ನೀರಾವರಿ ಯೋಜನೆಗಳಿಗೆ ಕೊಕ್ಕೆ
Team Udayavani, Dec 20, 2018, 6:00 AM IST
ಬೆಳಗಾವಿ: ರಾಜ್ಯ ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ ಎಂದು ಹೇಳುತ್ತಲೇ ಈ ವರ್ಷದ ನೀರಾವರಿ ಯೋಜನೆಗಳಿಗೆ ಕೊಕ್ಕೆ ಹಾಕಲಾಗಿದ್ದು ಜಲಸಂಪನ್ಮೂಲ ಇಲಾಖೆಯಡಿ ರೂಪಿಸಿರುವ ಯೋಜನೆಗಳನ್ನು ಸದ್ಯಕ್ಕೆ ಮುಂದುವರೆಸದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜಲ ಸಂಪನ್ಮೂಲ ಇಲಾಖೆಯ ನಿಯಮಗಳಡಿಯಲ್ಲಿ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಆಗಸ್ಟ್ 9ರಂದು ಆರ್ಥಿಕ ಇಲಾಖೆ ಆಂತರಿಕ ಟಿಪ್ಪಣಿ ಹೊರಡಿಸಿದ್ದು, ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಹೊರಡಿಸಿರುವ ಪತ್ರ “ಉದಯವಾಣಿ’ಗೆ ಲಭ್ಯವಾಗಿದೆ.
ಈ ಟಿಪ್ಪಣಿ ಪ್ರಕಾರ ಜಲ ಸಂಪನ್ಮೂಲ ಇಲಾಖೆ ನೀರಾವರಿ ನಿಗಮಗಳಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿರುವ ಮತ್ತು ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡು ಕಾರ್ಯಾದೇಶವನ್ನು ನೀಡುವುದಕ್ಕೆ ಬಾಕಿ ಇರುವ ಕಾಮಗಾರಿಗಳ ಕುರಿತು ಮುಂದಿನ ಯಾವುದೇ ಕ್ರಮ ತೆಗೆದುಕೊಳ್ಳದೇ ತಕ್ಷಣದಿಂದಲೇ ತಡೆಡಿಯಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ.
ಬಹುತೇಕ ಯೋಜನೆಗಳು ಉತ್ತರ ಕರ್ನಾಟಕ ಭಾಗದ್ದಾಗಿವೆೆ. ಈ ಆದೇಶದಿಂದ ಸುಮಾರು 5 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳಿಗೆ ತಡೆ ಉಂಟಾಗಲಿದೆ ಎಂದು ಹೇಳಲಾಗಿದೆ. ಕರ್ನಾಟಕ ನೀರಾವರಿ ನಿಗಮದಿಂದ ಕೈಗೆತ್ತಿಕೊಂಡ ಯೋಜನೆಗಳು ಪ್ರಮುಖವಾಗಿ ಕರ್ನಾಟಕ ನೀರಾವರಿ ನಿಮಗದಿಂದ ಕೈಗೆತ್ತಿಕೊಂಡಿರುವ ಕಿತ್ತೂರು ಮತ್ತು ಬೈಲಹೊಂಗಲ ಹಾಗೂ ಸವದತ್ತಿ ತಾಲೂಕುಗಳ ಕೆರೆಗಳಿಗೆ ನೀರು ತುಂಬಿಸುವ 248 ಕೋಟಿ ರೂ. ಯೋಜನೆ. ಭೀಮಾ ನದಿಯ ಉಪನದಿಯಾದ ಭೋರಿ ನದಿಗೆ ಹೆಚ್ಚುವರಿ ನೀರನ್ನು ಅಮರ್ಜಾ ಜಲಾಶಯಕ್ಕೆ ತುಂಬಿಸುವ 450 ಕೋಟಿ ವೆಚ್ಚದ ರೂ. ಯೋಜನೆ. 566 ಕೋಟಿ ರೂ. ವೆಚ್ಚದ ಸಾಲಾಪುರ ಏತ ನೀರಾವರಿ ಯೋಜನೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ್ ತಾಲೂಕಿನ 129 ಕೆರೆಗಳನ್ನು ಬೆಡ್ತಿ ನದಿಯಿಂದ ನೀರು ತುಂಬಿಸುವ 289 ಕೋಟಿ ರೂ. ಯೋಜನೆ. 80 ಕೋಟಿ ರೂ. ವೆಚ್ಚದ ಕೊಪ್ಪಳ ತಾಲೂಕಿನ ಬಹದ್ದೂರ್ ಬಂಡಿ ಏತ ನೀರಾವರಿ ಯೋಜನೆ ಸೇರಿದಂತೆ ಸುಮಾರು 1825 ಕೋಟಿ ರೂ. ವೆಚ್ಚದ ಯೋಜನೆ.
ಕೃಷ್ಣಾ ಭಾಗ್ಯ ಜಲ ನಿಗಮದಿಂದ ಕೈಗೆತ್ತಿಕೊಂಡ ಯೋಜನೆಗಳು
ಸ್ಕಾಡಾ 2ನೇ ಹಂತದ ಎನ್‌ಎಲ್‌ಬಿಸಿ, ಎಸ್‌ಬಿಸಿ, ಜೆಬಿಸಿ, ಎಂಬಿಸಿ ಮತ್ತು ಐಬಿಸಿ ಕೆನಾಲ್ ಸಂಪರ್ಕ ಕಲ್ಪಿಸುವ 872 ಕೋಟಿ ರೂ. ಯೋಜನೆ.
