“ಹಡಪದ ಅಪ್ಪಣ್ಣ”ನವರು ಕಾಯಕ ಯೋಗಿ; ಶಾಸಕ ಲಕ್ಷ್ಮಣ ಸವದಿ
12 ನೇ ಶತಮಾನದ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿದ್ದರು
Team Udayavani, Jan 8, 2024, 3:56 PM IST
ಉದಯವಾಣಿ ಸಮಾಚಾರ
ಕೋಹಳ್ಳಿ: ವಿಶ್ವಗುರು ಬಸವಣ್ಣನವರ ಜೊತೆಗೆ ಹೆಚ್ಚಿನ ಒಡನಾಟದಲ್ಲಿ ಇದ್ದವರು ಹಡಪದ ಅಪ್ಪಣ್ಣನವರು. ಬಹುಶ: ನಮ್ಮ ನಾಡಿನಲ್ಲಿ ಬಸವಣ್ಣನವರು ಜನಿಸದೇ ಇದ್ದಿದ್ದರೆ ಇಂದು ನಾವು ಹಡಪದ ಅಪ್ಪಣ್ಣ, ಮಾದಾರ ಚನ್ನಯ್ಯ, ಅಂಬಿಗರ ಚೌಡಯ್ಯ ನಂತಹ ಮಹಾನ್ ಶರಣರ ಹೆಸರು ಕೇಳುತ್ತಿರಲಿಲ್ಲವೆಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸಮೀಪದ ಸತ್ತಿ ಗ್ರಾಮದಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ 889ನೇ ಜಯಂತ್ಯುತ್ಸವ ನಿಮಿತ್ಯ ಅಥಣಿ ತಾಲೂಕಾ ಹಡಪದ ಸಮಾಜದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹಡಪದ ಅಪ್ಪಣ್ಣನವರು ಕಾಯಕ ಯೋಗಿಗಳು. ಅನಿಷ್ಟ ಪದ್ದತಿಗಳ ನಿರ್ಮೂಲನೆಗೆ ಬಸವಣ್ಣನವರಿಗೆ ಸಲಹೆ ಕೊಟ್ಟಿದ್ದೇ ಹಡಪದ ಅಪ್ಪಣ್ಣನವರು. ಹಿಂದಿನ ಕಾಲದಲ್ಲಿ ಕಾಯಕದ ಆಧಾರದ ಮೇಲೆ ಜಾತಿಗಳು ನಿರ್ಮಾಣವಾಗಿದ್ದವು.
ಈ ವ್ಯವಸ್ಥೆಯನ್ನು ತೆಗೆದು ಹಾಕಬೇಕೆಂದು ಲಿಂಗಾಯತರು ಎಂಬ ಪದ ತರಲಾಯಿತು. ಈ ವ್ಯವಸ್ಥೆಗೆ ಪ್ರೇರಣೆಯೇ ಹಡಪದ ಅಪ್ಪಣ್ಣನವರು ಎಂದು ಅವರು ಹೇಳಿದರು.
ಕಾಗವಾಡ ಶಾಸಕ ರಾಜು ಕಾಗೆ ಮಾತನಾಡಿ, 12 ನೇ ಶತಮಾನದಲ್ಲಿ ಬಸವಣ್ಣನವರ ಆಪ್ತರಾಗಿದ್ದ ಹಡಪದ ಅಪ್ಪಣ್ಣನವರಿಗೆ ನಿಜಸಖಿ ಎಂದು ಬಸವಣ್ಣನವರು ಕರೆಯುತ್ತಿದ್ದರು. ಅಪ್ಪಣ್ಣನವರು ಅಂಗೈಯಲ್ಲಿ ಲಿಂಗ ಇಟ್ಟುಕೊಂಡು ನೋಡುತ್ತ ಅದರಲ್ಲಿಯೇ ತಲ್ಲಿನರಾಗಿರುತ್ತಿದ್ದರು ಎಂದು ಹೇಳಿದ ಅವರು ಡೋಹರ ಡಕ್ಕಯ್ಯ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಮೊಳಿಗೆಯ ಮಾರಯ್ಯ, ಮೇದಾರ ಕಕ್ಕಯ್ಯ,, ಸಮಗಾರ ಹರಳಯ್ಯ, ಸೊನ್ನಲದ ಸಿದ್ದರಾಮ ಸೇರಿದಂತೆ ಜಗತ್ತಿನ ಎಲ್ಲ ಧರ್ಮದ ಶರಣರಿಗೆ ಬಸವಣ್ಣನವರು 12 ನೇ ಶತಮಾನದ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿದ್ದರು ಎಂದು ಅಭಿಪ್ರಾಯ ಪಟ್ಟರು.
ಅಥಣಿ ಗಚ್ಚಿನ ಮಠದ ಶಿವಬಸವ ಸ್ವಾಮಿಗಳು, ಶೆಟ್ಟರಮಠದ ಮರುಳಸಿದ್ದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸತ್ತಿಯ ಕಾಡಯ್ಯ ಹಿರೇಮಠ, ಭೀಮಾಶಂಕರ ಶರಣರು, ಬಸವರಾಜ ನಾವಿ, ಹಡಪದ ಸಮಾಜದ ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ, ಶಿವಾನಂದ ಹುನ್ನೂರ ಮಾತನಾಡಿದರು. ಶಿವರುದ್ರ ಘೂಳಪ್ಪನವರ, ಶ್ರೀಶೈಲ ನಾಯಿಕ, ಬಸವರಾಜ ನಾವಿ, ಜಡೆಪ್ಪ
ಕುಂಬಾರ, ಶ್ರೀಶೈಲ ಗಸ್ತಿ, ದಾದಾಗೌಡ ಪಾಟೀಲ, ಬಾಪುಗೌಡ ಪಾಟೀಲ, ಬಸವರಾಜ ಭಜರಂಗಿ, ರಮೇಶ ಕಾಗಲೆ, ಸಂಜು ನಾವಿ, ಚನ್ನಪ್ಪ ನಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿಜಯ ಹುದ್ದಾರ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Belagavi: ಎಸ್‌ಡಿಎ ರುದ್ರಣ್ಣ ಮೊಬೈಲ್ ಪತ್ತೆ: ಪೊಲೀಸರಿಂದ ತನಿಖೆ ಚುರುಕು
Belagavi; ರುದ್ರಣ್ಣ ಯಡವಣ್ಣವರ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ: ಹೆಬ್ಬಾಳಕರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.