ತಮಿಳುನಾಡಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 300 ಕೆ.ಜಿ. ಬೆಳ್ಳಿ ವಶ
Team Udayavani, Feb 2, 2020, 10:02 PM IST
ಬೆಳಗಾವಿ: ಮಹಾರಾಷ್ಟ್ರದಿಂದ ತಮಿಳುನಾಡಿಗೆ ಅಕ್ರಮವಾಗಿ ಬೆಳ್ಳಿ ಗಟ್ಟಿ ಹಾಗೂ ಆಭರಣಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 63 ಲಕ್ಷ ರೂ. ಮೌಲ್ಯದ 300 ಕೆ.ಜಿ. ಬೆಳ್ಳಿ, ಎರಡು ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಹುಕ್ಕೇರಿ ತಾಲೂಕಿನ ದಾದಬಾನಹಟ್ಟಿ ಬಳಿ ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ಸವಾಪೇಟ ಸೇಲಂನ ವಿಜಯಕುಮಾರ ಆತ್ಮಾರಾಮ ಶಿಂಧೆ ಹಾಗೂ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕಟಾವ್ ತಾಲೂಕಿನ ಬೆಳೆವಾಡಿಯ ರಿಯಾಜ್ ಶಾಕೀರಹುಸೇನ ಮುಲ್ಲಾನಿ ಎಂಬವರನ್ನು ಬಂಧಿಸಿರುವ ಪೊಲೀಸರು ಅವರಿಂದ ಡಸ್ಟರ್ ಕಾರು, 300 ಕೆ.ಜಿ.ಬೆಳ್ಳಿ ಗಟ್ಟಿ, ಮೂರು ಲಕ್ಷ ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ.
ತಮಿಳುನಾಡಿನ ಸೇಲಂಗೆ ಡಸ್ಟರ್ ಕಾರಿನಲ್ಲಿ ಅಕ್ರಮವಾಗಿ ಬೆಳ್ಳಿ ಗಟ್ಟಿ ಹಾಗೂ ಆಭರಣಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಯಮಕನಮರಡಿ ಹಾಗೂ ಡಿಸಿಐಬಿ ಘಟಕ ಪೊಲೀಸರು ಈ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಈ ಅಕ್ರಮ ಸಾಗಾಟದ ಪ್ರಕರಣ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಲಭಿಸಿದೆ.
ಡಿಸಿಐಬಿ ಘಟಕ ಇನ್ ಸ್ಪೆಕ್ಟರ್ ನಿಂಗನಗೌಡ ಪಾಟೀಲ, ಯಮಕನಮರಡಿಯ ರಮೇಶ ಪಾಟೀಲ, ಎಎಸ್ ಐ ಡಿ.ಕೆ. ಪಾಟೀಲ, ಟಿ.ಕೆ. ಕೊಳಚಿ, ಎಂ.ಜಿ. ಮುಜಾವರ, ಎಸ್.ಎಂ. ಮಂಗಣ್ಣವರ, ಎಂ.ಆರ್. ಪಠಾಣ, ವಿ.ಆರ್. ನಾಯಕ, ಆರ್.ಬಿ.ಕಲ್ಲೋಳ್ಳಿ ಅವರ ತಂಡ ಈ ಯಶಸ್ವಿ ದಾಳಿಯನ್ನು ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Mumbai: ಬಾಬಾ ಸಿದ್ದೀಕಿ ಸಾವು ದೃಢೀಕರಿಸಲು ಆಸ್ಪತ್ರೆ ಬಳಿ 30 ನಿಮಿಷ ಕಾದು ಕುಳಿತಿದ್ದ ಹಂತಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.