ಇಂಗಳಿ ಗ್ರಾಮ; ಜನಮನ ಸೆಳೆದ ಜಂಗಿ ನಿಕಾಲಿ ಕುಸ್ತಿ
ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವ ಪ್ರಸಾದ ಜೊಲ್ಲೆ ಕುಸ್ತಿ ವೀಕ್ಷಿಸಿದರು.
Team Udayavani, Sep 1, 2022, 6:13 PM IST
ಚಿಕ್ಕೋಡಿ: ತಾಲೂಕಿನ ಇಂಗಳಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ನಡೆದ ನಿಕಾಲಿ ಜಂಗಿ ಕುಸ್ತಿಗಳು ಜನಮನ ಸೆಳೆದವು. ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಹೆಸರಾಂತ ಕುಸ್ತಿಪಟುಗಳು ಭಾಗಿಯಾಗಿದ್ದರು.
ಕುಸ್ತಿ ನೋಡಲು ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು. ದಾವಣಗೆರೆಯ ಕಾರ್ತಿಕ ಕಾಟೆ, ಬಾರಾಮತಿಯ ಭರತ ಮದನೆ ನಡುವೆ 2ನೇ ಸ್ಥಾನಕ್ಕಾಗಿ ಕುಸ್ತಿ ಜರುಗಿತು. ಈ ಇದರಲ್ಲಿ ಕಾರ್ತಿಕ ಕಾಟೆ ಜಯಶಾಲಿಯಾದರು. ಇನ್ನು ತೀವ್ರ ಕುತೂಹಲ ಕೆರಳಿಸಿದ್ದ 1ನೇ ಸ್ಥಾನದ ಕುಸ್ತಿಯು ಪಂಜಾಬದ ಭೋಲಾ ಹಾಗೂ ಹರ್ಯಾಣಾದ ವಿಕ್ರಾಂತಕುಮಾರ ಮಧ್ಯೆ ನಡೆಯಿತು. ಇದರಲ್ಲಿ ಪಂಜಾಬದ ಭೋಲಾ ಜಯಶಾಲಿಯಾದರು. ಜಯಶಾಲಿಯಾದ ಕುಸ್ತಿಪಟುಗಳಿಗೆ ಗದೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಶಾಸಕ ಗಣೇಶ ಹುಕ್ಕೇರಿ ಹಾಗೂ ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವ ಪ್ರಸಾದ ಜೊಲ್ಲೆ ಕುಸ್ತಿ ವೀಕ್ಷಿಸಿದರು. ಈ ಕುಸ್ತಿ ಪಂದ್ಯಾವಳಿಗಳಿಗೆ 10 ಸಾವಿರ ರೂ. ದೇಣಿಗೆ ನೀಡುವುದಾಗಿ ಬಸವಪ್ರಸಾದ ಜೊಲ್ಲೆ ತಿಳಿಸಿದರು. ಶಾಸಕ ಹುಕ್ಕೇರಿಯವರು ಈ ಬಾರಿಯ ಕುಸ್ತಿ ಪಂದ್ಯಾವಳಿಗೆ 25 ಸಾವಿರ ಹಾಗೂ ಮುಂದಿನ ವರ್ಷದ ಕುಸ್ತಿ ಪಂದ್ಯಾವಳಿಗೆ 50 ಸಾವಿರ ರೂ. ನೀಡುವುದಾಗಿ ಘೋಷಿಸಿದರು. ಗ್ರಾಪಂ ಮಾಜಿ ಸದಸ್ಯರಾದ ಸಂಜಯ ಕುಡಚೆ, ವಿಶಾಲ ಕುಡಚೆ ಸೇರಿ 30 ಸಾವಿರ ರೂ. ದೇಣಿಗೆ ನೀಡಿದರಲ್ಲದೇ ಮುಂದಿನ ವರ್ಷ 1 ಲಕ್ಷ ರೂ. ನೀಡುವುದಾಗಿ ಸಂಜಯ ಕುಡಚೆ ತಿಳಿಸಿದರು.
ವಸಂತ ಜೋಶಿ, ಆನಂದ ಜಾಧವ, ಶಂಕರ ಪೂಜಾರಿ, ಸಂಜಯ ಕುಡಚೆ ಗಣಪತಿ ಧನವಡೆ, ರಾಮಾ ಐವಳೆ, ಶಶಿಕಾಂತ ಧನವಡೆ, ಭೂಪಾಲ ಪನದೆ, ಮಾರುತಿ ಮಗದುಮ್ಮ. ಬಾಳು ಅವಟಿ, ಮಾಹಾದೆವ ಜಾಧವ, ಕುಶಪ್ಪಾ ಅಂಬಿ, ನಂದು ಘಾಟಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.