ದಾಖಲೆಯ ಅನುದಾನ ಹರಿದು ಬಂದ್ರೂ ಜನಸಾಗರವೇ ಇಲ್ಲ
Team Udayavani, Oct 25, 2018, 3:45 PM IST
ಚನ್ನಮ್ಮನ ಕಿತ್ತೂರು: ಈ ಬಾರಿಯ ಕಿತ್ತೂರು ಉತ್ಸವಕ್ಕೆ ದಾಖಲೆ ಪ್ರಮಾಣದಲ್ಲಿ ಅನುದಾನ ಹರಿದು ಬಂತು. ಅದರೆ ಜನಸಾಗರ ಮಾತ್ರ ಹರಿದು ಬರಲಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಬೆಳಗಿನ ಕಾರ್ಯಕ್ರಮಕ್ಕೆ ಜನರ ಕೊರತೆ ಕಾಡಿತು. ಜೊತೆಗೆ ವಿಚಾರಗೋಷ್ಠಿಗಳಂಥ ಕಾರ್ಯಕ್ರಮಕ್ಕೆ ಖಾಲಿ ಕುರ್ಚಿಗಳೇ ಗೋಚರಿಸಿದವು.
ಕೋಟೆಯ ಅಂದ ಹೆಚ್ಚಿಸಲು ಹಾಗೂ ಉತ್ಸವಕ್ಕೆ ಹೊಸ ಮೆರುಗು ಬರುವಂತೆ ಈ ಬಾರಿ ಹೆಚ್ಚಿನ ಅನುದಾನ ಬಂದಿದೆ. ಕಳೆದ ಸಲಕ್ಕಿಂತಲೂ 50 ಲಕ್ಷ ರೂ. ಅನುದಾನ ಹೆಚ್ಚಿಗೆ ಬಿಡುಗಡೆಯಾಗಿದೆ. ಮತ್ತೂ ಹಣ ಬೇಕಾದರೆ ಸರಕಾರ ಬಿಡುಗಡೆ ಮಾಡಲಿದೆ. ಆದ್ರೆ ಇಂಥ ವೈಭವಯುತ ಉತ್ಸವಕ್ಕೆ ಮಾತ್ರ ಜನರ ಕೊರತೆ ಕಂಡು ಬಂತು.
ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಲಿ ಎಂದು ಈ ಸಲ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೇ ಜಿಲ್ಲಾಡಳಿತ ಒತ್ತು ನೀಡಿದೆ. ಬಹುತೇಕ ವಿಚಾರಗೋಷ್ಠಿ, ಕವಿಗೋಷ್ಠಿ ಸೇರಿದಂತೆ ಉಪನ್ಯಾಸ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ. ಕ್ರೀಡಾಕೂಟ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಮನರಂಜನೆಯೇ ಹೆಚ್ಚಾಗಿದ್ದರೂ ಜನರ ಕೊರತೆ ಮಾತ್ರ ಎದ್ದು ಕಾಣುತ್ತಿತ್ತು. ಬೆಳಗ್ಗೆ ಉತ್ಸವದಲ್ಲಿ ನೀರಸ ಭಾವ ಕಂಡಿತು.
ಸಂಜೆಯಾಗುತ್ತಿದ್ದಂತೆ ಜನರು ಕೋಟೆಯತ್ತ ಆಗಮಿಸುತ್ತಿದ್ದು, ಇಳಿ ಹೊತ್ತಿನಲ್ಲಿ ಕೋಟೆಯ ಅಂದ ಹಾಗೂ ಮನರಂಜನಾ ಕಾರ್ಯಕ್ರಮ ವೀಕ್ಷಿಸಲು ಜನ ಬರುತ್ತಿದ್ದಾರೆ. ರಾತ್ರಿ ಒಂದು ಗಂಟೆವರೆಗೂ ನಡೆಯುವ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ. ಎರಡನೇ ದಿನವೂ ಜನರ ಉತ್ಸಾಹ ಕಮಡು ಬಾರದ್ದರಿಂದ ಉತ್ಸವದ ಸಂಭ್ರಮ ನೀರಸವಾಗಿತ್ತು. ಮೂರು ದಿನಗಳ ಕಾಲ ನಡೆಯುವ ಕಿತ್ತೂರು ಉತ್ಸವದಲ್ಲಿ ಈ ಬಾರಿ 80 ಲಕ್ಷ ರೂ.ಗೂ ಹೆಚ್ಚು ಅನುದಾನ ಬಂದರೂ ಕಾಟಾಚಾರಕ್ಕೆ ಎಂಬಂತೆ ಉತ್ಸವ ನಡೆಯುತ್ತಿದೆ. ಮಂಗಳವಾರ ಮೊದಲ ದಿನ ಉದ್ಘಾಟನೆಗೆ ಸೀಮಿತವಾದರೆ, ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಂತೂ ಜನರೇ ಇರಲಿಲ್ಲ.
