ಮುಂಗಾರು ಉದ್ದು ಬೆಳೆಗೆ ಕೀಟಗಳ ಕಾಟದ ʼಗುದ್ದು’
ಮುಂಗಾರು ಮುಂಚೆ ಸುರಿದ ಮಳೆ ತಂದ ಭರವಸೆ; ತೆಲಸಂಗದಲ್ಲಿ 23,195 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ
Team Udayavani, Jul 21, 2022, 5:03 PM IST
ತೆಲಸಂಗ: ಹೋಬಳಿ ಗ್ರಾಮಗಳಲ್ಲಿನ ಮುಂಗಾರು ಉದ್ದು ಬೆಳೆಯಲ್ಲಿ ಜಿಗಿ, ಹೇನು ಮತ್ತು ಕೀಟಗಳು ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕವನ್ನುಂಟು ಮಾಡಿದೆ. ಒಣ ಬೇಸಾಯ ಅವಲಂಬಿಸಿರುವ ತೆಲಸಂಗ ಗ್ರಾಮವೊಂದರಲ್ಲಿಯೇ 23,195 ಹೆಕ್ಟೇರ್ ಭೂಮಿಯಲ್ಲಿ ಉದ್ದು ಬಿತ್ತನೆ ಆಗಿದೆ.
ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಮುಂಚೆ ಸುರಿದ ಪರಿಣಾಮ ಶೇ.60 ಉದ್ದು ಬೆಳೆ ಬಿತ್ತನೆಯಾಗಿದೆ. ಜೂನ್ ತಿಂಗಳಲ್ಲಿ ಮಳೆ ಇಲ್ಲದೆ ಕಮರುವ ಹಂತದಲ್ಲಿದ್ದ ಬೆಳೆಗಳಿಗೆ ಜುಲೈ ತಿಂಗಳಲ್ಲಿ ಸುರಿದ ಮಳೆ ಆಕ್ಸಿಜನ್ ನೀಡಿದಂತಾಗಿತ್ತು. ಬೆಂಬಿಡದೆ ಸುರಿದ ತುಂತುರು ಮಳೆಗೆ ಬೆಳೆ ನಳನಳಿಸುತ್ತಿವೆ ಏನೋ ನಿಜ. ಆದರೆ 15 ದಿನಗಳಿಂದ ಬಿಸಲನ್ನೇ ಕಾಣದೆ ತುಂತುರು ಮಳೆ, ತಂಪಾದ ವಾತಾವರಣಕ್ಕೆ ಜಿಗಿ ರೋಗ, ಕೀಟಬಾಧೆ ಕಾಣಿಸಿಕೊಂಡಿದೆ. ಇಳುವರಿಯಲ್ಲಿ ಭಾರಿ ಪ್ರಮಾಣದ ಹೊಡೆತ ಬಿದ್ದಂತಾಗಿದೆ.
ಹೂವು, ಬಳ್ಳಿ, ಕಾಯಿ ಕಟ್ಟುವ ಹಂತದಲ್ಲಿ ರೋಗ ಕಾಣಿಸಿದ್ದು, ಜಿಗಿ ಮತ್ತು ಕೀಟಗಳ ನಿಯಂತ್ರಣಕ್ಕೆ ರೈತರು ಔಷಧಿ ಸಿಂಪರಿಸುತ್ತಿದ್ದಾರೆ. ಕಳೆದ ನಾಲ್ಕಾರು ವರ್ಷದಿಂದ ಮಳೆ ಕಡಿಮೆಯಾಗಿ ಒಂದಿಲ್ಲೊಂದು ಸಂಕಷ್ಟ ಎದುರಿಸುತ್ತಿರುವ ಒಣ ಬೇಸಾಯದ ರೈತರಿಗೆ ಸದ್ಯದ ವಾತಾವರಣ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆ ತೆಗಿಯಿಸಿದರೂ ನಷ್ಟ: