ಅಕ್ರಮ ಭೂ ಮಂಜೂರಾತಿ
Team Udayavani, Dec 18, 2018, 6:00 AM IST
ಬೆಳಗಾವಿ: ಭೂ ಮಂಜೂರಾತಿ, ಒತ್ತುವರಿ ಭೂಮಿ ಸಕ್ರಮ ಸೇರಿ ಸರಕಾರಿ ಭೂಮಿ ಮಂಜೂರಾತಿ ಪ್ರಕ್ರಿಯೆಯಲ್ಲಿ ನಿಯಮಾವಳಿ ಗಾಳಿಗೆ ತೂರಿರುವುದು ಸಿಎಜಿ ವರದಿಯಲ್ಲಿ ಬಹಿರಂಗಗೊಂಡಿದೆ. 837 ಎಕರೆ ಭೂಮಿ ಅಕ್ರಮವಾಗಿ ಮಂಜೂರು ಮಾಡಿರುವುದು, 1,055.19 ಎಕರೆ ಒತ್ತುವರಿಯನ್ನು ನಿಯಮ ಬಾಹಿರವಾಗಿ ಸಕ್ರಮಗೊಳಿಸಿರುವುದು ಹಾಗೂ 2.44 ಲಕ್ಷ ಎಕರೆ ಭೂಮಿಯ ಒತ್ತುವರಿ ತೆರವುಗೊಳಿಸಿದ್ದರೂ ಸರಕಾರದ ಸುಪರ್ದಿಗೆ ತೆಗೆದುಕೊಳ್ಳದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಸೋಮವಾರ ಸದನದಲ್ಲಿ ಸರಕಾರಿ ಭೂಮಿ ಮಂಜೂರಾತಿ, ಗುತ್ತಿಗೆ, ಒತ್ತುವರಿಗಳ ತೆರವುಗೊಳಿಸುವಿಕೆ ಕುರಿತ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ವರದಿ ಮಂಡಿಸಲಾಗಿದೆ. ವರದಿ ಪ್ರಕಾರ, ಸರಕಾರಿ ಭೂಮಿ ಖಾಸಗಿಯವರಿಗೆ ಮಂಜೂರು ಮಾಡುವಲ್ಲಿ ನಿಯಮ ಉಲ್ಲಂಘಿಸಿದ್ದು, 837 ಎಕರೆ ಅಕ್ರಮ ವಾಗಿ ಮಂಜೂರು ಮಾಡಲಾಗಿದೆ. ಜತೆಗೆ 1,055.19 ಎಕರೆ ಅಕ್ರಮ ಸಾಗುವಳಿಯನ್ನು ನಿಯಮ ಬಾಹಿರವಾಗಿ ಸಕ್ರಮಗೊಳಿಸಲಾಗಿದೆ.
ಒತ್ತುವರಿ ತೆರವುಗೊಳಿಸಿದ ಅನಂತರವೂ 2.44 ಲಕ್ಷ ಎಕರೆ ಒತ್ತುವರಿ ಜಮೀನು ಸ್ವಾಧೀನಪಡಿಸಿಕೊಳ್ಳದೆ ಒತ್ತುವರಿದಾರರ ಸುಪರ್ದಿಯಲ್ಲೇ ಇದೆ. ಅರ್ಜಿಯೇ ಸಲ್ಲಿಸದ 11 ಮಂದಿಗೆ ಅಕ್ರಮವಾಗಿ 47.21 ಎಕರೆ ಮಂಜೂರು ಮಾಡಲಾಗಿದೆ. ಅರ್ಹರಲ್ಲದ 24 ಫಲಾನು ಭವಿಗಳಿಗೆ 117 ಎಕರೆ ಮಂಜೂರು ಮಾಡಲಾಗಿದೆ. ಮಾಹಿತಿ ಖಚಿತಪಡಿಸಿಕೊಳ್ಳದೆ 10 ಕಡೆ 390.38 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಸಿಎ ನಿವೇಶನ, ಬಿ ಖರಾಬು, ಗುಂಡುತೋಪು, ಕೆರೆ, ಶ್ಮಶಾನ ಇತ್ಯಾದಿ ಜಮೀನು ಮಂಜೂರು ಮಾಡಲು ಅವಕಾಶವಿಲ್ಲದಿದ್ದರೂ 283.16 ಎಕರೆ ಭೂಮಿಯನ್ನು ಕಂದಾಯ ಇಲಾಖೆ ಹಾಗೂ ಪೌರಾಡಳಿತ ಇಲಾಖೆ ವ್ಯಾಪ್ತಿಯ 204.14 ಎಕರೆಯನ್ನು 86 ಫಲಾನುಭವಿಗಳಿಗೆ ಮಂಜೂರು ಮಾಡಿರುವ ಬಗ್ಗೆ ವರದಿಯಲ್ಲಿ ಹೇಳಲಾಗಿದೆ.
