ಖಾನಾಪುರ: ಅಕ್ರಮ ಮರಳು ವಶ
Team Udayavani, Apr 29, 2020, 5:20 PM IST
ಖಾನಾಪುರ: ತಾಲೂಕಿನ ಪೂರ ಹತ್ತಿರ ಅರಣ್ಯ ವ್ಯಾಪ್ತಿಯಲ್ಲಿ ಆಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ಕಂದಾಯ, ನಾಗರಗಾಳಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ನಾಗರಗಾಳಿ ವಲಯ ಆರ್‌ಎಫ್‌ಒ ಶ್ರೀನಾಥ ಕಡೋಲ್ಕರ್ ಅರಣ್ಯ ಸೀಮೆಯಲ್ಲಿ ಮರಳು ಸಂಗ್ರಹಿಸಿಟ್ಟಿದ್ದ ಕಡೆ ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದರು. ಅರಣ್ಯ ಇಲಾಖೆ ಸೀಮೆಗೆ ಹಾನಿ ಮಾಡಿದ ಮತ್ತು ಅರಣ್ಯ ವ್ಯಾಪ್ತಿಯಲ್ಲಿ 2 ಬ್ರಾಸ್ ಸಾದಾ ಅಕ್ರಮ ಮರಳು ದಾಸ್ತಾನು ಮಾಡಿದ ಆರೋಪವನ್ನು ರವಿ ಸಂಭಾಜಿ ಕುರಾಡೆ ಉರ್ಫ್ ಘೋರ್ಪಡೆ ಎಂಬುವರ ಮೇಲೆ ಹೊರಿಸಿ ಎಫ್‌ಐಆರ್ ದಾಖಲಿಸಲಾಗಿದೆ.
ಡವಗಿ ನಾಲಾ ಬಳಿ ಆಕ್ರಮವಾಗಿ ತಗೆಯಲಾಗುತ್ತಿದ್ದ ಮರಳು ಕುರಿತು ಏ. 22 ರಂದು ಬೀಡಿ ಭಾಗದ ಕಂದಾಯ ಇಲಾಖೆ ಕಿರಿಯ ಅಧಿಕಾರಿಗಳು ತಹಶೀಲ್ದಾರ್‌ಗೆ ವರದಿ ಸಲ್ಲಿಸಿದ್ದರು. ಅವರ ವರದಿಯಲ್ಲಿ 8 ರಿಂದ 9 ಲಾರಿಗಳಷ್ಟು ಮರಳು ಸಂಗ್ರಹವಿದೆ ಎಂದು ತಿಳಿಸಲಾಗಿತ್ತು. ಅಂದರೆ ಅಂದಾಜು 24 ಬ್ರಾಸ್ ಮರಳು ಸಂಗ್ರಹವಿದೆ ಎಂಬ ಮಾಹಿತಿ ಇತ್ತು. ನಂತರ ಆ ಮರಳನ್ನು ಸಾಗಿಸಲಾಗಿದೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.