ಝಗಮಗಿಸುತ್ತಿರುವ ಧ್ವನಿ-ಬೆಳಕು: ಕೋಟೆ ಅಂದವನ್ನು ಹೆಚ್ಚಿಸುತ್ತಿದ್ದ ಧ್ವನಿ-ಬೆಳಕಿನ ಆಟ ಕೆಲವು ವರ್ಷಗಳಿಂದ ಸ್ಥಗಿತಗೊಂಡಿತ್ತು. ಈ ಸಲ ಜಿಲ್ಲಾಡಳಿತದ ವಿಶೇಷ ಪ್ರಯತ್ನದಿಂದಾಗಿ ಧ್ವನಿ-ಬೆಳಕು ಆರಂಭಿಸಲಾಗಿದೆ. ಕೋಟೆ ಸುತ್ತಲೂ ಕಿತ್ತೂರು ಸಾಮ್ರಾಜ್ಯದ ಗತವೈಭವ ಸಾರಿ ಸಾರಿ ಹೇಳುತ್ತಿದೆ. ಜನರನ್ನು ಕೈಬೀಸಿ ಕರೆಯುತ್ತಿದೆ. ಸುಮಾರು 40 ನಿಮಿಷಗಳ ಕಾಲ ನಡೆಯುವ ಧ್ವನಿ-ಬೆಳಕಿನ ಕಣ್ಣಾಮುಚ್ಚಾಲೆ ಆಟಕ್ಕೆ ಜನ ಫಿದಾ ಆಗಿದ್ದಾರೆ.
ಉತ್ಸವದಲ್ಲಿ ಹಮ್ಮಿಕೊಂಡಿರುವ ವಸ್ತು ಪ್ರದರ್ಶನದಲ್ಲಿರುವ ಮಳಿಗೆಗಳಲ್ಲಿ ಖರೀದಿಯೇ ಇಲ್ಲದಂತಾಗಿದೆ. ಕೇವಲ ವಸ್ತುಗಳ ಪ್ರದರ್ಶನ ಇದ್ದು, ಖರೀದಿಗೆ ಗ್ರಾಹಕರೇ ಇಲೆ. ಕೃಷಿ ಪರಿಕರಗಳು, ಯಂತ್ರೋಪಕರಣಗಳು, ಗೃಹ ಬಳಕೆ ವಸ್ತುಗಳು ಸೇರಿದಂತೆ 40ಕ್ಕೂ ಹೆಚ್ಚು ಮಳಿಗೆಗಳು ಇವೆ. ಆದರೆ ಖರೀದಿ ಮಾತ್ರ ಅಷ್ಟಕ್ಕಷ್ಟೇ ಇದ್ದು, ವ್ಯಾಪಾರಸ್ಥರಲ್ಲಿ ನಿರಾಸೆ ಭಾವ ಮೂಡಿದೆ.
