Karnataka Rajyotsava;ಕುಂದಾನಗರಿಯಲ್ಲಿ ಕನ್ನಡ ಜಾತ್ರೆಯ ವೈಭವ ಸಂಭ್ರಮ
ಹುಚ್ಚೆದ್ದು ಕುಣಿದು ಕುಪ್ಪಳಿಸುತ್ತಿರುವ ಕನ್ನಡಿಗರು
Team Udayavani, Nov 1, 2023, 5:12 PM IST
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಕನ್ನಡ ಮನಸ್ಸುಗಳ ಸಂಭ್ರಮ ಮನೆ ಮಾಡಿದೆ. ಬುಧವಾರ ಕರ್ನಾಟಕ ರಾಜ್ಯೋತ್ಸವದಂದು ಕನ್ನಡಿಗರ ಸಂಭ್ರಮಕ್ಕೆ ಪಾರವೇ ಇಲ್ಲ. ಇಡೀ ಬೆಳಗಾವಿ ಕನ್ನಡದ ಜಾತ್ರೆಯಾಗಿ ಮಾರ್ಪಟ್ಟಿದ್ದು, ತಾಯಿ ಭುವನೇಶ್ವರಿಯ ಕನ್ನಡದ ತೇರು ಎಳೆದ ಕನ್ನಡಿಗರು ಸಂಭ್ರಮದಲ್ಲಿ ತೇಲಾಡಿದರು.
ಬುಧವಾರ ಬೆಳಗ್ಗೆಯಿಂದಲೇ ನಗರದೆಲ್ಲೆಡೆ ಕನ್ನಡ ಹಬ್ಬದ ಸಹಸ್ರಾರು ಸಂಖ್ಯೆಯಲ್ಲಿ ಕನ್ನಡಿಗರು ಸಾಕ್ಷಿಯಾಗಿದ್ದಾರೆ. ನಗರದ ಕೇಂದ್ರ ಬಿಂದು ರಾಣಿ ಚನ್ನಮ್ಮ ವೃತ್ತದಲ್ಲಿ ಕನ್ನಡಿಗರ ಉತ್ಸಾಹ ಮೇರೆ ಮೀರಿದೆ. ಕೈಯಲ್ಲಿ ಹಳದಿ ಕೆಂಪು ಧ್ವಜ ಹಿಡಿದುಕೊಂಡು ಕುಣಿಯುತ್ತಿರುವ ಯುವಪಡೆಯ ಉತ್ಸಾಹ ಸಂಭ್ರಮ ಮುಗಿಲು ಮುಟ್ಟಿದೆ. ಕಣ್ಣು ಹಾಯಿಸಿದಷ್ಟೂ ಕಿಕ್ಕಿರಿದು ಸೇರಿದ ಕನ್ನಡಿಗರು, ನಾಡು ನುಡಿಯ ವೈಭವ ಪಸರಿಸಿಕೊಂಡಿತ್ತು.
ಹಳದಿ ಕೆಂಪು ದ್ವಜಗಳ ಹಾರಾಟ, ಕನ್ನಡ ಚಿತ್ರಗೀತೆಗಳಿಗೆ ಕನ್ನಡಿಗರು ಕುಣಿದು ಕುಪ್ಪಳಿಸುವ ಮೂಲಕ ರಾಜ್ಯೋತ್ಸವದ ವೈಭವದ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು, ಯುವಕರು, ಯುವತಿಯರು, ಮಹಿಳೆಯರು, ಹಿರಿಯರು ವೈಭವದ ಮೆರವಣಿಗೆಯಲ್ಲಿ ಭಾಗಿಯಾದರು. ಯುವಜನರಂತೂ ಎದೆ ನಡುಗಿಸುವಂಥ ಡಿ.ಜೆ, ಡಾಲ್ಬಿ ಹಾಡಿಗೆ ಕುಣಿದು ಕುಪ್ಪಳಿಸಿದರು.
