ಸರಿ ದಾರಿಗೆ ಬಾರದ ಸಾರಿಗೆ ನೇಮಕಾತಿ
ಮೂರೂವರೆ ವರ್ಷದಿಂದ 50 ಸಾವಿರ ಅಭ್ಯರ್ಥಿಗಳ ಪರದಾಟ |ಪರೀಕ್ಷೆ ಬರೆದು ಕಾಯುತ್ತಿರುವ ಆಕಾಂಕ್ಷಿಗಳು
Team Udayavani, Sep 28, 2021, 8:39 PM IST
ಭೈರೋಬಾ ಕಾಂಬಳೆ
ಬೆಳಗಾವಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ತಾಂತ್ರಿಕ ಸಹಾಯಕ ಹಾಗೂ ಭದ್ರತಾ ರಕ್ಷಕ ಹುದ್ದೆಗಳ ನೇಮಕಾತಿ ಆದೇಶವಾಗಿ ಮೂರು ವರ್ಷ ಕಳೆದು ನಾಲ್ವರು ಮುಖ್ಯಮಂತ್ರಿ ಬಂದು ಹೋದರೂ ಇನ್ನೂ ನೇಮಕಾತಿ ಪ್ರಕ್ರಿಯೆ ಮುಗಿದಿಲ್ಲ!
ಕೆಎಸ್ ಆರ್ ಟಿ ಸಿಯಲ್ಲಿ ತಾಂತ್ರಿಕ ಸಹಾಯಕ 726 ಹುದ್ದೆ ಹಾಗೂ ಭದ್ರತಾ ರಕ್ಷಕ 200 ಹುದ್ದೆಗಳ ನೇಮಕಾತಿಗಾಗಿ 2018ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅರ್ಜಿ ಆಹ್ವಾನಿಸಲಾಗಿತ್ತು. 2020ರಲ್ಲಿ ಲಿಖೀತ ಪರೀಕ್ಷೆ ನಡೆಸಿರುವ ಸರ್ಕಾರ ಇನ್ನೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ. ಹೀಗಾಗಿ ಅಭ್ಯರ್ಥಿಗಳ ಬದುಕು ಅತಂತ್ರವಾಗಿದ್ದು, ಸಾರಿಗೆ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಹಾಗೂ ಈಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಈ 50 ಸಾವಿರ ಅಭ್ಯರ್ಥಿಗಳ ಪ್ರಶ್ನೆಗೆ ಉತ್ತರಿಸಲು ಯಾರೂ ಇಲ್ಲದಂತಾಗಿದೆ. ಕೋವಿಡ್ ನೆಪ ಹೇಳಿ ನೇಮಕಾತಿ ಪ್ರಕ್ರಿಯೆ ಮುಂದೂಡುತ್ತಿರುವ ಸರ್ಕಾರದ ಬಗ್ಗೆ ಅಭ್ಯರ್ಥಿಗಳು ಅನುಮಾನ ಪಡುತ್ತಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 2018ರ ಮಾ.17ರಂದು ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಆದೇಶ ಹೊರಡಿಸಲಾಗಿತ್ತು. ಜತೆಗೆ ಭದ್ರತಾ ರಕ್ಷಕ ಹುದ್ದೆಗೆ 2018ರ ಜೂ.12ರಂದು ಅರ್ಜಿ ಆಹ್ವಾನಿಸಿತ್ತು. ನಂತರ ಎರಡು ವರ್ಷಗಳ ಕಾಲ ಸುಮ್ಮನಿದ್ದ ಸರ್ಕಾರ 2020ರ ಫೆ.2ರಲ್ಲಿ ಕೆಇಎ ವತಿಯಿಂದ ಪರೀಕ್ಷೆ ನಡೆಸಿದೆ. 2020ರ ಮಾರ್ಚ್‌ನಲ್ಲಿ ನಡೆಯಬೇಕಿದ್ದ 1:5ರಂತೆ ಆಯ್ಕೆ ಪಟ್ಟಿಯನ್ನು ಕೋವಿಡ್-19 ನೆಪ ಹೇಳಿ ನಡೆಸಲಿಲ್ಲ. ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸದೆ ವಿಳಂಬ ನೀತಿ ಅನುಸರಿಸುತ್ತಿದೆ.
ಸಹಾಯಕ ತಾಂತ್ರಿಕ ಹುದ್ದೆಗೆ 30 ಸಾವಿರ ಹಾಗೂ ಭದ್ರತಾ ರಕ್ಷಕ ಹುದ್ದೆಗೆ 20 ಸಾವಿರ ಅಭ್ಯರ್ಥಿಗಳು ಅರ್ಜಿ ಹಾಕಿ ಪರೀಕ್ಷೆ ಬರೆದಿದ್ದಾರೆ. ಈ ಬಗ್ಗೆ ಹಿಂದಿನ ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ ಸವದಿ ಅವರನ್ನು ಅನೇಕ ಬಾರಿ ಅಭ್ಯರ್ಥಿಗಳು ಭೇಟಿಯಾಗಿ ಪ್ರಕ್ರಿಯೆ ಮುಗಿಸುವಂತೆ ಮನವಿ ಮಾಡಿದ್ದಾರೆ. ಆದರೆ ಸರ್ಕಾರ ಮಾತ್ರ ತಲೆಕೆಡಿಸಿಕೊಂಡಿಲ್ಲ. ಜತೆಗೆ ಸಂಸ್ಥೆಯ ಉನ್ನತ ಮಟ್ಟದ ಅ ಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿದರೂ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಕೋವಿಡ್ ನೆಪ ಹೇಳಿ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸದೆ ವಿದ್ಯಾಥಿಗಳ ಬದುಕು ಅತಂತ್ರ ಮಾಡಿರುವ ಸಾರಿಗೆ ಸಂಸ್ಥೆ ವಿರುದ್ಧ ಅಭ್ಯರ್ಥಿಗಳು ಹಿಡಿಶಾಪ ಹಾಕುತ್ತಿದ್ದಾರೆ. ನಮಗೆ ನೇಮಕಾತಿ ಆದೇಶಕ್ಕಿಂತಲೂ ನೇಮಕಾತಿ ಪ್ರಕ್ರಿಯೆ ಮುಗಿಸಿದರೆ ಮುಂದಿನ ಹಾದಿ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ವಯಸ್ಸು ಮೀರಿ ಹೋಗುತ್ತಿದ್ದು, ಕೂಡಲೇ ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.