ಜೊಲ್ಲೆ ಗ್ರೂಪ್ ಆಯೋಜನೆ: ಜನಮನ ಸೆಳೆದ ಕರ್ನಾಟಕದ ಅತಿ ದೊಡ್ಡ ಎತ್ತಿನ-ಕುದುರೆ ಗಾಡಿ ಶರ್ಯತ್ತು

38 ಲಕ್ಷ ರೂ. ಬಹುಮಾನ: ಬಡಿಗೆ ಬಾರಕೋಲ ರಹಿತ ಸ್ಪರ್ಧೆ

Team Udayavani, Feb 11, 2024, 3:11 PM IST

12-

ಚಿಕ್ಕೋಡಿ: ಜೊಲ್ಲೆ ಗ್ರೂಪ್ ಹಾಗೂ ಸಂಸದ ಕ್ರೀಡಾಮಹೊತ್ಸವ ಅಂಗವಾಗಿ ಹಮ್ಮಿಕೊಂಡ ರಾಷ್ಟ್ರ ಮಟ್ಡದ ಬಡಿಗೆ ಬಾರಕೋಲ ರಹಿತ ಎತ್ತಿನ ಮತ್ತು ಕುದುರೆ ಗಾಡಿ ಶರ್ಯತ್ತು ಜನಮನ ಸೆಳೆದವು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ- ಮಲಿಕವಾಡ ಶರ್ಯತ್ತು ಮೈದಾನದಲ್ಲಿ ನಡೆದ ಗಾಡಿ ಸ್ಪರ್ಧೆ ಲಕ್ಷಾಂತರ ಕ್ರೀಡಾಪ್ರೇಮಿಗಳನ್ನು ರಂಜಿಸಿದವು. ಸ್ಪರ್ಧೆಯ ಒಟ್ಟು 38 ಲಕ್ಷ ರೂ. ಬಹುಮಾನ ರೈತರು ಪಡೆದುಕೊಂಡರು.

ಸ್ಪರ್ಧೆಯ ಫಲಿತಾಂಶ:

ಪ್ರಥಮ ಸ್ಥಾನ: ಎತ್ತಿನ ಗಾಡಿ ಸಾಮಾನ್ಯ ವಿಭಾಗದಲ್ಲಿ ಕೊಲ್ಲಾಪೂರದ ಧಾನೋಳಿಯ ಭಂಡಾ ಖಿಲಾರೆ ಎತ್ತುಗಳು ಪ್ರಥಮ ಸ್ಥಾನ ಪಡೆದು 11 ಲಕ್ಷ ರೂ ಬಹುಮಾನ ಪಡೆದರು.

ದ್ವಿತೀಯ ಸ್ಥಾನ: ಬಾಳು ಹಜಾರೆ ಶಿರೂರ ದ್ವಿತೀಯ ಗಳಿಸಿ 5 ಲಕ್ಷ ರೂ. ಬಹುಮಾನ ಪಡೆದರು.

ತೃತೀಯ ಸ್ಥಾನ: ಪರೀಟ ಗ್ರಾಮದ ಸಚೀನ ಪಾಟೀಲ ತೃತೀಯ ಸ್ಥಾನ ಗಳಿಸಿ 3 ಲಕ್ಷ ರೂ. ಪಡೆದುಕೊಂಡರು.

ನಾಲ್ಕನೇ ಬಹುಮಾನ ತಾಂಶಿಯ ಉಮೇಶ ಜಾಧವ ಎತ್ತಿನ ಗಾಡಿ ಪಡೆದು 2 ಲಕ್ಷ ರೂ ಬಹುಮಾನ ಪಡೆದರು.

ಕರ್ನಾಟಕ ಕುದುರೆ ಗಾಡಿ ಶರ್ಯತ್ತಿನಲ್ಲಿ ಬಾವನಸವದತ್ತಿಯ ಶಿವಾಜಿ ಸಡಕೆ ಕುದುರೆ ಗಾಡಿ ಮೊದಲ ಸ್ಥಾನ ಪಡೆದು 1 ಲಕ್ಷ ರೂ. ಬಹುಮಾನ ಪಡೆಯಿತು.

ದ್ವಿತೀಯ ಸ್ಥಾನವನ್ನು ಮಾರುತಿ ಗಸ್ತೆ ಸಂಕೇಶ್ವರ 75 ಸಾವಿರ ರೂ. ಬಹುಮಾನ ಪಡೆದರು.

ಮೂರನೇ ಸ್ಥಾನವನ್ನು ದತ್ತು ಭೀಮಾ ಪಾಟೀಲ ಕೊಣ್ಣೂರ ಕುದುರೆ ಗಾಡಿಯು 50 ಸಾವಿರ ರೂ. ಬಹುಮಾನ ಪಡೆಯಿತು.

ನಾಲ್ಕನೇ ಬಹುಮಾನ ಬಾಬಾಸಾಹೇಬ ಪಾಟೀಲ ನಾಗನೂರ ಕುದುರೆ ಗಾಡಿ 25 ಸಾವಿರ ರೂ. ಪಡೆದುಕೊಂಡರು.

