ಪೆರೋಲ್ ರಜೆ ಮೇಲೆ ತೆರಳಿ ತಲೆಮರೆಸಿಕೊಂಡ ಕೈದಿಗಳು
Team Udayavani, Aug 27, 2021, 3:31 PM IST
ಬೆಳಗಾವಿ: ಪೆರೋಲ್ ರಜೆ ಮೇಲೆ ತೆರಳಿದ್ದ ಇಲ್ಲಿಯ ಹಿಂಡಲಗಾ ಕೇಂದ್ರ ಕಾರಾಗೃಹದ ಶಿಕ್ಷಾ ಬಂಧಿ ಆರೋಪಿಗಳಾದ ರಮೇಶ ವೆಂಕಟರವಣಪ್ಪ ಕುರಿ ಹಾಗೂ ಈಶ್ವರ ಮಲ್ಲಪ್ಪ ವಗ್ಗರ ಕಾರಾಗೃಹಕ್ಕೆ ಮರಳಿ ಶರಣಾಗದೇ ತಲೆಮರೆಸಿಕೊಂಡಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹಳಿಹಟ್ಟಿ ಗ್ರಾಮದ ರಮೇಶನಿಗೆ ಬೆಳಗಾವಿ ಅನಗೋಳದ ಮುಸ್ಲಿಂ ಗಲ್ಲಿಯ ಅಯಾಜ್ ಮೆಹಬೂಬ ಅಲಿ ಶೇಖ ಜಾಮೀನಿನ ಮೇಲೆ ಹೋಗಲು ಜಾಮೀನುದಾರನಾಗಿದ್ದು, ಕೋವಿಡ್ -19 ನಿಮಿತ್ತ ಸರ್ಕಾರದ ಆದೇಶದಂತೆ ಆರೋಪಿ ರಮೇಶನು ಮೇ 15 ರಿಂದ ಆ. 16ರವರೆಗೆ 90 ದಿನಗಳ ಪೆರೋಲ್ ರಜೆಯ ಮೇಲೆ ಹೋಗಿದ್ದನು.ಆ. 17ರ ಸಂಜೆ 5:30ಕ್ಕೆ ಕಾರಾಗೃಹಕ್ಕೆ ಮರಳಿ ಶರಣಾಗಿಲ್ಲ. ರಮೇಶ ವೆಂಕಟರವಣಪ್ಪ ಕುರಿ(33) ಕಪ್ಪು ಮೈಬಣ್ಣ ಹೊಂದಿದ್ದಾನೆ. ಉದ್ದನೆಯ ಮುಖ ಹಾಗೂ ಸದೃಢ ಮೈಕಟ್ಟು ಹೊಂದಿದ್ದಾನೆ.
ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದ ಈಶ್ವರ ಮಲ್ಲಪ್ಪ ವಗ್ಗರ(57) ಮೇ 15 ರಿಂದ ಆ. 14ರ ವರೆಗೆ ಸಿದ್ದಪ್ಪ ಮಾರುತಿ ಸಿದ್ದನ್ನವರ ನೀಡಿದ ಜಾಮೀನಿನ ಆಧಾರವಾಗಿ ಪೆರೋಲ್ ರಜೆಯ ಮೇಲೆ ಹೋಗಿದ್ದು, ಆ. 15ರಂದು ಮರಳಿ ಕಾರಾಗೃಹಕ್ಕೆ ಶರಣಾಗದೇ ತಲೆಮರೆಸಿಕೊಂಡಿದ್ದಾನೆ.
ಈ ಕುರಿತು ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಶಾಬುದ್ದೀನ್ ಮಸಾಕಸಾಬ ಕಾಲೇಖಾನ ಅವರು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದಾರೆ. ಆರೋಪಿತರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಕಂಟ್ರೋಲ್ ರೂಂ. 0831-2405233 ಹಾಗೂ ಪಿ.ಐ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಮೊ: 9480804031 ಅಥವಾ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ದೂ:0831-2405252 ಸಂಪರ್ಕಿಸಬಹುದು ಎಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಎಎಸ್‌ಐ ಎಚ್. ಎಚ್. ಪಮ್ಮಾರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.