ಕೈಗಾರಿಕೆಗಳಿಗೆ ಜಮೀನು: ಭೂ ಲೆಕ್ಕ ಪರಿಶೋಧನೆಗೆ ಆದೇಶ
Team Udayavani, Dec 28, 2022, 7:15 AM IST
ಬೆಳಗಾವಿ: “ಕರ್ನಾಟಕ ಕೈಗಾರಿಕಾ ಪ್ರದೇಶಾಭಿ ವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಕೈಗಾರಿಕೆಗಳ ಸ್ಥಾಪನೆಗೆ ಸ್ವಾಧೀನಪಡಿಸಿಕೊಂಡ ಜಮೀನಿನ ಸಮಗ್ರ ಲೆಕ್ಕ ಪರಿಶೋಧನೆಗೆ (ಲ್ಯಾಂಡ್ ಆಡಿಟ್) 3 ತಿಂಗಳ ಹಿಂದೆ ಆದೇಶಿಸಲಾಗಿದೆ. ವರದಿ ಬಂದ ಕೂಡಲೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕದ ಮೇಲಿನ ಚರ್ಚೆ ವೇಳೆ ಮಾತ ನಾಡಿ, ಉಕ್ಕು ಮತ್ತು ಉಷ್ಣ ಸ್ಥಾವರ ಸೇರಿದಂತೆ ವಿವಿಧ ಕೈಗಾರಿಕೆಗಳ ಸ್ಥಾಪನೆಗೆ ಜಮೀನು ಪಡೆದು 8-10 ವರ್ಷಗಳಾದರೂ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ. ಹೀಗಾಗಿ 10 ವರ್ಷಗಳಲ್ಲಿ ಯಾವ ಕೈಗಾರಿಕೆ ಸ್ಥಾಪನೆಗೆ ಯಾವ ಕಂಪೆನಿಗೆ ಎಷ್ಟು ಜಮೀನು ಮಂಜೂರು,ಹಂಚಿಕೆ ಆಗಿದೆ, ಜಮೀನು ದುರ್ಬಳಕೆ ಆಗಿದೆಯೇ, ಕೈಗಾರಿಕೆ ಸ್ಥಾಪಿಸ ದಿರುವುದಕ್ಕೆ ಕಾರಣವೇನು ಎಂಬ ಬಗ್ಗೆ ವರದಿ ಕೇಳಿದ್ದು, ಬಂದ ಕೂಡಲೇ ಸದನದ ಮುಂದಿಡುವೆ ಎಂದರು.
ಮಿತ್ತಲ್‌ಗೆ ನೋಟಿಸ್
ಬಳ್ಳಾರಿ ಜಿಲ್ಲೆ ಕುಡುತಿನಿ ಬಳಿ ಮಿತ್ತಲ್ ಕಂಪೆನಿಗೆ 5 ಸಾವಿರ ಎಕ್ರೆ ಜಮೀನು ನೀಡಿದ್ದು, ಕೈಗಾರಿಕೆ ಸ್ಥಾಪಿಸಿಲ್ಲ. ಕಂಪೆನಿಗೆ ನೋಟಿಸ್ ನೀಡಲಾಗಿದೆ. ಸ್ವತಃ ನಾನೂ ಅವರಲ್ಲಿ ಪ್ರಸ್ತಾವಿಸಿದ್ದೆ. ಕೈಗಾರಿಕೆ ಸ್ಥಾಪಿಸಲು ಆಗಿಲ್ಲ ಎಂದು ಒಪ್ಪಿಕೊಂಡ ಮಿತ್ತಲ್ ಬೇರೊಂದು ಯೋಜನೆ ಸಲ್ಲಿಸುವುದಾಗಿ ಹೇಳಿದ್ದರು. ಈವರೆಗೂ ಬಂದಿಲ್ಲ. ಉತ್ತಮ್ ಗಾಲ್ವಾ ಕಂಪೆನಿಗೂ ನೋಟಿಸ್ ನೀಡಿದ್ದು, 6 ತಿಂಗಳು ಸಮಯ ಕೇಳಿದೆ ಎಂದು ಸಿಎಂ ಹೇಳಿದರು.
ಮಸೂದೆಗೆ ಅಂಗೀಕಾರ
ರಾಜ್ಯದಲ್ಲಿ ಕೈಗಾರಿಕಾ ಸ್ಥಾಪನೆಗೆ ಎದುರಾಗುವ ತಾಂತ್ರಿಕ ಹಾಗೂ ಕಾನೂನಾತ್ಮಕ ಅಡೆ- ತಡೆ ಗಳ ಪರಿಹಾರಕ್ಕೆ ಪ್ರತ್ಯೇಕ ವಾಗಿ ಕರ್ನಾಟಕ ರಾಜ್ಯ ಹೂಡಿಕೆ ದಾರರ ಪ್ರಾಧಿಕಾರ ರಚಿಸುವ “ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ-2022’ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರಕಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.