ಅಶಕ್ತ ಶಿಶುಗಳಿಗೆ ಕಾಂಗರೂ ಮಾದರಿ ಆರೈಕೆ ಅತ್ಯವಶ್ಯ
Team Udayavani, May 17, 2019, 3:22 PM IST
ಬೆಳಗಾವಿ: ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದಿಂದ ವಿಶ್ವ ಕಾಂಗರೂ ಮಾದರಿ ಆರೈಕೆ ದಿನ ಆಚರಿಸಲಾಯಿತು.
ಬೆಳಗಾವಿ: ನಮ್ಮ ದೆಶದಲ್ಲಿ ಶೇ. 45ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ರೋಗಗ್ರಸ್ತರಾಗಿ ಸಾವನ್ನಪ್ಪುತ್ತಿವೆ. ಆದ್ದರಿಂದ ತಾಯ್ತನದ ಬಂಧ ಬಿಗಿಗೊಳಿಸಲು ಕಾಂಗರೂ ಮಾದರಿ ಆರೈಕೆ ಅತ್ಯಗತ್ಯವಾಗಿದೆ ಎಂದು ಯುಎಸ್‌ಎಂ ಕೆಎಲ್ಇ ನಿರ್ದೇಶಕ ಡಾ|ಎಚ್ ಬಿ ರಾಜಶೇಖರ ಹೇಳಿದರು.
ನಗರದ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಚಿಕ್ಕಮಕ್ಕಳ ವಿಭಾಗ ಹಾಗೂ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದಿಂದ ವಿಶ್ವ ಕಾಂಗರೂ ಮಾದರಿ ಆರೈಕೆ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ತಾಯಿ ಮಗುವಿನ ಬಾಂಧವ್ಯ ಗಟ್ಟಿಗೊಳಿಸಲು ಕಾಂಗರೂ ಮಾದರಿ ಆರೈಕೆ ಅತ್ಯಗತ್ಯ ಎಂದರು.
ಹಿಂದಿನಿಂದಲೂ ಈ ಪದ್ಧತಿ ರೂಢಿಯಲ್ಲಿದ್ದರೂ ಅದು ಪ್ರಗತಿ ಹೊಂದುತ್ತ, ಸಂಶೋಧನೆಗೊಳಪಟ್ಟು ಇಂದು ವಿಶಿಷ್ಟ ಪದ್ಧತಿಯಾಗಿ ಹೊರಹೊಮ್ಮಿದೆ. ಅದನ್ನು ಉಪಯೋಗಿಸಿ ಕೊಂಡು ಆರೋಗ್ಯಯುತ ತಾಯ್ತನದ ಸುಖ ಅನುಭವಿಸಲು ಅನುವು ಮಾಡಿಕೊಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ| ಎಸ್.ಸಿ. ಧಾರವಾಡ ಮಾತನಾಡಿ, ಆರೋಗ್ಯ ಶಿಕ್ಷಣವೆನ್ನುವುದು ಜೀವ ಉಳಿಸುವ ಜ್ಞಾನವಾಗಿದೆ. ಇದು ಶಿಶುವಿನ ಜನನದಿಂದ ಹಿಡಿದು ಬೆಳೆದು ದೊಡ್ಡದಾಗಿ ಆರೋಗ್ಯಯುತ ಜೀವನಹೊಂದಿ ಮರಣ ಹೊಂದುವವರೆಗಿನ ಪಯಣವನ್ನು ಸರಾಗಗೊಳಿಸುವ ದಾರಿದೀಪವಾಗಿದೆ ಎಂದರು . ಕಾಂಗರೂ ಮಾದರಿ ಆರೈಕೆ 2.5 ಕೆ.