ಕರ್ನಾಟಕ ಎತ್ತಿನ ಗಾಡಿ ಶರ್ಯತ್ತಿನಲ್ಲಿ ಯರಗಟ್ಟಿಯ ಅಜೀತ ದೇಸಾಯಿ ಎತ್ತಿನ ಗಾಡಿ ಪ್ರಥಮ ಸ್ಥಾನ ಪಡೆದು 5 ಲಕ್ಷ ರೂ. ಪಡೆದರು. ಹಳದಟ್ಟಿಯ ಧರೇಪ್ಪ ಸಂಗಪ್ಪ ಪುಂಡಗೇಜ ಎರಡನೇ ಸ್ಥಾನ ಪಡೆದು 3 ಲಕ್ಷ ರೂ ಬಹುಮಾನ ಪಡೆದರು.

ಮಲಿಕವಾಡದ ಮಹಾದೇವ ಗಜಬರ ಎತ್ತು ಮೂರನೇ ಸ್ಥಾನ ಪಡೆದು 2 ಲಕ್ಷ ರೂ. ಬಹುಮಾನ ಪಡೆದರು. ಅಥಣಿ ತಾಲೂಕಿನ ಅಬ್ಬಿಹಾಳ ಹುವಣ್ಣಾ ಮಾನೆ ಎತ್ತಿನ ಗಾಡಿ ನಾಲ್ಕನೇ ಸ್ಥಾನ ಪಡೆದು 1 ಲಕ್ಷ ರೂ. ಬಹುಮಾನ ಪಡೆದರು.

ಸಾಮಾನ್ಯ ಕುದುರೆ ಗಾಡಿ ಶರ್ಯತ್ತಿ ಫಲಿತಾಂಶ

ಪ್ರಥಮ ಸ್ಥಾನ ಮಹಾರಾಷ್ಡ್ರದ ಸಂಗಮವಾಡಿಯ ಮಂಗಲ ಕುದುರೆ ಗಾಡಿ ಪ್ರಥಮ ಸ್ಥಾನ ಪಡೆದುಕೊಂಡು 1 ಲಕ್ಷ ರೂ. ಬಹುಮಾನ ಪಡೆದರು.

ಎರಡನೇ ಸ್ಥಾನ ಯಡೂರವಾಡಿಯ ರೋಸ್ತುಮ ಕುದುರೆ ಗಾಡಿ 75 ಸಾವಿರ ರೂ.  ಬಹುಮಾನ ಪಡೆದರು.

ಮೂರನೇ ಸ್ಥಾನ ಲಗಮಣ್ಣಾ 50 ಸಾವಿರ ರೂ. ಬಹುಮಾನ ಪಡೆದರು.

ನಾಲ್ಕನೇ ಸ್ಥಾನ ಕುರಂದವಾಡದ ರಮೇಶ ಪಾಟೀಲ 25 ಸಾವಿರ ರೂ. ಬಹುಮಾನ ಪಡೆದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಲೋಕಸಭೆ ಮತ ಕ್ಷೇತ್ರದ ಪ್ರತಿಯೊಂದು ವಿಧಾನಸಭೆ ಮತ ಕ್ಷೇತ್ರದಲ್ಲಿ ಬೇರೆ ಬೇರೆ ಪ್ರತ್ಯೇಕ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಗ್ರಾಮೀಣ ರೈತರ ಮನೋಭಾವ ಹೆಚ್ಚಿಸಲು ಗಾಡಿ ಶರ್ಯತ್ತು ಆಯೋಜನೆ ಸಹಕಾರ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು.

ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಸಂಸದರ ಸಾಂಸ್ಕೃತಿಕ ಕ್ರೀಡಾ ಮಹೋತ್ಸವದ ಅಂಗವಾಗಿ ಲೋಕಸಭೆ ಕ್ಷೇತ್ರದಲ್ಲಿ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿ ಯುವಕ-ಯುವತಿಯರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.

ಜೊಲ್ಲೆ ಗ್ರೂಪ್ ವತಿಯಿಂದ ಅನೇಕ ಸೇವೆ ಮಾಡಲಾಗಿದೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ರೈತರು ಈ ದೇಶದ ಬೆನ್ನೆಲುಬು. ರೈತರಿಗೆ ಪ್ರೋತ್ಸಾಹ ನೀಡಲು ಗಾಡಿ ಶರ್ಯತ್ತು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಮಹಾರಾಷ್ಟ್ರ ಎರಡು ರಾಜ್ಯದ ಕ್ರೀಡಾಪ್ರೇಮಿಗಳಿಗೆ ಈ ಶರ್ಯತ್ತು ಆಯೋಜನೆ ಮಾಡಲಾಗಿದೆ ಎಂದರು.

ಕ್ಯಾರಗುಡ್ಡದ ಅಭಿನವ ಮಂಜುನಾಥ್ ಸ್ವಾಮೀಜಿ, ಜ್ಯೋತಿಪ್ರಸಾದ ಜೊಲ್ಲೆ, ವಿಶ್ವನಾಥ ಕಮತೆ, ಅಪ್ಪಾಸಾಹೇಬ ಜೊಲ್ಲೆ, ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಂ.ಪಿ.ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ರವಿ ಹಂಜಿ ಮುಂತಾದವರು ಇದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

ಬೆಳಗಾವಿ:ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.