ನೀಮೋ ಪರಾರಿಗೆ ಪ್ರಧಾನಿ ಮೋದಿ ಕುಮ್ಮಕ್ಕು
Team Udayavani, Feb 25, 2018, 6:05 AM IST
ಅಥಣಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನಡೆದಿರುವ 11,500 ಕೋಟಿ ರೂ. ಹಗರಣದ ಮುಖ್ಯ ಆರೋಪಿ ನೀರವ್ ಮೋದಿ ದೇಶದಿಂದ ಪಲಾಯನ ಮಾಡಲು ಪ್ರಧಾನಿ ನರೇಂದ್ರ ಮೋದಿಯವರ ಕುಮ್ಮಕ್ಕು ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಶನಿವಾರ ನಡೆದ “ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ’ಯಲ್ಲಿ ಮಾತನಾಡಿದ ಅವರು, ನೀರವ್ ಮೋದಿ ದೇಶದಿಂದ ಸುರಕ್ಷಿತವಾಗಿ ಪಲಾಯನ ಮಾಡಲು ಪ್ರಧಾನಿ ಸಹಾಯ ಮಾಡಿದ್ದಾರೆ. ಅವರ ಕುಮ್ಮಕ್ಕಿಲ್ಲದೆ ಇದು ಸಾಧ್ಯವೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ, ಉದ್ಯಮಿಗಳಾದ ನೀರವ್ ಮೋದಿ ಮತ್ತು ಲಲಿತ್ ಮೋದಿ ಅವರಿಂದ ದೇಶ ಹಾಳಾಗುತ್ತಿದೆ. ಭ್ರಷ್ಟಾಚಾರ ಮಿತಿ ಮೀರುತ್ತಿದೆ. ಸ್ವತಃ ಪ್ರಧಾನಿ ಮೋದಿ ಅವರೇ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆಂದು ಟೀಕಿಸಿದರು.
ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದಾಗಲೆಲ್ಲ ನಮ್ಮ ಸರಕಾರದ ವಿರುದಟಛಿ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಆದರೆ, ಈ ಆರೋಪಗಳ ಹಿಂದೆ ಯಾವುದೇ ಆಧಾರಗಳಿಲ್ಲ. ನಿಜವಾದ ದಾಖಲೆಗಳಿದ್ದರೆ ಅದನ್ನು ಮುಂದಿಟ್ಟುಕೊಂಡು ಆರೋಪ ಮಾಡಲಿ. ಇಲ್ಲದಿದ್ದರೆ ಅವರು ಪ್ರಧಾನಿಯಾಗಲು ನಾಲಾಯಕ್ ಎಂದು ವಾಗ್ಧಾಳಿ ನಡೆಸಿದರು.
ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಬಂದಾಗ ಕರ್ನಾಟಕದ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲ. ನಮ್ಮ ಸರ್ಕಾರದ ಮೇಲೆ ಬೇಜವಾಬ್ದಾರಿಯಿಂದ ಯಾವುದೇ ದಾಖಲೆ ಇಲ್ಲದೇ ಆರೋಪಿಸುತ್ತಿದ್ದಾರೆ. ಇದು ಪ್ರಧಾನಿ ಘನತೆಗೆ ಗೌರವ ತರುವಂಥದ್ದಲ್ಲ.ಕೇಂದ್ರ ಸರ್ಕಾರದ ಬಳಿಯೇ ಸಿಬಿಐ, ಆದಾಯ ತೆರಿಗೆ ಮೊದಲಾದ ಏಜೆನ್ಸಿಗಳಿವೆ. ಅವುಗಳನ್ನಿಟ್ಟುಕೊಂಡು ನಮ್ಮ ವಿರುದಟಛಿದ ಭ್ರಷ್ಟಾಚಾರದ ದಾಖಲಾತಿಗಳನ್ನು ತೋರಿಸಲಿ ಎಂದು ಸವಾಲು ಹಾಕಿದರು.
ವಿಭೂತಿ ಧಾರಣೆ
ವಿಜಯಪುರ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತಿಕೋಟಾದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ.ಪಾಟೀಲ ಅವರು ವಿಭೂತಿ ಧಾರಣೆ ಮಾಡಿ ಬಸವೇಶ್ವರರ ಮೂರ್ತಿ ನೀಡಿ ಗೌರವಿಸಿದರು. ರಾಜ್ಯದಲ್ಲಿ ಶನಿವಾರ ಎರಡನೇ ಹಂತದ ಜನಾಶೀರ್ವಾದ ಯಾತ್ರೆ ಆರಂಭಿಸಿರುವ ರಾಹುಲ್ ಅವರು ತಿಕೋಟಾ ಪಟ್ಟಣದಲ್ಲಿ ಸ್ತ್ರೀಶಕ್ತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ತಮ್ಮ ಭಾಷಣದುದ್ದಕ್ಕೂ ಬಸವಣ್ಣನನ್ನು ಸ್ಮರಿಸಿದ ಅವರು, ಬಸವ ಜನ್ಮಭೂಮಿಗೆ ಬಂದಿರುವುದು ನನ್ನ ಭಾಗ್ಯ.
