ಆಪರೇಷನ್‌ಗೆ ಜೆಡಿಎಸ್‌ ಪ್ರತ್ಯಸ್ತ್ರ


Team Udayavani, Dec 21, 2018, 6:00 AM IST

c-41.jpg

ಬೆಳಗಾವಿ: ಬಿಜೆಪಿ ನಡೆಸಬಹುದಾದ ಆಪರೇಷನ್‌ ಕಮಲಕ್ಕೆ ಪ್ರತ್ಯಸ್ತ್ರ ಹೂಡಲು ಜೆಡಿಎಸ್‌ ಈಗಲೇ ಸಜ್ಜಾಗುತ್ತಿರುವಂತಿದೆ. ಆ ಕಾರಣಕ್ಕಾಗಿಯೇ, ಸಂಪುಟ ವಿಸ್ತರಣೆಗೆ ಕಾಂಗ್ರೆಸ್‌ ಹೈಕಮಾಂಡ್‌ ಒಪ್ಪಿದರೂ ಜೆಡಿಎಸ್‌ ತನ್ನ ಕೋಟಾದ ಎರಡು ಸ್ಥಾನ ಹಾಗೇ ಉಳಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ.

ಒಂದೊಮ್ಮೆ ಆಪರೇಷನ್‌ ಕಮಲ ಕಾರ್ಯಾಚರಣೆ ನಡೆದರೆ ಬಿಜೆಪಿ ಶಾಸಕರನ್ನು ಸೆಳೆಯಲು ಎರಡು ಸಚಿವ ಸ್ಥಾನ ಇಟ್ಟುಕೊಳ್ಳುವುದು ಸೂಕ್ತ. ಈಗ ಭರ್ತಿ ಮಾಡಿದರೆ ಮತ್ತೆ ಯಾರನ್ನೂ ರಾಜೀನಾಮೆ ಕೊಡಿಸಲು ಆಗುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ, ಸಂಪುಟ ವಿಸ್ತರಣೆಯಾದರೂ ಜೆಡಿಎಸ್‌ ಕೋಟಾ ಭರ್ತಿ ಆಗುವುದು ಅನುಮಾನ ಎಂದು ಹೇಳಲಾಗಿದೆ.

ಜೆಡಿಎಸ್‌ ಕೋಟಾದಡಿ ಎರಡು ಸ್ಥಾನಗಳಲ್ಲಿ ಒಂದು ಮುಸ್ಲಿಂ, ಮತ್ತೂಂದು ಪರಿಶಿಷ್ಟ ಜಾತಿ ಶಾಸಕರಿಗೆ ಅವಕಾಶ ಕಲ್ಪಿಸಿಕೊಡಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಬಯಸಿದ್ದರು. ಬಿ.ಎಂ.ಫರೂಕ್‌, ಎಚ್‌.ಕೆ.ಕುಮಾರಸ್ವಾಮಿ ಅವರ ಹೆಸರು ಪರಿಶೀಲನೆಯಲ್ಲಿತ್ತು. ಆದರೆ, ಪ್ರಸಕ್ತ ಸನ್ನಿವೇಶದಲ್ಲಿ ಜೆಡಿಎಸ್‌ಗೆ ಸಚಿವ ಸ್ಥಾನ ತುಂಬಲೇಬೇಕಾದ ಅನಿವಾರ್ಯತೆ ಇಲ್ಲ. ಜತೆಗೆ ಒತ್ತಡ ಅಥವಾ ಅಸಮಾಧಾನ ಸ್ಫೋಟದ ಆತಂಕವೂ ಇಲ್ಲ. ಹೀಗಿರುವಾಗ ಖಾಲಿ ಇಟ್ಟುಕೊಳ್ಳಬಹುದಲ್ಲವೇ ಎಂದು ಹಿರಿಯ ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಹೀಗಾಗಿ, ಜೆಡಿಎಸ್‌ಗೆ ಸಂಪುಟ ವಿಸ್ತರಣೆ ಬಗ್ಗೆ ನಿರಾಸಕ್ತಿಯಿದ್ದು, ಕಾಂಗ್ರೆಸ್‌ನವರು ಬೇಕಾದರೆ ಅವರ ಕೋಟಾದ ಸಚಿವಗಿರಿ ಭರ್ತಿ ಮಾಡಿಕೊಳ್ಳಲಿ ಎಂಬ ಮನಸ್ಥಿತಿಯಲ್ಲಿದೆ. ಒಂದೊಮ್ಮೆ ಮಾಜಿ ಪ್ರಧಾನಿ ದೇವೇಗೌಡರು ಪಟ್ಟು ಹಿಡಿದರೆ ತೀರ್ಮಾನ ಬದಲಾಗಬಹುದು ಎಂದು ತಿಳಿದು ಬಂದಿದೆ. ಸಂಪುಟ ಕೋಟಾ ಭರ್ತಿ ಮಾಡಿಕೊಳ್ಳದಿದ್ದರೂ ನಿಗಮ-ಮಂಡಳಿ ಅಧ್ಯಕ್ಷರ ನೇಮಕ, ಸಂಸದೀಯ ಕಾರ್ಯದರ್ಶಿಗಳ ನೇಮಕ ಮಾಡಿ ಹಲವು ಶಾಸಕರಿಗೆ ಅಧಿಕಾರ ಕೊಡಲು ನಿರ್ಧರಿಸಲಾಗಿದೆ. ಗುರುವಾರ ರಾತ್ರಿ ನಡೆದ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ಕುರಿತು ಚರ್ಚೆಯಾಗಿತ್ತು.

