ಜಾತಿ ಮರಾಠಾ ಇದ್ದರೂ ಭಾಷೆ ಕನ್ನಡ

ಅಪ್ಪಟ ಕನ್ನಡಿಗರಾದ ಮರಾಠಾ ಜನಾಂಗದ ಹಳ್ಳಿಗರು,ಅಭಿವೃದ್ಧಿ ಪ್ರಾಧಿಕಾರದಿಂದ ಸಮಾಜದವರಲ್ಲಿ ಸಂತಸ

Team Udayavani, Nov 23, 2020, 7:16 PM IST

ಜಾತಿ ಮರಾಠಾ ಇದ್ದರೂ ಭಾಷೆ ಕನ್ನಡ

ಬೆಳಗಾವಿ: ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಆಗುತ್ತಿದ್ದಂತೆ ಕೆಲ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರಿಂದ ರಾಜ್ಯದಲ್ಲಿ ಪರಿಸ್ಥಿತಿ ಭುಗಿಲೆದ್ದಿದೆ. ಆದರೆ ಮರಾಠಾ ಸಮುದಾಯದ ಬಹುತೇಕರು ಬೆಳಗಾವಿ ನಗರ ಹಾಗೂ ಗಡಿಭಾಗ ಹೊರತುಪಡಿಸಿ ನೆಲೆಸಿರುವ ಜಿಲ್ಲೆಯ ಅನೇಕ ಹಳ್ಳಿಗಳು ಕನ್ನಡ ಭಾಷಿಕರಾಗಿ, ಕನ್ನಡ ಶಾಲೆಯಲ್ಲಿಯೇ ಕಲಿತು ಅಪ್ಪಟ ಕನ್ನಡಿಗರಾಗಿದ್ದಾರೆ.

ಗಡಿಜಿಲ್ಲೆ ಬೆಳಗಾವಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿರುವ ಮರಾಠಾ ಸಮುದಾಯದ ಜನಕನ್ನಡಿಗರೇ ಆಗಿದ್ದಾರೆ. ಈ ಸಮುದಾಯದ ಮೂಲಮರಾಠಿ ಭಾಷೆ ಆಗಿದ್ದರೂ ಮನೆಯಲ್ಲಿ ಕನ್ನಡವನ್ನೇ ಮಾತನಾಡುತ್ತಾರೆ. ಅದರಂತೆ ಜಿಲ್ಲೆಯ ಅನೇಕಹಳ್ಳಿಗಳಲ್ಲಿರುವ ಮರಾಠಾ ಜನಾಂಗದವರಿಗೆ ಕನ್ನಡವೇ ಮಾತೃಭಾಷೆಯಾಗಿದೆ. ಹಿಂದುಳಿದ ಮರಾಠಾ ಸಮುದಾಯದ ಪ್ರಾಧಿಕಾರ ರಚನೆಯಾದರೆ ಅಭಿವೃದ್ಧಿ ಆಗುವುದರಲ್ಲಿ ಸಂದೇಹವೇ ಇಲ್ಲ. ಕೃಷಿ ಪ್ರಧಾನ ಜನಾಂಗ: ಬೆಳಗಾವಿ ನಗರ ಹಾಗೂ ಗಡಿಭಾಗ ಹೊರತುಪಡಿಸಿ ಅನೇಕ ಕಡೆಗಳಲ್ಲಿರುವ ಮರಾಠಾ ಸಮುದಾಯದವರ ಆಚಾರ-ವಿಚಾರ,ರೀತಿ-ನೀತಿ, ಸಂಸ್ಕೃತಿ, ಸಂಪ್ರದಾಯಗಳೆಲ್ಲವೂ ಕನ್ನಡದ್ದಾಗಿದೆ. ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿರುವಈ ಸಮುದಾಯದವರ ವ್ಯವಹಾರ ಕನ್ನಡ ಭಾಷೆಯಲ್ಲಿಯೇ ನಡೆಯುತ್ತದೆ.

ಅಪ್ಪಟ ಕನ್ನಡ ಹಳ್ಳಿಗಳು: ಬೆಳಗಾವಿ ತಾಲೂಕಿನ ಮೋದಗಾ, ಸುಳೇಭಾವಿ, ಶಿಂಧೋಳ್ಳಿ, ಮಾರೀಹಾಳ, ಚಂದೂರ, ತಾರೀಹಾಳ, ಕೊಂಡಸಕೊಪ್ಪ, ಗಣಿಕೊಪ್ಪ,ಬಡಾಲ ಅಂಕಲಗಿ, ಬಡಸ, ಭೇಂಡಿಗೇರಿ, ಗಜಪತಿ, ಗಣಿಕೊಪ್ಪ, ಶೀಗಿಹಳ್ಳಿ, ಹುದಲಿ, ನಾವಲಗಟ್ಟಿ, ಕಿತ್ತೂರುತಾಲೂಕಿನ ವೀರಾಪುರ, ಖಾನಾಪುರ ತಾಲೂಕಿನ ದೇವಲತ್ತಿ, ಅವರೊಳ್ಳಿ, ಗಂದಿಗವಾಡ, ಪಾರಿಶ್ವಾಡ, ಹುಲಿಕಟ್ಟಿ, ಅಂಬಡಗಟ್ಟಿ, ಹಿರೇಮುನವಳ್ಳಿ, ಚಿಕ್ಕ ಮುನವಳ್ಳಿ, ಚಿಕ್ಕದಿನ್ನಿಕೊಪ್ಪ, ಇಟಗಿ, ಗೋಕಾಕತಾಲೂಕಿನ ಲಗಮೇಶ್ವರ, ಅಂಲಗಿ, ಪಾಶ್ಚಾಪುರ,