ಬಸವೇಶ್ವರರ ಕಾಯಕವೇ ಕೈಲಾಸ, ನುಡಿದಂತೆ ನಡೆಯುವ ಸಿದಾಟಛಿಂತಗಳನ್ನು ಪದೇಪದೆ ಪ್ರತಿಪಾದಿಸಿದರು. ಭಾಷಣ ಮುಗಿಸಿ ಆಸೀನದತ್ತ ಬರುತ್ತಲೇ ರಾಹುಲ್ ಗಾಂಧಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ|ಎಂ.ಬಿ. ಪಾಟೀಲ ವಿಭೂತಿ ಧಾರಣೆ ಮಾಡಿದರು. ಅಲ್ಲದೆ ಪತ್ನಿ ಆಶಾ ಪಾಟೀಲ, ಪುತ್ರ ಬಸವನಗೌಡ ಅವರೊಂದಿಗೆ ಬಸವೇಶ್ವರರ ಪ್ರತಿಮೆ ನೀಡಿ ಸನ್ಮಾನಿಸಿದರು.
ಮೋದಿ ಆಡಳಿತಾವಧಿಯಲ್ಲಿ ಹಣ ಎಲ್ಲಿಟ್ಟರೂ ರಕ್ಷಣೆ ಇಲ್ಲ
ಅಥಣಿ: ಪ್ರಧಾನಿ ಮೋದಿ ಅಧಿಕಾರಾವಧಿಯಲ್ಲಿ ಜನರು ಹಣ ಎಲ್ಲಿಟ್ಟರೂ ರಕ್ಷಣೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಸಂಸದೀಯ
ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಅಥಣಿಯಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡು
ಮಾತನಾಡಿದ ಅವರು, ಹಣ ಮನೆಯಲ್ಲಿಟ್ಟರೆ ನರೇಂದ್ರ ಮೋದಿ ತೆಗೆದುಕೊಂಡು ಹೋಗ್ತಾರೆ. ಬ್ಯಾಂಕಲ್ಲಿಟ್ಟರೆ ನೀರವ್ ಮೋದಿ
ತೆಗೆದುಕೊಂಡು ಹೋಗ್ತಾರೆ. ಷೇರು ಮಾರುಕಟ್ಟೆಯಲ್ಲಿ ಇಟ್ಟರೆ ಲಲಿತ್ ಮೋದಿ ಎತ್ತಿಕೊಂಡು ಹೋಗ್ತಾರೆ. ಜನರು ಎಲ್ಲಿಯೂ ಹಣ
ಇಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು. ಗುಜರಾತ್ ಚುನಾವಣೆಯಲ್ಲಿ ಮೋದಿ ಮತ್ತು ಅಮಿತ್ ಶಾ ಗೆ
ರಾಹುಲ್ ಗಾಂಧಿ ಒಬ್ಬರೇ ಬೆವರಿಳಿಸಿದ್ದಾರೆ. ಅವರು ಕರ್ನಾಟಕಕ್ಕೆ ಬಂದು ಎಷ್ಟೇ ತಿಪ್ಪರಲಾಗ ಹಾಕಿದರೂ ಮತ್ತೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಸತೀಶ ಜಾರಕಿಹೊಳಿ ಎಲ್ಲಿ ಎಂದ ರಾಹುಲ್!
ಅಥಣಿಯಲ್ಲಿ ನಡೆದ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆಯಲ್ಲಿ ಭಾಗಿಯಾಗಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂದು
ಕುಳಿತುಕೊಳ್ಳುತ್ತಿದ್ದಂತೆ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಎಲ್ಲಿ ಎಂದು ಕೇಳಿದರು. ಇದರಿಂದ ಸ್ವಲ್ಪ ಅಚ್ಚರಿಗೊಂಡವರಂತೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಸತೀಶ ಜಾರಕಿಹೊಳಿ ಹತ್ತಿರ ತಿರುಗಿ ನೋಡಿದರು. ಅಲ್ಲಿಯೇ ಪಕ್ಕದಲ್ಲಿ ಕುಳಿತಿದ್ದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಅವರು ಸತೀಶ ಅವರತ್ತ ತಿರುಗಿ ಕರೆದರು. ಮೊದಲನೇ ಸಾಲಿನಲ್ಲಿ ಪ್ರಕಾಶ ಹುಕ್ಕೇರಿ ಪಕ್ಕದಲ್ಲಿ ಕುಳಿತಿದ್ದ ಸತೀಶ ತಕ್ಷಣ ಎದ್ದು ಬಂದು ರಾಹುಲ್‌ಗೆ ನಮಸ್ಕರಿಸಿ ಹಸ್ತಲಾಘವ ಮಾಡಿದರು.
ವಿದ್ಯಾರ್ಥಿಗಳೊಂದಿಗೆ ಸೆಲ್ಫಿ
ವಿಜಯಪುರ: ಜನಾಶೀರ್ವಾದ ಯಾತ್ರೆ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ತಿಕೋಟ ಮಹಿಳಾ ಸಮಾವೇಶದ
ನಂತರ ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡರು. ರಸ್ತೆಯಲ್ಲಿ ಸಣ್ಣ ಗೂಡಂಗಡಿಯಲ್ಲಿ ಸಾರ್ವಜನಿಕರ ಜತೆ ಕುಳಿತು ಟೀ ಹಾಗೂ ಬಿಸ್ಕತ್ ಸವಿದರು. ಗಾಂಧಿ ಚೌಕ್‌ನಲ್ಲಿ ರಸ್ತೆ ಬದಿ ಜನರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಹತ್ತು ನಿಮಿಷ ಆ್ಯಂಬುಲೆನ್ಸ್ ನಿಲ್ಲುವಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.