ನೀರಿನ ಘಟಕಗಳಿಗೆ ನಿರ್ವಹಣೆ ಕೊರತೆ
Team Udayavani, Mar 15, 2020, 2:16 PM IST
ಸಾಂದರ್ಭಿಕ ಚಿತ್ರ
ಗೋಕಾಕ: ಬೇಸಿಗೆ ಬಂತೆಂದರೆ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲೆಡೆ ತಲೆದೋರುತ್ತದೆ. ಈ ನಿಟ್ಟಿನಲ್ಲಿ ತಾಲೂಕಾಡಳಿತ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ನಗರ ಅಷ್ಟೇ ಅಲ್ಲ, ಗ್ರಾಮೀಣ ಪ್ರದೇಶದ ಜನರು ಪರದಾಡುವ ಪರಿಸ್ಥಿತಿಯೂ ಬರಬಹುದು.
ತಾಲೂಕಿನಲ್ಲಿ ಬಿಸಿಲಿನ ಬೇಗೆ ದಿನದಿಂದ-ದಿನಕ್ಕೆ ಹೆಚ್ಚಾಗುತ್ತಿದ್ದು, ಮಾರ್ಚ್ ತಿಂಗಳಲ್ಲಿಯೇ ಬಿಸಿಲಿನ ತಾಪಕ್ಕೆ ಬೇಸತ್ತ ಜನ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಸರ್ಕಾರ ಲಕ್ಷಾಂತರ ಹಣ ಕುಡಿಯುವ ನೀರಿಗಾಗಿ ವ್ಯಯಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದರೂ ಉಪಯೋಗವಿಲ್ಲ ದಂತಾಗಿರುವುದು ದುರ್ದೈವ. ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಕಾಗದಗಳಲ್ಲಿ ನಮೂದಿಸಿದ ಪ್ರಕಾರ ಒಟ್ಟು 126 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ತುಕ್ಕಾನಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರವಿರುವ ಘಟಕ ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಪ್ರಾರಂಭವಾಗಿಯೇ ಇಲ್ಲ. ತಾಂತ್ರಿಕ ದೋಷದಿಂದ ಮೆಳವಂಕಿ, ಮುನ್ನಾಳ, ಲಗಮೇಶ್ವರ (ಲಕ್ಷ್ಮೇಶ್ವರ), ಸಿದ್ದಾಪುರಹಟ್ಟಿ, ಶಿಲ್ತಿಭಾಂವಿ, ಸುಲಧಾಳ, ಕೈತನಾಳ, ರಾಜನಕಟ್ಟಿ, ಕೌಜಲಗಿ ಸೇರಿದಂತೆ ಇನ್ನೂ ಕೆಲ ಗ್ರಾಮಗಳಲ್ಲಿ ಕೆಟ್ಟು ಹೋಗಿದ್ದು, ಸಂಬಂಧಿ ಸಿದ ಅಧಿ ಕಾರಿಗಳು ಘಟಕಗಳ ದುರಸ್ತಿಯನ್ನೂ ಮಾಡಿಸಿಲ್ಲ. ಸಾರ್ವಜನಿಕರು ಬಳಸದೇ ಇರುವ ಮೂಡಲಗಿ ಗ್ರಾಮೀಣ, ಖನಗಾಂವ, ಹಣಮಾಪುರ (ಮಕ್ಕಳಗೇರಿ), ಮಾಲದಿನ್ನಿ ಗ್ರಾಮದಲ್ಲಿಯ ಘಟಕಗಳನ್ನು ಜನದಟ್ಟಣೆ ಇರುವ ಕಡೆಗೆ ಸ್ಥಳಾಂತರಿಸುವ ಅವಶ್ಯಕತೆ ಇದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಶೇ.20 ಮನೆ ಬಳಕೆಗೆ ಮತ್ತು ಶೇ.10 ಕೈಗಾರಿಕೆಗಳಿಗೆ, ಶೇ.70 ಕೃಷಿಗೆ ನೀರು ಬೇಕಾಗುತ್ತದೆ. ಇದೇ ಸಮಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಂತರ್ಜ ಲಮಟ್ಟ ಕುಸಿತವಾಗುತ್ತಿದ್ದು, ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೇ ಹಾಹಾಕಾರ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೂಳೆತ್ತುವ ಕಾರ್ಯ: ಕಳೆದ ಬಾರಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ ತಾಲೂಕಿನ ಜನತೆ ಈಗ ಬಿಸಿಲಿನ ತಾಪಕ್ಕೆ ಪರಿತಪಿಸುತ್ತಿದ್ದಾರೆ. ನೀರಿಗಾಗಿ ಅಂತರ್ಜಲ ಮಟ್ಟದ ಹೆಚ್ಚಳಕ್ಕೆ ನದಿ, ಹಳ್ಳಗಳಲ್ಲಿ ಹೂಳೆತ್ತುವ ಕಾರ್ಯ ಮಾಡಬೇಕಾಗಿದೆ. ನೀರಿನ ಬವಣೆಯಿಂದ ಜನರು ತತ್ತರಿಸುವ ಮೊದಲೇ ಪೂರ್ವಭಾವಿಯಾಗಿ ಅ ಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ. ಬೆಳೆಯುತ್ತಿರುವ ಜನಸಂಖ್ಯೆ, ನಗರೀಕರಣ ಮತ್ತು ಕೈಗಾರಿಕೆಗಳಿಂದ ಭೂ ತಾಪಮಾನ ಹೆಚ್ಚಾಗುತ್ತಲೇ ಇದೆ. ಇದರಿಂದ ಬರ-ಪ್ರವಾಹ ವಿಕೋಪಗಳು ತಲೆದೋರುತ್ತಿವೆ. ಪರಿಸರ ಮತ್ತು ನೀರಿನ ಮೂಲಗಳ ಜವಾಬ್ದಾರಿಯುತ ರಕ್ಷಣೆ, ನಿರ್ವಹಣೆ, ಬಳಕೆಗೆ ಸರ್ಕಾರ, ಸಂಘ-ಸಂಸ್ಥೆಗಳು, ಸಾರ್ವಜನಿಕರು ಮುಂದಾಗಬೇಕು. ಅನಗತ್ಯ ನೀರಿನ ಬಳಕೆಗೆ ಕಡಿವಾಣ ಹಾಕಬೇಕು. ಅನಗತ್ಯ ಬೋರ್‌ವೆಲ್ ಕೊರೆಸುವುದನ್ನು ನಿಲ್ಲಿಸಿದಾಗ ಮಾತ್ರ ಜೀವರಾಶಿ ಬದುಕಲು ಸಾಧ್ಯ ಎನ್ನುವುದು ಪ್ರಜ್ಞಾವಂತರ ಮಾತು.
ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 126 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ 13 ಘಟಕಗಳು ದುರಸ್ತಿ ಇರುವುದರಿಂದ ತೊಂದರೆಯಾಗಿದ್ದು, ಅವುಗಳನ್ನು 8 ದಿನಗಳಲ್ಲಿ ದುರಸ್ತಿ ಮಾಡಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು. ಅಲ್ಲದೇ ಹೆಚ್ಚುವರಿಯಾಗಿ 4 ಘಟಕ ನಿರ್ಮಿಸಲು ಮಂಜೂರಾತಿ ದೊರಕಿದೆ. – ಐ.ಎಂ. ದಫೇದಾರ, ಗ್ರಾಮೀಣ ಕುಡಿವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ (ಪ್ರಭಾರಿ).
ಕೌಜಲಗಿ ಪಟ್ಟಣದ ಮಾರ್ಕೆಟ್‌ನಲ್ಲಿ ಕುಡಿಯುವ ನೀರಿನ ಯೋಜನೆಯಡಿ ಬೋರ್‌ವೆಲ್ ಕೊರೆದು ಜಲಕುಂಭ ನಿರ್ಮಿಸಲಾಗಿತ್ತು. ಅದರಿಂದಾಗಿ ಅಲ್ಲಿ ಕುಡಿಯುವ ನೀರಿನೊಂದಿಗೆ ಬಳಕೆಗೆ ಹೆಚ್ಚಿನ ನೀರು ಸಿಕ್ಕಿತ್ತು. ಆದರೆ ಕೆಲ ವರ್ಷಗಳ ಹಿಂದೆ ಜಲಕುಂಭ ತೆಗೆದು ಅಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರು. ಆದರೆ ಕಳೆದ 6 ತಿಂಗಳಿಂದ ಘಟಕ ಬಂದ್ ಆಗಿದ್ದು ಮತ್ತೆ ನೀರಿನ ಸಮಸ್ಯೆ ತಲೆದೋರಿದೆ.- ಪರಮೇಶ್ವರ ಹೊಸಮನಿ, ಜಿಪಂ ಮಾಜಿ ಸದಸ್ಯ
-ಮಲ್ಲಪ್ಪ ದಾಸಪ್ಪಗೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
President ಮುರ್ಮು ಅವರಿಂದ ಇಂದು ಬೆಳಗಾವಿಯಲ್ಲಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ
ಮಗಳ ಮೇಲೆ ಎರಗಲು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ
Butterfly Park: ಬೆಳಗಾವಿಯ ಹಿಡಕಲ್ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.