ರಾಜ್ಯದಲ್ಲಿ ಜಾತ್ರೆ-ಉತ್ಸವಕ್ಕೆ ಅನುಮತಿ ನೀಡಿ
, ಬಾರ್ ಗಳಲ್ಲಿ ಜನರು ಸಾರಾಯಿ ಕುಡಿದು ಸಾಯುವುದಕ್ಕಿಂತ ಜಾತ್ರೆ, ಯಾತ್ರೆಗಳ ಆಚರಣೆಗೆ ಅವಕಾಶ ಮಾಡಿಕೊಡಬೇಕು
Team Udayavani, Feb 5, 2022, 5:41 PM IST
ಬೆಳಗಾವಿ: ರಾಜ್ಯಾದ್ಯಂತ ನಿರ್ಬಂಧ ಹೇರಿರುವ ಜಾತ್ರೆ, ಪಲ್ಲಕ್ಕಿ ಉತ್ಸವ, ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳಿಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಶ್ರೀರಾಮಸೇನೆ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಧಿಕಾರಿ ಕಚೇರಿ ಆವರಣದಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರ ಸದ್ಯ ಕೋವಿಡ್ ನಿಯಮಗಳನ್ನು ಮುಕ್ತಗೊಳಿಸಿದೆ. ಮಾರುಕಟ್ಟೆ, ಮಾಲ್, ಪಬ್, ಬಾರ್, ಸಿನಿಮಾ ಮಂದಿರ, ಶಾಲಾ ಕಾಲೇಜುಗಳನ್ನು ಓಪನ್ ಮಾಡಿದೆ. ಆದರೆ ಹಿಂದೂಗಳ ಧಾರ್ಮಿಕ ಆಚರಣೆಗಳಾದ ಜಾತ್ರೆ, ಉತ್ಸವ, ರಥೋತ್ಸವಕ್ಕೆ ನಿರ್ಬಂಧ ಹೇರಿದ್ದು ಖಂಡನೀಯ ಎಂದು ದೂರಿದರು. ಪ್ರಮೋದ ಮುತಾಲಿಕ ಮಾತನಾಡಿ, ವರ್ಷಕ್ಕೆ ಒಮ್ಮೆ ನಡೆಯುವ ಈ ಜಾತ್ರೆ, ಹಬ್ಬಗಳು ಧಾರ್ಮಿಕ ಅಷ್ಟೇ ಅಲ್ಲ, ಲಕ್ಷಾಂತರ ಜನರ ಉಪಜೀವನಕ್ಕೆ ಸಹಕಾರಿಯಾಗಿವೆ. ಪಬ್, ಬಾರ್ ಗಳಲ್ಲಿ ಜನರು ಸಾರಾಯಿ ಕುಡಿದು ಸಾಯುವುದಕ್ಕಿಂತ ಜಾತ್ರೆ, ಯಾತ್ರೆಗಳ ಆಚರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಕೋವಿಡ್ ನೆಪ ಹೇಳಿ ಇಂತಹ ಜಾತ್ರೆ, ಉತ್ಸವಗಳನ್ನು ಬ್ಯಾನ್ ಮಾಡುವುದರಿಂದ ಜನರನ್ನು ಸಾಲ, ನಿರುದ್ಯೋಗ, ಹಸಿವಿನಿಂದ ಸರ್ಕಾರ ಕೊಲ್ಲುತ್ತಿದೆ. ಎರಡು ವರ್ಷದಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ತಿಂಗಳು ಪೂರ್ತಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ, ಚಿಂಚಲಿ ಮಾಯಕ್ಕಾ ದೇವಿ ಸೇರಿ ಅನೇಕ ಜಾತ್ರೆಗಳು ನಡೆಯುತ್ತವೆ. ಇದನ್ನು ನಂಬಿ ಅನೇಕರು ಬದುಕು ನಡೆಸುತ್ತಾರೆ. ಹೀಗಾಗಿ ಜಾತ್ರೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಎಲ್ಲ ಚಟುವಟಿಕೆಗಳು ಬಂದ್ ಆಗಿವೆ. ಆದರೆ ಹಿಂದೂ ಧರ್ಮದ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಮುಂದುವರಿಸಿರುವುದು ಸರಿಯಲ್ಲ. ಸಾಮಾನ್ಯವಾಗಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳಲ್ಲಿ ರೈತರು, ಕಾರ್ಮಿಕರು, ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು ಸೇರಿದಂತೆ ಲಕ್ಷಾಂತರ ಜನರು ಬದುಕು ಸಾಗಿಸುತ್ತಾರೆ.
ಹಿಂದುತ್ವದ ಹೆಸರು ಹೇಳುವ ಬಿಜೆಪಿಯವರಿಗೆ ಗೊತ್ತಾಗುವುದಿಲ್ಲವೇ. ರಾಜಕೀಯ ಸಭೆ, ಮೆರವಣಿಗೆಗಳನ್ನು ನಡೆಸುತ್ತಿದ್ದಾರೆ ಹೊರತು ಜಾತ್ರೆಗೆ ಮಾತ್ರ ನಿಬಂìಧವೇಕೆ ಎಂದು ಪ್ರಶ್ನಿಸಿದರು. ಈ ತಿಂಗಳು ರಾಜ್ಯಾದ್ಯಂತ ವಿವಿಧ ಜಾತ್ರೆಗಳು ನಡೆಯುತ್ತವೆ. ಸರ್ಕಾರ ಕೂಡಲೇ ಜಾತ್ರೆಗಳಿಗೆ, ರಥೋತ್ಸವಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್ ಕೋಕಿತಕರ ಹಾಗೂ ಕಾರ್ಯಾಧ್ಯಕ್ಷ ವಿನಯ್ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.