ಪ್ರತಿ ಮನೆಗೆ ಶುದ್ಧ ಕುಡಿವ ನೀರು
Team Udayavani, Mar 15, 2021, 3:08 PM IST
ರಾಮದುರ್ಗ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಜಿ.ಪಂ ಇಂಜಿನಿಯರಿಂಗ್ ಉಪವಿಭಾಗ ಹಾಗೂಪುರಸಭೆಯ ವಿವಿಧ ಯೋಜನೆ ಅಡಿಯಲ್ಲಿರವಿವಾರ ತಾಲೂಕಿನ ವಿವಿಧ ಗ್ರಾಮ ಹಾಗೂಪಟ್ಟಣ ಸೇರಿದಂತೆ ಒಟ್ಟು ರೂ. 5.20 ಕೋಟಿ ರೂ. ಅನುದಾನದ ಕಾಮಗಾರಿಗಳಿಗೆ ಶಾಸಕಮಹಾದೇವಪ್ಪ ಯಾದವಾಡ ಭೂಮಿಪೂಜೆ ನೆರವೇರಿಸಿದರು.
ರಾಜ್ಯ ಮತ್ತು ಕೇಂದ್ರ ಸರಕಾರ ಜಲ ಜೀವನ ಮಿಷನ್ ಯೋಜನೆ ಮೂಲಕ ಗ್ರಾಮಗಳ ಪ್ರತಿಮನೆಗೆ ನಳ ಜೋಡಣೆ ಮಾಡಿ ಶುದ್ಧ ಕುಡಿಯುವನೀರು ಪೂರೈಸಲಿದೆ. ಪೈಪ್ ಜೋಡಣೆ ಮತ್ತುಇತರೆ ಕಾಮಗಾರಿಗೆ ಗ್ರಾಮಸ್ಥರು ಸಂಪೂರ್ಣಸಹಕಾರ ನೀಡಬೇಕು ಎಂದು ಹೇಳಿದರು.ತಾಲೂಕಿನ ಮುದೇನೂರಲ್ಲಿ 1.40 ಕೋಟಿಅನುದಾನದಲ್ಲಿ 630 ಮನೆಗಳಿಗೆ ನಳ ಜೋಡಣೆ,20 ಲಕ್ಷ ಅನುದಾನದಲ್ಲಿ ಮುದೇನೂರದಿಂದ ಮುದಕವಿವರೆಗೆ ರಸ್ತೆ ಸುಧಾರಣೆ, ಚೆನ್ನಾಪೂರಡಿಎಲ್‌ಟಿಯಲ್ಲಿ 68 ಲಕ್ಷದಲ್ಲಿ 451 ಮನೆಗಳಿಗೆ ನಳ ಜೋಡಣೆ, ಚೆನ್ನಾಪೂರದಲ್ಲಿ 37.50 ಲಕ್ಷದಲ್ಲಿ 220 ಮನೆಗಳಿಗೆ ನಳ ಜೋಡಣೆಹಾಗೂ 40 ಲಕ್ಷದಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ಅಂಗನವಾಡಿ ಕಾಮಗಾರಿ, ಆನೆಗುದ್ದಿಯಲ್ಲಿಹಣಮಾರ ಚೆನ್ನಾಪೂರ ರಸ್ತೆ ಸುಧಾರಣೆಗೆ15.15 ಲಕ್ಷ, ಎಂ.ತಿಮ್ಮಾಪೂರದಲ್ಲಿ 62 ಲಕ್ಷದಲ್ಲಿ195 ಮನೆಗಳ ನಳ ಜೋಡಣೆ, ಪಟ್ಟಣದಲ್ಲಿ ನಗರೋತ್ಥಾನದ 2ನೇ ಹಂತದಲ್ಲಿ ನಿರ್ಮಿಸಿದ ಮುಖ್ಯ ರಸ್ತೆಗಳ ಪಕ್ಕದಲ್ಲಿನ ಗಟಾರ ಮೇಲೆ ಸ್ಲ್ಯಾಬ್ ಹಾಕುವ ರೂ. 85 ಲಕ್ಷದ ಕಾಮಗಾರಿಸೇರಿದಂತೆ ಒಟ್ಟು 5.20 ಕೋಟಿ ಅನುದಾನದ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಜನಕರಡ್ಡಿಹಕಾಟಿ, ಮುದೇನೂರ ಕೃಷಿ ಪತ್ತಿನ ಸಹಕಾರಿಸಂಘದ ಅಧ್ಯಕ್ಷ ಬಸಲಿಂಗಪ್ಪ ಹರಗುಟಗಿ, ಸದಸ್ಯವಿರುಪಾಕ್ಷಿ ಕಾಯಿ, ಮುಖಂಡರಾದ ಜಿ.ಎಚ್.ಪಾಟೀಲ, ಗೋವಿಂದರಡ್ಡಿ ಪೆಟೂÉರ, ಉಮೇಶಹಕಾಟಿ, ಮುದಕವಿ ಗ್ರಾಪಂ ಅಧ್ಯಕ್ಷೆ ಶಾಂತವ್ವಜಾಲಾಪೂರ, ಉಪಾಧ್ಯಕ್ಷ ಬಸಪ್ಪ ಮುದಕಟ್ಟಿ,ಜಿಪಂ ಸಹಾಯಕ ಕಾರ್ಯನಿರ್ವಾಹಕಅಭಿಯಂತರ ಬಿ.ಐ. ಕೊಳ್ಳಿ, ಗ್ರಾಮೀಣಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀನಿವಾಸ ವಿಶ್ವಕರ್ಮ, ಸಹಾಯಕ ಅಭಿಯಂತರರಾದ ಮಹಾಂತೇಶ ಚೌಗಲಾ, ಪತ್ತಾರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.