ಜಿಗಿಂತ ಕಡಿಮೆ ತೂಕ ಇರುವ ಮಕ್ಕಳು ಮತ್ತು ದಿನ ತುಂಬದೇ ಹೆರಿಗೆ ಆದ ಮಕ್ಕಳನ್ನು ತನ್ನ ಚರ್ಮಕ್ಕೆ ತಾಗುವಂತೆ ಎದೆಯ ಮೇಲೆ ಹಾಕಿಕೊಂಡು 6 ರಿಂದ 8 ಗಂಟೆಗಳ ಕಾಲ ಆರೈಕೆ ಮಾಡಬೇಕು ಇದರಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ಹೆಚ್ಚುವುದಲ್ಲದೇ ಮಗುವಿನ ಉಸಿರಾಟ ಕ್ರಿಯೆಗೆ ಸಹಕಾರಿಯಾಗಿ ದೈಹಿಕ ಚಟುವಟಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಗುಣಾತ್ಮಕ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು. ಕಾಂಗರೂ ಮಾದರಿ ಆರೈಕೆ ಎಂಬುದು ತಾಯ್ತನ ಸಾಕಾರಗೊಳಿಸುವ ಸೇತುವಾಗಿದೆ. ಮಗುವಿನ ಪಂಚೇಂದ್ರಿಯಗಳ ವಿಕಾಸ, ಸುಖ ನಿದ್ದೆ, ಬುದ್ದಿಶಕ್ತಿಯ ಬೆಳವಣಿಗೆ ಹೀಗೆ ಮುಂತಾದ ಅದ್ಬುತ ಗುಣಗಳನ್ನು ಹೊಂದಿದೆ. ಇದನ್ನು ಮಗುವು 2500 ಗ್ರಾಮ್ ತೂಕ ತಲುಪುವ ವರೆಗೆ ಅಥವಾ ಅದರ ನಂತರವೂ ಮಾಡಬಹುದಾಗಿದೆ ಎಂದರು.
ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ| ಎಂ.ಎಸ್ ಕಡ್ಡಿ, ಕಾಂಗರೂ ಮಾದರಿ ಆರೈಕೆಯ ಪರಿಚಯ, ಅಭಿವೃದ್ಧಿ, ಬೆಳವಣಿಗೆಗಳ ಬಗ್ಗೆ ಪರಿಚಯಿಸಿದರು. ಹಿರಿಯ ಮಕ್ಕಳ ಮಕ್ಕಳ ತಜ್ಞ ಡಾ| ಸುರೇಶ ಕಾಖಂಡಕಿ ಹಾಗೂ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ| ರಾಜೇಶ್ವರಿ ಕಡಕೋಳ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಉಪನ್ಯಾಸ ನೀಡಿದರು.
ಕೆಎಲ್ಇ ಹೋಮಿಯೋಪಥಿಕ್ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಎ. ಉಡಚನಕರ ಮತ್ತು ಕೆಎಲ್ಇ ಸೆಂಟೇನರಿ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ ಸೈನ್ಸ್ ಪ್ರಾಂಶುಪಾಲ ವಿಕ್ರಾಂತ ನೆಸರಿಮ ಡಾ| ಅನಿತಾ ಮೋದಗೆ, ಸೌಮ್ಯ ವೇರ್ಣೇಕರ, ಡಾ| ಸಂತೋಷಕುಮಾರ ಕರಮಸಿ, ಡಾ| ಬಸವರಾಜ ಕುಡಸೋಮನ್ನವರ, ಸ್ತ್ರೀರೋಗ ತಜ್ಞೆ ಡಾ| ವಿದ್ಯಾ ಕಾಖಂಡಕಿ, ಡಾ| ಸತೀಶ ಧಾಮನಕರ, ಡಾ| ರವೀಂದ್ರ ನರಸಾಪುರೆ, ಡಾ| ಗೀತಾಂಜಲಿ ತೋಟಗಿ, ಡಾ| ದರ್ಶಿತ್ ಶೆಟ್ಟಿ, ಡಾ| ಮೋಹನ ಸುಂಕದ ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಭಾವತಿ ಪಾಟೀಲ ನಿರೂಪಿಸಿದರು.
ಹಿರಿಯ ಮಕ್ಕಳ ತಜ್ಞ ಡಾ| ಸುರೇಶ ಕಾಖಂಡಕಿ ಸ್ವಾಗತಿಸಿದರು. ಡಾ| ಅನುರಾಧಾ ಉಗಲೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.