ಭಾವೈಕ್ಯ ಸಂಕೇತ ಹುಕ್ಕೇರಿ ದಸರಾ ಉತ್ಸವ
Team Udayavani, Sep 30, 2019, 11:51 AM IST
ಹುಕ್ಕೇರಿ: 9 ದಿನಗಳ ಕಾಲ ನವರಾತ್ರಿ ಆಚರಣೆ ಮಾಡುವುದು ದೇಶದ ಸಂಪ್ರದಾಯ ಹಾಗೂ ಸಂಸ್ಕೃತಿಯಾಗಿದೆ. ಕಷ್ಟವಿದ್ದರೂ ಕೂಡ ಸರಳವಾಗಿ ದೇವಿ ಆರಾಧನೆ, ದಸರಾ ಉತ್ಸವ ಆಚರಿಸುವುದೇ ನಮ್ಮ ಪದ್ಧತಿಯಾಗಿದೆ ಶಾಸಕ ಉಮೇಶ ಕತ್ತಿ ಹೇಳಿದರು.
ಪಟ್ಟಣದ ಹಿರೇಮಠದ ದಸರಾ ಮಹೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ವಿವಿಧ ಭಾಗಗಳಲ್ಲಿ ದಸರಾ ಉತ್ಸವವನ್ನು ವಿಶೇಷ ಮತ್ತು ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಆದರೆ ಹುಕ್ಕೇರಿ ಪಟ್ಟಣದಲ್ಲಿ ಪ್ರತಿ ವರ್ಷ ನಡೆಯುವ ದಸರಾ ಉತ್ಸವ ಭಾವೈಕ್ಯತೆಯ ದಸರಾ ಆಗಿ ಮಾರ್ಪಟ್ಟಿರುವುದರಲ್ಲಿ ಹಿರೇಮಠದ ಚಂದ್ರಶೇಖರ ಸ್ವಾಮಿಗಳ ಕಾರ್ಯ ಅನನ್ಯವಾಗಿದೆ. ಪ್ರತಿ ವರ್ಷ ದಸರಾ ಹಬ್ಬ ಜಾತ್ರೆ ಹಾಗೆ ಕಂಗೋಳಿಸುತ್ತಿತ್ತು. ಆದರೆ ಈ ವರ್ಷವು ಪ್ರವಾಹ ಸಂಭವಿಸಿದ ಹಿನ್ನೆಲೆಯಲ್ಲಿ ದಸರಾ ಹಬ್ಬವನ್ನು ಧಾರ್ಮಿಕತೆಯ ತಳಹದಿಯಲ್ಲಿ ಸರಳವಾಗಿ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು.
ಪೀಠಾಧ್ಯಕ್ಷ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ದಸರಾ ಹಬ್ಬದಲ್ಲಿ ಪ್ಲಾಸ್ಟಿಕ್ ಮುಕ್ತ ಭಾರತ ಅಭಿಯಾನ ಹಾಗೂ ನೆರೆ ಸಂತ್ರಸ್ತರಿಗೆ ನೆರವು ನೀಡುವ ಸಂಕಲ್ಪ ಹೊಂದಲಾಗಿದೆ. ಈ ನಿಟ್ಟಿನಲ್ಲಿ ವಿವಿಧ ಸಂಘಗಳ ಸಹಯೋಗದಲ್ಲಿ ಪರಿಹಾರ ಹಾಗೂ ಜಾಗೃತಿ ಕಾರ್ಯಕ್ರಮ ಜರುಗಲಿದೆ. ಜನಪ್ರತಿನಿ ಧಿಗಳು ರಾಜಕೀಯ ಒಳಜಗಳ ಬದಿಗೊತ್ತಿ ನೆರೆ ಸಂತ್ರಸ್ತರಿಗೆ ಪರಿಹಾರ ದೊರಕಿಸಲು ಒಗ್ಗಟ್ಟಿನಿಂದ ಸ್ಪಂದಿಸಬೇಕು ಎಂದರು.
ಶಾಸಕರಾದ ಆನಂದ ಮಾಮನಿ ಮತ್ತು ದುರ್ಯೋಧನ ಐಹೊಳೆ ವಿವಿಧ ಮಂಟಪಗಳನ್ನು ಉದ್ಘಾಟಿಸಿದರು. ಶಿಕ್ಷಣ ಇಲಾಖೆ ಆಪ್ತರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಎಸ್, ಹಿರೇಮಠ ದಸರಾ ಕಾರ್ಯಕ್ರಮ ಉದ್ಘಾಟಿಸಿದರು. ಹಿರೇಮಠ ಕಟಕೋಳದ ಎಂ. ಚಂದರಗಿ ಮಠದ ತಪೋಭೂಷನ್ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಕಟಕೋಳದ ವೀರಭದ್ರ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಸಂಪ್ರದಾಯದಂತೆ ತಾಲೂಕು ದಂಡಾ ಧಿಕಾರಿ ತಹಶೀಲ್ದಾರ್ ರೇಷ್ಮಾ ತಾಳಿಕೋಟಿ ಧರ್ಮ ಧ್ವಜಾರೋಹಣನೆರವೇರಿಸಿದರು. ಪುರಸಭೆ ಹಾಗೂ ಹಿರೇಮಠದ ಸಂಯುಕ್ತ ಆಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತಭಾರತ ಅಭಿಯಾನದ ಜಾಗೃತಿ ನಡೆಯಿತು.
ಪರಗೌಡ ಪಾಟೀಲ, ಪುರಸಭೆ ಸದಸ್ಯರಾದ ರಾಜು ಮೂನ್ನೋಳಿ, ರೇಖಾ ಚಿಕ್ಕೋಡಿ, ಮಹಾದೇವಿ ಗಳತಿಮಠ, ಜಿಲ್ಲಾ ಶಿಕ್ಷಣಾ ಇಲಾಖೆ ಅಧಿ ಕಾರಿ ರೇವತಿ ಮಠದ, ಬಿಇಒ ಮೋಹನ ದಂಡಿನ, ಬೆಳಗಾವಿ ಡೈಟ್ ಉಪನ್ಯಾಸಕಿ ಪ್ರಭಾವತಿ ಪಾಟೀಲ ಇದ್ದರು. ಜಿ.ಎಸ್. ಹಿರೇಮಠ ಸ್ವಾಗತಿಸಿದರು. ಸಿ.ಎಂ. ದರಬಾರೆ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.