ಈ ತುಂತುರು ಮಳೆಗೆ ಬೆಳೆಯಷ್ಟೇ ವೇಗವಾಗಿ ಕಳೆ ಕೂಡ ಬೆಳೆದಿದೆ. ಭೂಮಿಯನ್ನು ಬೇಸಿಗೆಯಲ್ಲಿ ಹದಗೊಳಿಸಲು, ಬಿತ್ತನೆ ಮಾಡಲು ಹಾಗೂ ಬೀಜ-ಗೊಬ್ಬರಕ್ಕೆ ಮಾಡಿದ ಖರ್ಚು ಬೆಟ್ಟದಷ್ಟಾಗಿದೆ. ಈಗ ಹವಾಮಾನ ವೈಪರೀತ್ಯದಿಂದ ಇಳುವರಿಯಲ್ಲಿ ಬೀಳುವ ಹೊಡೆತದಿಂದ ಸದ್ಯ ಬೆಳೆಯಿಂದ ಖರ್ಚು ತೆಗೆಯುವುದೂ ಕಷ್ಟ. ಇಂತಹದರಲ್ಲಿ ಒಂದು ಬಾರಿ ಕಳೆ ತೆಗೆಯಿಸಿದ್ದ ರೈತ ಸದ್ಯಕ್ಕೆ ತುಂತುರು ಮಳೆಗೆ ಬೆಳೆಗಿಂತ ವೇಗವಾಗಿ ಬೆಳೆದ ಕಳೆ ತೆಗೆಯಿಸಲು ಕೂಲಿ ಖರ್ಚು ಎಲ್ಲಿಂದ ತರಬೇಕು. ಹಾಗೇನಾದರೂ ಕೂಲಿ ಕೊಟ್ಟು ಕಳೆ ತೆಗೆಸಿದರೆ ಬರುವ ಉತ್ಪನ್ನದಲ್ಲಿ ವ್ಯಯಿಸಿದ ಹಣವೂ ಕೈಗೆಟಕುವುದಿಲ್ಲ. ಹಾಗಾಗಿ ಕಳೆ ತೆಗೆಯಿಸಿದರೂ ನಷ್ಟ ಅಂತ ರೈತರು ಕೈ ಚೆಲ್ಲಿ ಕುಳಿತಿದ್ದಾರೆ.
ಉದ್ದು ಬಿತ್ತನೆಗೆ ಸಕಾಲಕ್ಕೆ ಮಳೆ ಸುರಿಯಿತು. ಆದರೆ ಸದ್ಯಕ್ಕೆ ಎಡಬಿಡದೆ ಸುರಿಯುತ್ತಿರುವ ತುಂತುರು ಮಳೆಯಿಂದ ಅರ್ಧದಷ್ಟು ಬೆಳೆಯ ಉತ್ಪನ್ನ ರೋಗಕ್ಕೆ ಬಲಿ ಆಯಿತು. ರೋಗ ನಿಯಂತ್ರಣ ಮಾಡಲಿಕ್ಕೆ ಖರ್ಚು ಮಾಡುವ ಸ್ಥಿತಿ ಸದ್ಯಕ್ಕೆ ರೈತರಿಗಿಲ್ಲ. –ಮೃತ್ಯುಂಜಯ ಮಠದ, ರೈತ, ತೆಲಸಂಗ
ಸೂರ್ಯ ಕಾಣಿಸಿಕೊಳ್ಳದೆ ಹಗಲು ರಾತ್ರಿ ಮೋಡ, ತಂಪಾದ ಹವೆಯೊಂದಿಗೆ ಜಿಟಿ ಜಿಟಿ ಮಳೆ ಸುರಿದಿದ್ದರಿಂದ ರೋಗ ಕಾಣಿಸಿಕೊಂಡಿದೆ. ಇಂತಹ ಹವಾಮಾನ ಇದ್ದಾಗ ಬೆಳೆಗಳಿಗೆ ತೊಂದರೆ ಆಗುತ್ತದೆ. ಉದ್ದು ಬೆಳೆಗೆ ಕಾಣಿಸಿಕೊಂಡ ರೋಗ ಹಾಗೂ ಕೀಟದಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ಕೃಷಿ ಅ ಧಿಕಾರಿಗಳ ಅಥವಾ ತಜ್ಞರ ಸಲಹೆ ಪಡೆದು ಆರೈಕೆ ಮಾಡುವುದು ಉತ್ತಮ. –ಯಂಕಪ್ಪ ಉಪ್ಪಾರ, ಕೃಷಿ ಅಧಿಕಾರಿ, ತೆಲಸಂಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.