ಹುಕ್ಕೇರಿ : ನಿವೃತ್ತ ಪಿಎಸ್‌ಐ ಪತ್ನಿಯ ಬರ್ಬರ ಹತ್ಯೆ ; ಚಿನ್ನಾಭರಣ ದೋಚಿ ಪರಾರಿ
ಒಂಟಿಯಾಗಿದ್ದುದನ್ನು ಕಂಡೆ ದುಷ್ಕೃತ್ಯ
Team Udayavani, Jun 15, 2022, 5:02 PM IST
ಹುಕ್ಕೇರಿ : ತಾಲೂಕಿನ ಹೊಸೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ 9. 30ರ ವೇಳೆಗೆ ಕಳ್ಳರು ಮನೆಗೆ ನುಗ್ಗಿ ನಿವೃತ್ತ ಪಿಎಸ್‌ಐ ಪತ್ನಿ ಬಾಯಿಗೆ ಬಟ್ಟೆ ತುರುಕಿ ಬರ್ಬರವಾಗಿ ಹತ್ಯೆಗೈದು, ಕಪಾಟು ಒಡೆದು ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಮಹಿಳೆಯ ಮೈಮೇಲೆ ಇದ್ದ ಚಿನ್ನಾಭರಣಗಳ ಸಮೇತ ದುಷ್ಕರ್ಮಿಗಳು ಪರಾರಿಯಾಗಿದ್ದು, ಘಟನೆ ಬಳಿಕ ಹೊಸೂರು ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ.
ಹತ್ಯೆಗೀಡಾದ ಮಹಿಳೆ ಮಾಲವ್ವಾ ಭೀಮರಾಯಿ ಅಕ್ಕತಂಗೇಹಾಳ(60)ಎನ್ನಲಾಗಿದೆ. ಆಕೆಯ ಪತಿ ಭೀಮರಾಯಿ ಅಕ್ಕತಂಗೇಹಾಳ ನಿವೃತ್ತ ಪಿಎಸ್‌ಐ ಆಗಿದ್ದು, ಅವರಿಗೆ ಇಬ್ಬರು ಪತ್ನಿಯರು ಎಂದು ಹೇಳಲಾಗಿದೆ.
ಮಹಿಳೆಯ ಮನೆಯ ಸುತ್ತ ಯಾವುದೇ ಮನೆಯಲ್ಲಿ ಜನರ ವಾಸ ಇರಲಿಲ್ಲ ಅದನ್ನು ಗಮನಿಸಿಯೇ ಕಳ್ಳರು ಮನೆಗೆ ನುಗ್ಗಿ ಈ ಕೃತ್ಯ ಎಸೆಗಿದ್ದಾರೆ. ಮೃತ ಮಾಲವ್ವಾ ಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರೂ ಬಿಇ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾರೆ.
ಘಟನೆ ಗಮನಕ್ಕೆ ಬಂದ ತಕ್ಷಣ ಗೋಕಾಕ್ ಡಿಎಸ್‌ಪಿ ರಮೇಶಕುಮಾರ ನಾಯಕ, ಯಮಕನಮರಡಿ ಸಿಪಿಐ ರಮೇಶ ಛಾಯಾಗೋಳ, ಪಿಎಸ್‌ಐ ಬಿ.ವಿ.ನಾಮಗೌಡರ ಸ್ಥಳಕ್ಕೆ ಭೇಟಿ ನೀಡಿ ಶ್ವಾನದಳವನ್ನು ಕರೆಸಿ ಪರಿಶೀಲನೆ ನಡೆಸಿದರು. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸೂರ ಗ್ರಾಮದಲ್ಲಿ ಸರಣಿ ಕಳ್ಳತನ ನಡೆದರೂ, 2019 ರಲ್ಲಿ ಮಾಜಿ ಸಚಿವ ಶಶಿಕಾಂತ ಅವರ ಮನೆಯಲ್ಲಿ ಕಳ್ಳತನ, ಆರು ತಿಂಗಳ ಹಿಂದೆ ಗ್ರಾಮದ ಶ್ರೀ ಲಕ್ಷ್ಮೀ ದೇವಸ್ಥಾನ, ಇತರ ದೇವಾಲಯಗಳ ಹುಂಡಿ ಕಳ್ಳತನ, ಮೂರು ಮನೆಗಳ ಕಳ್ಳತನ ನಡೆದಿತ್ತು. ಹಲವು ಪ್ರಕರಣಗಳು ಗ್ರಾಮದಲ್ಲಿ ನಡೆದಿದ್ದರೂ ಪೊಲೀಸರು ಕಳ್ಳರನ್ನು ಹಿಡಿಯಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಹೊಸೂರ ಗ್ರಾಮಸ್ಥರದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.