28 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಸೋಂತಿ ಮುಖ್ಯ ಕೆನಾಲ್ ನಿರ್ಮಾಣ, ಭೀಮಾ ನದಿಗೆ ಕಲ್ಲೂರು-ಬಿ ಬ್ಯಾರೇಜ್ ಹಾಗೂ ಘಟ್ಟರ್ಗಾ ಬ್ಯಾರೇಜ್‌ಗಳಿಗೆ ಸ್ವಯಂಚಾಲಿತ ಲಿಫ್ಟ್ ಗೇಟ್ ಅಳವಡಿಸುವ 83 ಕೋಟಿ ರೂ. ಯೋಜನೆಗಳಿಗೆ ಬ್ರೇಕ್ ಹಾಕಲಾಗಿದೆ. ಕೃಷ್ಣಾ ಜಲಭಾಗ್ಯ ನಿಗಮದ ವತಿಯಿಂದ ಕೈಗೆತ್ತಿಕೊಂಡಿರುವ 998 ಕೋಟಿ ರೂ. ಯೋಜನೆ.
ಇಷ್ಟೇ ಅಲ್ಲದೇ ಕೃಷ್ಣಾ ಜಲಭಾಗ್ಯ ನಿಗಮದ ವತಿಯಿಂದ ಕೈಗೆತ್ತಿಕೊಂಡು ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿ ಕಾಮಗಾರಿ ಆರಂಭಿಸಲು ಅನುಮತಿ ನೀಡಲು ಬಾಕಿ ಇರುವ 429 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಕಾರ್ಯಾದೇಶ ನೀಡಿಲ್ಲ. ಪ್ರಮುಖವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಕೂಡಲ ಸಂಗಮದಲ್ಲಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಿರುವ ಬಸವ ಅಂತಾರಾಷ್ಟ್ರೀಯ ಕೇಂದ್ರ ಹಾಗೂ ಮ್ಯೂಜಿಯಂ ಯೋಜನೆ ಹಾಗೂ ಆಲಮಟ್ಟಿ ಎಡದಂಡೆ ಕಾಲುವೆಗಳ ಆಧುನೀಕರಣ ಯೋಜನೆಯೂ ಸೇರಿದೆ.
ಕಾವೇರಿ ಯೋಜನೆಗಳಿಗೂ ಬ್ರೇಕ್ :
ಕಾವೇರಿ ನೀರಾವರಿ ನಿಗಮ ಕೈಗೆತ್ತಿಕೊಂಡಿರುವ ಕನ್ವಾ ಕೆನಾಲ್ ಮಳ್ಳಿಗೆರೆ ಎಲ್‌ಐಎಲ್ ಯೋಜನೆ ಸೇರಿದಂತೆ 688 ಕೋಟಿ ರೂ. ವೆಚ್ಚದ ಸಣ್ಣ ಪುಟ್ಟ ಯೋಜನೆಯೂ ಸೇರಿದೆ.
ಸಾವಿರಾರು ಕೋಟಿ ರೂ. ವೆಚ್ಚದ ನೀರಾವರಿ ಯೋಜನೆಗಳು ಇರುವುದರಿಂದ ಯಾವುದನ್ನು ಮೊದಲು ಕೈಗೆತ್ತಿಕೊಳ್ಳಬೇಕು ಎನ್ನುವ ಸಲುವಾಗಿ ಎಲ್ಲ ಯೋಜನೆಗಳನ್ನು ತಡೆ ಡಿಯಲಾಗಿತ್ತು. ಈಗ ಅವುಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ.
-ರಾಕೇಶ್‌ಸಿಂಗ್, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ
ಸ್ಥಗಿತಗೊಳಿಸಲು ಸೂಚಿಸಿರುವ ಯೋಜನೆಗಳ ಹಣಕಾಸು ವಿವರ
ಕೃಷ್ಣಾ ಭಾಗ್ಯ ಜಲ ನಿಗಮದ ಟೆಂಡರ್ ಪ್ರಕ್ರಿಯೆಯಲ್ಲಿರುವ ಯೋಜನೆಗಳು 998 ಕೋಟಿ ರೂ.
ಕಾವೇರಿ ನೀರಾವರಿ ನಿಗಮದಿಂದ ಟೆಂಡರ್ ಪ್ರಕ್ರಿಯೆಯಲ್ಲಿರುವ ಯೋಜನೆಗಳು 688.75 ಕೋಟಿ ರೂ.
ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿ ಆದೇಶ ನೀಡಬೇಕಿರುವ ಯೋಜನೆಗಳು
ಕೃಷ್ಣಾ ಜಲಭಾಗ್ಯ ನಿಗಮದಿಂದ 429 ಕೋಟಿ ರೂ. ಮೊತ್ತದ ಯೋಜನೆಗಳು
ಆದೇಶ ನೀಡಿ, ಚಾಲನೆಯಲ್ಲಿರುವ 1179 ಕೋಟಿ ರೂ. ಯೋಜನೆಗಳು
ಶಂಕರ್ ಪಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.