ಕರಾವಳಿಯಿಂದ ರಾಮದುರ್ಗ ಪಟ್ಟಣಕ್ಕೆ ಕಾಲಿಟ್ಟ ಹಿಜಾಬ್ ವಿವಾದ
Team Udayavani, Feb 5, 2022, 11:49 AM IST
ರಾಮದುರ್ಗ: ಪಟ್ಟಣದ ಈರಮ್ಮ ಶಿ. ಯಾದವಾಡ ಸರಕಾರಿ ಪದವಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದು, ಕರಾವಳಿಗೆ ಸೀಮಿತವಾದ ಹಿಜಾಬ್ ವಿವಾದ ಈಗ ತಾಲೂಕು ಮಟ್ಟಕ್ಕೆ ವ್ಯಾಪಿಸುತ್ತಿರುವುದು ಆತಂಕದ ಸಂಗತಿಯಾಗಿದೆ.
ಸ್ಥಳೀಯ ಈರಮ್ಮ ಶಿ.ಯಾದವಾಡ ಸರಕಾರಿ ಪ್ರಥಮ ದರ್ಜೆಯ ಕಾಲೇಜಿಗೆ ಕಳೆದ ಬುಧವಾರ ಕೇಸರಿ ಶಾಲು ಧರಿಸಿದ ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಿದ ಸುದ್ದಿ ತಿಳಿದ ಪಿ.ಎಸ್.ಐ ಎಸ್.ಎಂ.ಕಾರಜೋಳ ಅವರು ಕಾಲೇಜಿಗೆ ಆಗಮಿಸಿ ಪ್ರಾಚಾರ್ಯ ಕೊಠಡಿಗೆ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ಕರೆಯಿಸಿ ಬುದ್ದಿವಾದ ಹೇಳಿ ಅವರ ಮನವೊಲಿಸಿ ಶಾಲು ತೆಗೆಸಿದ್ದಾರೆಂದು ತಿಳಿದುಬಂದಿದೆ.
ಹನುಮ ಮಾಲೆ ಧರಿಸಿದ್ದರಿಂದ 108 ದಿನ ವೃತ ಮಾಡಲಾಗುತ್ತಿದ್ದು, ಅದಕ್ಕಾಗಿ ಕೇಸರಿ ಶಾಲು ಧರಿಸಿದ್ದೇವೆ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ. ಶಾಲು ಧರಿಸದೇ ಕಾಲೇಜಿಗೆ ಬರುವುದಾದರೆ ಹಿಜಾಬ್ ಧರಿಸಿ ಕಾಲೇಜಿಗೆ ಬರುವವರಿಗೆ ಏಕೆ ಅವಕಾಶ ಕೊಟ್ಟಿದ್ದೀರಿ ಎಂದು ಕೆಲ ವಿದ್ಯಾರ್ಥಿಗಳು ಪ್ರಾಚಾರ್ಯರನ್ನು ಹಾಗೂ ಪೊಲೀಸರನ್ನು ಪ್ರಶ್ನಿಸಿದರೆಂದು ಹೇಳಲಾಗುತ್ತಿದೆ.
ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದು ನಿಮ್ಮ ಗುರಿಯಾಗಬೇಕು. ಕಲಿಯುವ ವಯಸ್ಸಿನಲ್ಲಿ ಧರ್ಮದ ವಿಚಾರವನ್ನು ಕಾಲೇಜಿನ ಆವರಣಕ್ಕೆ ತರುವುದು ಒಳ್ಳೇಯದಲ್ಲ. ಧರ್ಮದ ಬಗ್ಗೆ ಮಠಮಂದಿರ, ಮಸೀದಿ, ಚರ್ಚುಗಳಿವೆ ಮಾತ್ರ ಸೀಮಿತವಾಗಬೇಕು. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು. ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ಪೊಲೀಸರು ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಕಳಿಸಿದ್ದರಿಂದ ವಿವಾದ ಸುಖಾಂತ್ಯ ಕಂಡಿದೆ.
ಇತ್ತಿಚಿನ ದಿನಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ. ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆಯವರಿಗೆ ಅವಕಾಶ ಇರದಿದ್ದರೂ ಬೈಕ್ ಮೇಲೆ ಕಾಲೇಜು ಕ್ಯಾಂಪಸ್‌ಗೆ ಬರುತ್ತಿದ್ದಾರೆ. ಪಟ್ಟಣದಿಂದ ಹೊರವಲಯದಲ್ಲಿ ಕಾಲೇಜು ಇರುವುದರಿಂದ ಪಡ್ಡೆ ಹುಡುಗರ ಕಾಟ ಹೆಚ್ಚುತ್ತಿದೆ. ಹಾಗಾಗಿ ಕಾಲೇಜು ಅವಧಿಯಲ್ಲಿ ಪೊಲೀಸ್ ಬೀಟ್ ಹಾಕಬೇಕೆಂದು ಹಿಂದೂ ಜಾಗರಣಾ ವೇದಿಕೆಯ ಬೇಟಿ ಬಚಾವೋ ಜಿಲ್ಲಾ ಪ್ರಮುಖ ಚಂದ್ರಕಾಂತ ಹೊಸಮನಿ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.