ಮನೆ ಕಳ್ಳತನ: ಆರೋಪಿಗಳ ಬಂಧನ;15.64 ಲಕ್ಷ ರೂ. ಮೌಲ್ಯದ ಆಭರಣ ವಶ
Team Udayavani, Oct 25, 2022, 6:20 PM IST
ಚಿಕ್ಕೋಡಿ: ಹಗಲು ವೇಳೆಯಲ್ಲಿ ಮನೆ ಕೀಲಿ ಮುರಿದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಪೊಲೀಸರು ಸುಮಾರು 15.64 ಲಕ್ಷ ರೂ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಚಿಕ್ಕೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ದಿ.12 10 2022 ರಂದು ಚಿಕ್ಕೋಡಿ ನಗರದ ವಿಷ್ಣು ಪ್ರಕಾಶ ನೇತಲಕರ ಅವರ ಮನೆ ಕೀಲಿ ಮುರಿದು 370 ಗ್ರಾಂ ಬಂಗಾರ ಆಭರಣ. 1.50 ಲಕ್ಣ ರೂ. ನಗದು ಹಣ ಹೀಗೆ 12.61 ಲಕ್ಷ ರೂ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಎಂದು ದೂರು ನೀಡಿದ್ದರು.
ಪ್ರಕರಣದ ಬೆನ್ನೆತ್ತಿದ್ದ ಚಿಕ್ಕೋಡಿ ಪೊಲೀಸರು ನೇಪಾಳಿ ಮೂಲದ ವಿಜಯಪುರ ವಾಸಿಯಾಗಿರುವ ಒಬ್ಬ ಆರೋಪಿ ಹಾಗೂ ಬೆಳಗಾವಿ ಜಿಲ್ಲೆಯ ಇಬ್ಬರು ಆರೋಪಿಯನ್ನು ಬಂಧಿಸಿ, ಅವರಿಂದ 4 ಹಗಲು ಮನೆಗಳ್ಳತನ ಪ್ರಕರಣ ಭೇದಿಸಿದ್ದಾರೆ.
ಪ್ರಕರಣದ ತನಿಖೆ ಕಾಲಕ್ಕೆ ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಕಬ್ಬಿಣದ ರಾಡ್. 12.50 ಲಕ್ಷ ಮೌಲ್ಯದ 250 ಗ್ರಾಂ ಚಿನ್ನ. 1 ಲಕ್ಣ ರೂ ಮೌಲ್ಯದ ಕೆನಾನ ಕಂಪನಿಯ ಕ್ಯಾಮರಾ. 2 ಲಕ್ಷ ರೂ ಮೌಲ್ಯದ ಕೆಟಿಎಂ ಬೈಕ್ ಹೀಗೆ ಒಟ್ಟು 15.64 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಿಕ್ಕೋಡಿ ಡಿವೈಎಸ್ ಪಿ ಬಸವರಾಜ ಯಲಿಗಾರ. ಸಿಪಿಐ ಆರ್.ಆರ್.ಪಾಟೀಲ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೆ.ಬಿ.ಕಾಂಬಳೆ. ಆರ್.ಆರ್.ಶಿಳನವರ. ಎಂ.ಪಿ.ಸತ್ತಿಗೇರಿ. ಎಸ್.ಪಿ.ಗಲಗಲಿ.ಎಸ್.ಬಡಿಗೇರ. ಸಂತೋಷ ಬಡೋದೆ. ಎಂ.ಎಫ್.ಪಾಟೀಲ. ವಿನೋಧ ಠಕ್ಕನ್ನವರ. ಸಚೀನ ಪಾಟೀಲ ಆರೋಪಗಳನ್ನು ಬಂಧಿಸಿ ಅವರಿಂದ ಚಿನ್ನವನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.
ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.