Kittur: ನಿಯಂತ್ರಣ ತಪ್ಪಿ ಮರಕ್ಕೆ ಬೈಕ್ ಡಿಕ್ಕಿ: ಇಬ್ಬರು ಯುವಕರು ಸಾ*ವು
Team Udayavani, Jan 15, 2025, 9:22 AM IST
ಚನ್ನಮ್ಮನ ಕಿತ್ತೂರು: ಚನ್ನಮ್ಮನ ಕಿತ್ತೂರು ತಾಲೂಕಿನ ಕಡತನಾಳ ಮತ್ತು ರಾಯಣ್ಣನ ಸಂಗೊಳ್ಳಿ ಮಾರ್ಗ ಮಧ್ಯದಲ್ಲಿ ಬೈಕೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲಿ ಮೃತ ಪಟ್ಟ ಘಟನೆ ಮಂಗಳವಾರ ನಡೆದಿದೆ.
ಮೃತ ದುರ್ದೈವಿಗಳು ಸವದತ್ತಿ ತಾಲೂಕಿನ ಹೊಸೂರ ಗ್ರಾಮದ ಸುರೇಶ ವಿಶ್ವನಾಥ ಹಳೆಮನಿ (28) ಹಾಗೂ ತಡಸಲೂರ ಗ್ರಾಮದ ಬಸವರಾಜ ನಾಗಪ್ಪ ಶಿಗ್ಗನವರ (27) ಎನ್ನುವವರಾಗಿದ್ದಾರೆ.
ಮೂವರು ಗೆಳೆಯರು ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆಂದು ಬಂದಿದ್ದರು. ಉತ್ಸವ ಮುಗಿದ ನಂತರ ಒಬ್ಬ ಗೆಳೆಯನನ್ನು ತುರಮರಿ ಗ್ರಾಮದಲ್ಲಿರುವ ಅವರ ಮನೆಗೆ ಬಿಟ್ಟು ಮರಳಿ ತಮ್ಮ ಸ್ವಗ್ರಾಮಕ್ಕೆ ಹೋಗುವ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು ಘಟನಾ ಸ್ಥಳಕ್ಕೆ ಚನ್ನಮ್ಮನ ಕಿತ್ತೂರು ಪಿಎಸ್‌ಐ ಪ್ರವೀಣ ಗಂಗೊಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಚನ್ನಮ್ಮನ ಕಿತ್ತೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?
Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ
Marathon: ಬೆಳಗಾವಿಯಲ್ಲಿ ಮ್ಯಾರಥಾನ್‌ಗೆ ಸಾನಿಯಾ ಮಿರ್ಜಾರಿಂದ ಚಾಲನೆ
Congress Session: ಬೆಳಗಾವಿ ರ‍್ಯಾಲಿ ಯಶಸ್ಸಿಗೆ 56 ಶಾಸಕರಿಗೆ ಜವಾಬ್ದಾರಿ
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Hubballi–Dharwad; 45 ಅಪರಾಧಿಗಳು ಬೇರೆ ಬೇರೆ ಜಿಲ್ಲೆಗಳಿಗೆ 6 ತಿಂಗಳ ಕಾಲ ಗಡಿಪಾರು
Maha Kumbh; ಐಐಟಿ ಬಾಂಬೆಯಲ್ಲಿ ಕಲಿತ ಏರೋಸ್ಪೇಸ್ ಇಂಜಿನಿಯರ್ ಈಗ ಬಾಬಾ!
Kundapura: ಆಶ್ರಯ ನೀಡಿದ ಕೊರಗರಿಗೇ ಈಗ ಭೂಮಿ ಇಲ್ಲ!
Liquor Policy Case:ಕೇಜ್ರಿ, ಸಿಸೋಡಿಯಾ ವಿರುದ್ಧ ಪ್ರಾಸಿಕ್ಯೂಷನ್: EDಗೆ ಕೇಂದ್ರದ ಅನುಮತಿ
Mangaluru: ಕದ್ರಿ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ; ಕರಾವಳಿಯ ಅನಾವರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.