋಶ, ಮುಖಂಡರಾದ ಸೋಮಶೇಖರ್ ಮಗದುಮ್ಮ, ಮಹಾಂತೇಶ ತಾಂವಶಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.