ಅಕ್ಕತಂಗೇರಹಾಳ, ಸುಲಧಾಳ, ಕುಂದರಗಿ ಸೇರಿದಂತೆ ಅನೇಕ ಹಳ್ಳಿಗಳು ಅಪ್ಪಟ ಕನ್ನಡಿಗರದ್ದಾಗಿವೆ. ಇಲ್ಲಿರುವ ಮರಾಠಾ ಜನಾಂಗದವರಿಗೆ ಮರಾಠಿಭಾಷೆಯ ಗಂಧ-ಗಾಳಿಯೇ ಗೊತ್ತಿಲ್ಲ! ಈ ಹಳ್ಳಿಗಳಲ್ಲಿರುವ ಮರಾಠಾ ಸಮುದಾಯವರುಸರ್ಕಾರಿ ಕನ್ನಡ ಶಾಲೆಗಳಲ್ಲಿಯೇ ಓದುತ್ತಾರೆ. ಇವರ ಸಂಬಂಧಿಕರು ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ಕಡೆಗೆ ವ್ಯಾಪಿಸಿದ್ದು, ಮರಾಠಿ ಭಾಷಿಕರಾಗಿದ್ದಾರೆ. ಆದರೆ ಇವರೊಂದಿಗೆ ಸಂವಹನ ಸಾಧಿಸಲು ಮರಾಠಿ ಮಾತಾಡಲು ತಡಕಾಡುತ್ತಾರೆ.

ಎಂಇಎಸ್‌ನಿಂದ ಕೆಟ್ಟ ಹೆಸರು: ಬೈಲಹೊಂಗಲ, ರಾಯಬಾಗ, ಅಥಣಿ, ರಾಮದುರ್ಗ, ಸವದತ್ತಿ, ಗೋಕಾಕ, ಚಿಕ್ಕೋಡಿಯ ಅಪ್ಪಟ ಕನ್ನಡ ಊರುಗಳಲ್ಲಿಯೇ ಈ ಜನಾಂಗ ಹಲವಾರು ವರ್ಷಗಳಿಂದ ನೆಲೆಸಿದೆ. ಕನ್ನಡ ಚಲನಚಿತ್ರ ನಾಯಕ ನಟರ ಅಭಿಮಾನಿ ಸಂಘಟನೆಗಳನ್ನು ಕಟ್ಟಿಕೊಂಡುಕನ್ನಡ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹಲವಾರು ಜನ ಕರ್ನಾಟಕ ರಾಜ್ಯೋತ್ಸವಗಳಲ್ಲಿಯೂತೊಡಗಿಕೊಂಡಿದ್ದಾರೆ. ಭಾಷೆ ಮತ್ತು ಜನಾಂಗದಲ್ಲಿ ವ್ಯತ್ಯಾಸವಿದ್ದು, ಎಂಇಎಸ್‌ನಿಂದಾಗಿ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ ಎನ್ನುತ್ತಾರೆ ಮರಾಠಾ ಸಮುದಾಯದ ಮುಖಂಡ ಶಿವಪ್ಪ ಕೌತಗಾರ.

ನಾಡದ್ರೋಹಿ ಸಂಘಟನೆ: ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಎನ್ನುವುದು ಮರಾಠಿ ಭಾಷಿಕರಿಂದ ಕೂಡಿರುವ ನಾಡದ್ರೋಹಿ ಸಂಘಟನೆ ಆಗಿದೆ. ಈ ಸಂಘಟನೆಯಲ್ಲಿ ಅನೇಕ ಸಮುದಾಯದವರೂ ಸೇರಿಕೊಂಡಿದ್ದಾರೆ. ಮರಾಠಿ ಮಾತನಾಡುವ ಬೇರೆ ಬೇರೆ ಜನಾಂಗದವರು ಇದ್ದಾರೆ. ಖಾನಾಪುರ, ಬೆಳಗಾವಿ ದಕ್ಷಿಣ, ಉತ್ತರ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೆಲವರು ಮರಾಠಿ ಭಾಷಿಕರನ್ನು ಹೊರತುಪಡಿಸಿ ಇನ್ನುಳಿದ ಜನ ಎಂಇಎಸ್‌ನತ್ತ ಕಣ್ಣೆತ್ತಿಯೂ ನೋಡುವುದಿಲ್ಲ ಎನ್ನುತ್ತಾರೆ ಕೌತಗಾರ.

ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕೂ ಹೆಚ್ಚು ಮರಾಠಾ ಸಮದಾಯದವರು ಇದ್ದಾರೆ. ಇದರಲ್ಲಿಶೇ. 80 ಜನ ಕನ್ನಡ ಭಾಷಿಕರೇ ಇದ್ದಾರೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ, ಕಲಬುರ್ಗಿ,ಬೆಂಗಳೂರು, ತುಮಕೂರು, ಮೈಸೂರು,ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಉತ್ತರ ಕನ್ನಡ ಸೇರಿದಂತೆ ವಿವಿಧ ಕಡೆಗಳಲ್ಲಿ ನೆಲೆಸಿದ್ದಾರೆ. ಮೂಲ ಮರಾಠಿಗರಾಗಿದ್ದರೂ ಅವರೆಲ್ಲರೂ ಮಾತಾಡುವುದು ಕನ್ನಡವೇ ಆಗಿದೆ.

ರಾಜಕಾರಣ ಭಿನ್ನ :  ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಮರಾಠಾ ಸಮುದಾಯವರಿದ್ದಾರೆ. ಆದರೆ ಇಲ್ಲಿ ಶಾಸಕರಾಗಿ ಆಯ್ಕೆ ಆಗಿರುವವರು ಲಿಂಗಾಯತಸಮುದಾಯದ ಲಕ್ಷ್ಮೀ ಹೆಬ್ಟಾಳಕರ. ಇವರಿಗೆ ಮರಾಠಿ ಭಾಷೆ ಗೊತ್ತಿಲ್ಲದಿದ್ದರೂಇಲ್ಲಿಯ ಜನಶಾಸಕಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಜತೆಗೆ ಬೆಳಗಾವಿ ಉತ್ತರ, ದಕ್ಷಿಣ, ಖಾನಾಪುರ, ಕಿತ್ತೂರುಕ್ಷೇತ್ರಗಳಲ್ಲಿರುವ ಅನೇಕ ಮರಾಠಾ ಸಮುದಾಯದವರು ಕನ್ನಡ ಭಾಷೆ ಮಾತನಾಡುತ್ತಾರೆ. ಬೆಳಗಾವಿ ತಾಲೂಕಿನ ರಾಜಕಾರಣ ವಿಭಿನ್ನವಾಗಿದ್ದು, ಜಾತಿ, ಭಾಷೆಯ ರಾಜಕಾರಣಕ್ಕಿಂತ ಪಕ್ಷ ಹಾಗೂ ವ್ಯಕ್ತಿಯ ಆಧಾರದ ಮೇಲೆ ನಡೆಯುತ್ತಿದೆ.

ಮರಾಠಾ ಸಮುದಾಯದವರು ಕನ್ನಡ ಭಾಷೆಯನ್ನುಒಪ್ಪಿಕೊಂಡಿದ್ದಾರೆ. ಅನೇಕ ಕಡೆಗಳಲ್ಲಿ ನೆಲೆಸಿರುವ ಈ ಸಮುದಾಯ ಕನ್ನಡವನ್ನೇ ಅಪ್ಪಿಕೊಂಡು ಬದುಕು ಸಾಗಿಸುತ್ತಿದೆ. ಎಂಇಎಸ್‌ ಸಂಘಟನೆಯೇ ಬೇರೆ, ಮರಾಠಾ ಸಮುದಾಯವೇ ಬೇರೆಯಾಗಿದೆ. ಈಸಂಘಟನೆಯೊಂದಿಗೆ ಮರಾಠಾ ಜಾತಿಯನ್ನುತುಲನೆ ಮಾಡುವುದು ಸರಿಯಲ್ಲ. – ಅನಿಲ್‌ ಬೆನಕೆ, ಶಾಸಕ, ಉತ್ತರ ಕ್ಷೇತ್ರ

ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವಮುಖ್ಯಮಂತ್ರಿಗಳ ಕ್ರಮ ಸ್ವಾಗತಾರ್ಹ. ಒಂದು ಸಮುದಾಯದ ಅಭಿವೃದ್ಧಿಗಾಗಿ ಈ ಪ್ರಾಧಿಕಾರ ರಚಿಸಿ 50 ಕೋಟಿ ರೂ. ಅನುದಾನವನ್ನು ಸರ್ಕಾರ ನೀಡಿದೆ. ಇದನ್ನು ವಿರೋಧಿ ಸುವಬದಲು ಸಾಧಕ-ಬಾಧಕ ಬಗ್ಗೆ ಚರ್ಚೆ ನಡೆಸಬೇಕಾದ ಅಗತ್ಯವಿದೆ.  –ಅಭಯ ಪಾಟೀಲ, ಶಾಸಕ, ದಕ್ಷಿಣ ಕ್ಷೇತ

 

 -ಭೈರೋಬಾ ಕಾಂಬಳೆ

 

ಟಾಪ್ ನ್ಯೂಸ್

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.