ರಸ್ತೆ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ
Team Udayavani, May 22, 2020, 5:02 AM IST
ರಾಮದುರ್ಗ: ರೈತರ ಜಮೀನುಗಳ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಸರಕಾರ ಆದ್ಯತೆ ನೀಡಿದ್ದು, ಗುತ್ತಿಗೆದಾರರು ಗುಣ ಮಟ್ಟದ ಕಾಮಗಾರಿ ಮಾಡಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಹುಲಕುಂದದಲ್ಲಿ ಬುಧವಾರ ರೂ. 35 ಲಕ್ಷ ವೆಚ್ಚದ ಹುಲಕುಂದ- ಮೆಳ್ಳಿಕೇರಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮೀಣ ರಸ್ತೆಗಳು ಸುಧಾರಣೆಗೊಂಡರೆ ರೈತರಿಗೆ ತಮ್ಮ ಜಮೀನುಗಳಿಂದ ಆಹಾರ ಧಾನ್ಯ ಸಾಗಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಜಿ.ಪಂ ಸದಸ್ಯ ರಮೇಶ ದೇಶಪಾಂಡೆ, ತಾ.ಪಂ ಸದಸ್ಯ ಹನಮಂತ ವಗ್ಗನ್ನವರ, ಜಿಪಂ ಎಇಇ ಗದಿಗೆಪ್ಪ ಕುರ್ತಕೋಟಿ, ಇಂಜನೀಯರ ಬಿ.ಎಸ್. ಕರ್ಕಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಶಾಂತಯ್ಯ ಅರವಟಗಿ, ಮಹೇಶ ಹೊಸೂರ, ವೆಂಕಟೇಶಗೌಡ ಪಾಟೀಲ, ಗ್ರಾಮದ ಮುಖಂಡರಾದ ಎಫ್.ಆರ್. ನಾಡಗೌಡ್ರ, ಬಾಲಪ್ಪಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಗೋಲಪ್ಪ ದಾನಶೇಟ್ಟಿ, ಗಣಪತಿ ಮಿರ್ಜಿ, ಸಿದ್ದು ಮೇತ್ರಿ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.