ಉತ್ಸವದಲ್ಲಿ ಉಪ ಚುನಾವಣೆಯ ಕಾಟ
ರಾಜಕಾರಣಿಗಳ ನಿರುತ್ಸಾಹದಿಂದಾಗಿ ಸಾರ್ವಜನಿಕರೂ ಇತ್ತ ತಲೆ ಹಾಕುತ್ತಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯ ಕರಿನೆರಳು ಉತ್ಸವದ ಮೇಲೆ ಆವರಿಸಿದೆ. ಉಪ ಚುನಾಣೆಯಲ್ಲಿ ಬಹುತೇಕ ಎಲ್ಲ ಜನಪ್ರತಿನಿಧಿಗಳು ನಿರತರಾಗಿದ್ದರಿಂದ ಕಿತ್ತೂರಿನತ್ತ ಯಾರೂ ಚಿತ್ತ ಹರಿಸುತ್ತಿಲ್ಲ. ಮೊದಲ ದಿನವೇ ಸಚಿವರ ಗೈರು, ಎರಡನೇ ದಿನವೂ ಜನಪ್ರತಿನಿ ಧಿಗಳು ಕಂಡು ಬರಲಿಲ್ಲ. ಉದ್ಘಾಟನೆ ಸಮಾರಂಭಕ್ಕೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವರಾದ ರಮೇಶ ಜಾರಕಿಹೊಳಿ, ಜಯಮಾಲಾ ಹಾಗೂ ಸಾ.ರಾ. ಮಹೇಶ ಅನುಪಸ್ಥಿತಿಯಿಂದಾಗಿ ಜನರಲ್ಲಿ ನಿರಾಸೆ ಮೂಡಿಸಿತ್ತು.
ಉತ್ಸವಕ್ಕೂ ತಟ್ಟಿತು ಲೋಕಲ್ ಪಾಲಿಟಿಕ್ಸ್
ಐತಿಹಾಸಿಕ ಕಿತ್ತೂರು ಉತ್ಸವದಲ್ಲಿ ಈ ಬಾರಿ ಸ್ಥಳೀಯ ರಾಜಕೀಯದ ನೆರಳು ಹೆಚ್ಚಾಗಿ ಕಂಡು ಬಂತು. ಕಳೆದ ಬಾರಿ ಶಾಸಕರಾಗಿದ್ದ ಡಿ.ಬಿ. ಇನಾಮದಾರ ಅವರ ಬೆಂಬಲಿಗರ ಸಂಖ್ಯೆ ಹೇಗಿತ್ತೋ ಆದೇ ರೀತಿ ಈ ಸಲ ನೂತನ ಶಾಸಕ ಮಹಾಂತೇಶ ದೊಡಗೌಡ್ರ ಅವರ ಬೆಂಬಲಿಗರ ಸಂಖ್ಯೆ ಹೆಚ್ಚಾಗಿ ಕಂಡು ಬಂತು. ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಒಳ ಗುದ್ದಾಟ ಉತ್ಸವಕ್ಕೂ ತಟ್ಟಿತು. ಮೊದಲ ದಿನವೂ ಬಿಜೆಪಿ ಶಾಸಕರ ಸಂಖ್ಯೆಯೇ ಹೆಚ್ಚಿತ್ತು. ಕಾಂಗ್ರೆಸ್ ಸಂಸದ ಪ್ರಕಾಶ ಹುಕ್ಕೇರಿ, ಶಾಸಕರಾದ ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ ಮಾತ್ರ ಕಂಡು ಬಂದರೆ, ಬಿಜೆಪಿಯ ಬಹುತೇಕ ಎಲ್ಲ ಶಾಸಕರು-ಸಂಸದರು ಗೋಚರಿಸಿದರು.
ಕಿತ್ತೂರು ಉತ್ಸವದಲ್ಲಿ ವಿಚಾರಗೋಷ್ಠಿ, ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂಬ ಜನರ ಅಭಿರುಚಿಯೇ ಇಲ್ಲದಂತಾಗಿದೆ. ಬೆಳಗ್ಗೆ ನಡೆಯುವ ಬಹುತೇಕ ಕಾರ್ಯಕ್ರಮಗಳಲ್ಲಿ ಜನರ ಕೊರತೆ ಇದ್ದೇ ಇದೆ. ಇದು ಪ್ರತಿ ವರ್ಷ ಕಂಡು ಬರುವ ಸಮಸ್ಯೆ. ಅದೇ ರಾತ್ರಿ ನಡೆಯುವ ಮನರಂಜನಾ ಕಾರ್ಯಕ್ರಮ ಹಾಗೂ ಕ್ರೀಡಾಕೂಟ ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ.
. ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ,
ಕಲ್ಮಠ ರಾಜಗುರು ಸಂಸ್ಥಾನ ಮಠ
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.