ಸರಕಾರದಿಂದ ರಿಯಾಯಿತಿ ದರದಲ್ಲಿ ಭೂಮಿ ಮಂಜೂರು ಮಾಡುವ ವೇಳೆಯೂ 56 ಮಂದಿ ಅನರ್ಹ ಫಲಾನುಭವಿಗಳಿಗೆ 196 ಕೋಟಿ ರೂ. ರಿಯಾಯಿತಿ ನೀಡಿರುವುದು ಪ್ರಸ್ತಾವಿಸಲಾಗಿದೆ. ಹೊಸ ಒತ್ತುವರಿ ಗುರುತಿಸಿಲ್ಲ 2017ರ ಮಾರ್ಚ್‌ವರೆಗೆ ರಾಜ್ಯದಲ್ಲಿ 4,48,615 ಎಕರೆ ಭೂಮಿ ಒತ್ತುವರಿಯಾಗಿತ್ತು. ಬೆಂಗಳೂರು ನಗರದಲ್ಲಿ ಹೊರತುಪಡಿಸಿದಂತೆ ಆಗಸ್ಟ್ 2013ರ ಅನಂತರ ಆಗಿರುವ ಯಾವುದೇ ಹೊಸ ಒತ್ತುವರಿ ಗುರುತಿಸಿಲ್ಲ. ಒತ್ತುವರಿ ತೆರವುಗೊಳಿಸಿದ ಬಳಿಕ ಸ್ವಾಧೀನಪಡಿಸಿಕೊಳ್ಳಲಾದ 2,62,293 ಎಕರೆ ಭೂಮಿ ಪೈಕಿ 18,273.74 ಎಕರೆ ಭೂಮಿ ಮಾತ್ರ ಸಂರಕ್ಷಿಸಲಾಗಿದೆ. ಉಳಿದಂತೆ 2.44 ಲಕ್ಷ ಎಕರೆ ಭೂಮಿ ಯನ್ನು ಸಂರಕ್ಷಿಸುವ ಪ್ರಯತ್ನ ಮಾಡಿಲ್ಲ.
ನಾಲ್ಕು ಜಿಲ್ಲೆಗಳಲ್ಲಿ ಒತ್ತುವರಿಯಾಗಿದ್ದ 89.31 ಎಕರೆ ಭೂಮಿ ಒತ್ತುವರಿದಾರರಿಗೇ ಮಂಜೂರು ಮಾಡಲಾಗಿದೆ. ಈ ಬಗ್ಗೆ ಸಿಎಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಒತ್ತುವರಿ ಕುರಿತ ಪ್ರಕರಣಗಳ ತ್ವರಿತ ವಿಲೇವಾರಿಗೆ 2016ರಲ್ಲಿ ಸ್ಥಾಪಿಸಿರುವ ವಿಶೇಷ ನ್ಯಾಯಾಲಯಕ್ಕೆ ಕೇವಲ 69 ಪ್ರಕರಣ ವರ್ಗಾಯಿಸಲಾಗಿದೆ. 1,131 ಪ್ರಕರಣಗಳನ್ನು ವಿವಿಧ ಸಿವಿಲ್ ಹಾಗೂ ಕಂದಾಯ ನ್ಯಾಯಾಲಯಗಳಿಂದ ವರ್ಗಾವಣೆ ಮಾಡುವುದು ಬಾಕಿಯಿದೆ. ಹೀಗಾಗಿ 1,64,874.24 ಎಕರೆಗೆ ಸಂಬಂಧಿಸಿದ 47,348 ಪ್ರಕರಣಗಳ ವಿಲೇವಾರಿ ಬಾಕಿ ಉಳಿದುಕೊಂಡಿದೆ.
ಕಾಂಗ್ರೆಸ್‌ಗೆ 15 ಗುಂಟೆ
ಕಂದಾಯ ನಿಯಮಗಳಲ್ಲಿ ರಾಜಕೀಯ ಪಕ್ಷಗಳಿಗೆ ಭೂಮಿ ಮಂಜೂರು ಮಾಡಲು ಅವಕಾಶವಿಲ್ಲ. ಆದರೂ ಚೆನ್ನ ಪಟ್ಟಣ ತಾಲೂಕು-ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಬೋಳಪ್ಪನ ಹಳ್ಳಿಯಲ್ಲಿ 10 ಗುಂಟೆ, ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಮಂಗಳವಾರ ಪೇಟೆ ಯಲ್ಲಿ 5 ಗುಂಟೆ ಮಂಜೂರು ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.