ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಆರೋಪಿಗಳಿಗೆ ಗಲ್ಲು ಶಿಕ್ಷೆ ಕೊಡಿ
Team Udayavani, Aug 30, 2021, 6:22 PM IST
ಮೂಡಲಗಿ: ತಾಲೂಕಿನ ರಾಜಾಪೂರ ಗ್ರಾಮದ ದಲಿತ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ, ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಪ್ರಮುಖ ನಗರಲ್ಲಿ ಮೆರವಣಿಗೆ ಮೂಲಕ ಕಲ್ಮೇಶ್ವರ ವೃತ್ತದಲ್ಲಿ ಜಮಾಯಿಸಿ, ಅತ್ಯಾಚಾರ ಮಾಡಿದ ಐದು ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ತಹಶೀಲ್ದಾರ ಮೂಲಕ ಸಿಎಂ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸದರು.
ದಲಿತ ಮುಖಂಡ ರಮೇಶ ಸಣ್ಣಕ್ಕಿ ಮಾತನಾಡಿ, ತಾಲೂಕಿನ ರಾಜಾಪೂರ ದಲಿತ ವಿದ್ಯಾರ್ಥಿನಿ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿ ಜೀವ ಬೇದರಿಕೆ ಹಾಕಿದ್ದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ ಹಾಗೂ ತಾಲೂಕಿನ ದಲಿತ ಸಂಘಟನೆಗಳ ಒಕೂಟ್ಕದಿಂದ ಉಗ್ರವಾಗಿ ಖಂಡಿಸುತ್ತೆವೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ನೀಚ ಕೃತ್ಯಗಳು ಮೇಲಿಂದ ಮೇಲೆ ದಲಿತ ಸಮುದಾಯದ ಮಹಿಳೆಯರನ್ನು ಗುರಿಯಾಗಿಟ್ಟು ಹೆಚ್ಚು ನಡೆಯುತ್ತಿರುವುದು ಖಂಡನೀಯ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರಗಳಲ್ಲಿ ಇಂಥಹ ಅಮಾನವಿಯ ಕೃತ್ಯಗಳು ಅವ್ಯಾಹತವಾಗಿ ನಡೆದಿರುತ್ತವೆ ಆದರೆ ನಮ್ಮ ರಾಜ್ಯದಲ್ಲಿಯೂ ಕೂಡಾ ನಡೆದಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ ಎಂದರು.
ಬಸವರಾಜ ಕಾಡಾಪೂರ ಮಾತನಾಡಿ, ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನ ನಮ್ಮ ತಾಲೂಕಿನಲ್ಲಿ ನಡೆದಿರುವ ಘಟನೆ ಖಂಡಿನಿಯ. ಡಾ. ಅಂಬೇಡ್ಕರ್ ಅವರು ಎಸ್.ಸಿ ಸಮುದಾಯಕ್ಕೆ ಅಷ್ಟು ಮೀಸಲಾತಿ ನೀಡಿಲ್ಲ, ಹಿಂದುಳಿದ ಎಲ್ಲಾ ವರ್ಗದವರಿಗೂ ಮೀಸಲಾತಿ ನೀಡಿದ್ದಾರೆ. ಪ್ರತಿಭಟನೆ ಒಂದು ಸಮುದಾಯಕ್ಕೆ ಸೀಮಿತವಾಗಬಾರದು, ಆದರಿಂದ ಎಲ್ಲಾ ಸಮುದಾಯದ ಜನರು ಭಾಗವಹಿಸಿ ಇಂತಹ ಕೃತ್ಯ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದರು.
ಇದನ್ನೂ ಓದಿ:ಸಂತೆಕಟ್ಟೆ: ನಡುರಸ್ತೆಯಲ್ಲೇ ಯುವತಿಗೆ ಚೂರಿಯಿಂದ ಇರಿದು, ತಾನು ಆತ್ಮಹತ್ಯೆಗೆ ಯತ್ನಿಸಿದ ಯುವಕ
ಎಬನೇಜರ ಕರಬನ್ನವರ ಮಾತನಾಡಿ, ಮಹಿಳೆಯರ ಮೇಲೆ ಹಾಗೂ ದಲಿತರ ಮೇಲೆಯೂ ಕೂಡಾ ನಿರಂತರ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಲೇ ಇವೆ. ಇಂತಹ ಘಟನೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹೀನ ಕೃತ್ಯಗಳಾಗಿವೆ. ಜುಲೈ 12ರಂದು ರಾಜಾಪೂರ ಗ್ರಾಮದಲ್ಲಿ ನಡೆದ ಸಾಮೂಹಿಕ ಅತ್ಯಚಾರದ ಬಗ್ಗೆ ಯಾರಿಗೂ ಹೇಳದಂತೆ ಸಂತ್ರಸ್ಥೆ ಹಾಗೂ ಕುಟುಂಬಕ್ಕೆ ಜೀವ ಬೇದರಿಕೆ ಹಾಕಿರುವುದು ಖಂಡನೀಯವಾಗಿದೆ ಎಂದರು.
ಸಂಘಟನೆಯ ಮುಖಂಡ ಬಾಳೇಶ ಬನಹಟ್ಟಿ, ವಂಸತ ಕಾಡನ್ನವರ, ರಮೇಶ ಹರಿಜನ, ಲಕ್ಷ್ಮಣ ಕೆಳಗಡೆ, ಇಜಾಜಅಹ್ಮದ ಕೋಟಭಾಗಿ, ಆನಂದ ಭಂಗೆನ್ನವರ ಮಾತನಾಡಿ, ಇಂತಹ ಕಾಮುಕರಿಗೆ ಅತ್ಯಾಚಾರ ಮಾಡಿದ ಸ್ಥಳದಲ್ಲೇ ಗುಂಡಿಟ್ಟಿ ಕೊಲ್ಲಬೇಕು ಎಂದು ಆಕ್ರೋಶ ವ್ಯಕ್ತಪಸಿದರು.
ಈ ಸಂದರ್ಭದಲ್ಲಿ ಮರೆಪ್ಪ ಮರೆಪ್ಪಗೋಳ, ಪ್ರಭಾಕರ ಭಂಗೆನ್ನವರ, ಶಾಬೂ ಸಣ್ಣಕ್ಕಿ, ಅಶೋಕ ಉದ್ದಪ್ಪನ್ನರವ, ಮಾರುತಿ ಹರಿಜನ, ವಿಲಾಸ ಸಣ್ಣಕ್ಕಿ, ಯಶವಂತ ಮಂಟೂರ, ಈರಪ್ಪ ಢವಳೇಶ್ವರ, ಮಾರುತಿ ಮಾವರಕರ, ರಾಮಣ್ಣ ಈಟಿ, ಶಾಂತಾಬಾಯಿ ಮೇತ್ರಿ, ಜಯವಂತ ನಾಗನ್ನವರ, ಸುಂದರ ಬಾಲಪ್ಪನ್ನವರ, ಭೀಮಶೀ ಉದ್ದಪ್ಪನ್ನರವ, ಯಮನಪ್ಪ ಮೇತ್ರಿ ಹಾಗೂ ಅನೇಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.