ಸಭೆಗೆ ಕಾದು ತೆರಳಿದ ಜೆಡಿಎಸ್‌ ಅಧ್ಯಕ್ಷ!:
ಬೆಳಗಾವಿ- ಖಾನಾಪುರ ರಸ್ತೆಯಲ್ಲಿನ “ಜಂಗಲ್‌ ಲಾಡ್ಜ್’ (ಭೀಮ್‌ಗಡ್‌)ನಲ್ಲಿ ಬುಧವಾರ ಸಂಜೆ 7 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿತ್ತು. ಆದರೆ ಸುವರ್ಣಸೌಧದಲ್ಲಿ ಸಚಿವ ಸಂಪುಟ ಸಭೆ ತಡವಾಗಿ ಆರಂಭವಾಗಿದ್ದರಿಂದ ತಡರಾತ್ರಿವರೆಗೂ ಸಭೆ ಆರಂಭವಾಗಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ  ಎಚ್‌.ವಿಶ್ವನಾಥ್‌ ಸೇರಿ ಹಲವು ಶಾಸಕರು ಒಂದಿಷ್ಟು ಹೊತ್ತು ಕಾದು ಬಳಿಕ ಊಟ ಮುಗಿಸಿ ನಿರ್ಗಮಿಸಿದ್ದರು. ಆ ಬಳಿಕ ಸಭೆಗೆ ಬಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉಳಿದವರೊಂದಿಗೆ ಸಮಾಲೋಚನೆ ನಡೆಸಿದರು ಎಂದು ಹೇಳಲಾಗಿದೆ.

ಟಾಪ್ ನ್ಯೂಸ್

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

1-uss

American wildfires:1 ಲಕ್ಷ ಮಂದಿಯ ಸ್ಥಳಾಂತರ! ; ಹಾಲಿವುಡ್‌ನ‌ ಹಲವು ಕಾರ್ಯಕ್ರಮ ರದ್ದು

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

Bhopal: ಮಧ್ಯಪ್ರದೇಶದಲ್ಲೀಗ ವಿಷ ತ್ಯಾಜ್ಯ ಅಪಾಯ

cyber crime

Cyber ​​fraud ಬ್ಯಾಂಕ್‌ ಹೊಣೆ: ಸುಪ್ರೀಂಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

Karnataka Govt.: ಅನರ್ಹ “ಬಿಪಿಎಲ್‌’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’

BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್‌.ಟಿ. ಸೋಮಶೇಖರ್‌

BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್‌.ಟಿ. ಸೋಮಶೇಖರ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-cm-yogi

Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌

CT Ravi

CID; ಶಾಸಕ ಸಿ.ಟಿ. ರವಿ ಬೆಳಗಾವಿ ದೌರ್ಜನ್ಯ ವಿವರಣೆ

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

ಮಹಾರಾಷ್ಟ್ರದಲ್ಲೂ ರಾಜ್ಯದ ಮಕ್ಕಳ ಶಾಲಾ ದಾಖಲಾತಿ!

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

1-uss

American wildfires:1 ಲಕ್ಷ ಮಂದಿಯ ಸ್ಥಳಾಂತರ! ; ಹಾಲಿವುಡ್‌ನ‌ ಹಲವು ಕಾರ್ಯಕ್ರಮ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.