ನಗರದ ಮೂಲೆಮೂಲೆಯಿಂದ, ಹಳ್ಳಿ ಪಟ್ಟಣಗಳಿಂದ ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಜಮಾಯಿಸಿದ್ದರು. ನಗರದ ವಿವಿಧ ಬಡಾವಣೆ, ಓಣಿಗಳು, ತಾಲೂಕಿನ ಹಳ್ಳಿ ಹಳ್ಳಿಯಿಂದ ಹಾಗೂ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಗಮನಸೆಳೆಯುತ್ತಿವೆ.
ಕರ್ನಾಟಕದ ಗತವೈಭವ ಸಾರುವ ಸ್ತಬ್ಧಚಿತ್ರಗಳು ಆಕರ್ಷಣೀಯವಾಗಿದ್ದವು. ವಿವಿಧ ದೇಸಿ ವಾದ್ಯ ಮೇಳಗಳಿಗೆ ಯುವಕರು ಹೆಜ್ಜೆ ಹಾಕಿದರು.
ವಿವಿಧ ಕನ್ನಡ ಸಂಘಟನೆಗಳು ಸ್ತಬ್ಧಚಿತ್ರಗಳೊಂದಿಗೆ
ಡಿಜೆ ಡಾಲ್ಬಿಗಳ ನಾದಕ್ಕೆ ಯುವಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಹಳದಿ ಕೆಂಪು ಧ್ವಜ ಹಿಡಿದುಕೊಂಡು ಕುಣಿಯುತ್ತಿರುವ ಕನ್ನಡಿಗರ ಸಂಭ್ರಮ ಮೇರೆ ಮೀರಿದೆ. ಕನ್ನಡ ಶಲ್ಯಾ ಹಾರಿಸಿ, ಧ್ವಜಗಳನ್ನು ತಿರುಗಿಸುತ್ತಿರುವ ಮೈನವಿರೇಳಿಸುವಂತಿತ್ತು. ರಾಜ್ಯದಲ್ಲಿಯೇ ಅದ್ಭುತವಾಗಿ ನಡೆಯುವ ಬೆಳಗಾವಿಯ ಮೆರವಣಿಗೆಯ ವೈಭವ ನೋಡುವುದೇ ಸೊಗಸು. ಕನ್ನಡದ ಮೇಲಿರುವ ಬೆಳಗಾವಿಗರ ಈ ಸಂಭ್ರಮ ಕಣ್ತುಂಬಿಕೊಳ್ಳಲು ಪಕ್ಕದ ಜಿಲ್ಲೆಯಿಂದ ಜನ ಬಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎರಡು ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದ ತಾಯಿ!; ಪ್ರಕರಣ ದಾಖಲು
Gruha Lakshmi Scheme ಹಣ ಕೂಡಿಟ್ಟು ಬೋರ್ ವೆಲ್ ಕೊರೆಸಿದ ಅತ್ತೆ-ಸೊಸೆ: ಸಚಿವೆ ಶ್ಲಾಘನೆ
Belagavi: ಹೋರಾಟ ಅಸಂವಿಧಾನಿಕ ಎಂದು ಸಮಾಜಕ್ಕೆ ಅವಮಾನ ಮಾಡಿದ ಸಿಎಂ: ಕೂಡಲಸಂಗಮ ಶ್ರೀ
Santosh Lad: ಒನ್ ನೇಶನ್ ಒನ್ ಎಲೆಕ್ಷನ್, ನೆಹರೂ ಕಾಲದಲ್ಲೇ ವಿಫಲ
Priyank Kharge: ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳ ಸಿಎಂ ಗಮನಕ್ಕೆ
MUST WATCH
ಹೊಸ ಸೇರ್ಪಡೆ
Friendly Cricket: ರಾಜ್ಯಸಭಾ ತಂಡದೆದುರು ಲೋಕಸಭಾ ತಂಡಕ್ಕೆ ಜಯ
Bengaluru: ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ
Belthangady: ಖಾಸಗಿ ಬಸ್ಸಿನಡಿಗೆ ಬಿದ್ದ ಬೈಕ್ ಸವಾರ: ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
Kudremukh: ಹೊತ್ತಿ ಉರಿದ ಟೆಂಪೋದಲ್ಲಿದ್ದದ್ದು ಕಟಪಾಡಿ ಮೂಲದ 8 ಕುಟುಂಬಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.