ಪಿಎಸ್‌ಐ ವಿರುದ್ಧ ನ್ಯಾಯವಾದಿಗಳ ಪ್ರತಿಭಟನೆ
Team Udayavani, Jun 9, 2019, 10:42 AM IST
ಮೂಡಲಗಿ: ನ್ಯಾಯವಾದಿಗಳು ನ್ಯಾಯಾಲಯ ಕಲಾಪದಿಂದ ಹೊರಗುಳಿದು ಚಿಕ್ಕೋಡಿ ಪಿಎಸ್‌ಐ ಪಾಟೀಲ್ ವಿರುದ್ಧ ಪ್ರತಿಭಟಿಸಿದರು.
ಮೂಡಲಗಿ: ಸ್ಥಳೀಯ ದಿವಾಣಿ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಚಿಕ್ಕೋಡಿ ಪಿಎಸ್‌ಐ ಎಸ್.ಬಿ. ಪಾಟೀಲ ನ್ಯಾಯವಾದಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದನ್ನು ಖಂಡಿಸಿ ನ್ಯಾಯವಾದಿಗಳು ನ್ಯಾಯಾಲಯ ಕಲಾಪದಿಂದ ದೂರ ಉಳಿದು ಪ್ರತಿಭಟಣೆ ನಡೆಸಿದರು.
ಈ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಪಿ. ಮಗದುಮ್ ಮಾತನಾಡಿ, ವಕೀಲರ ನಿಂದನೆ ಮಾಡುವುದು ನ್ಯಾಯಾಂಗ ವ್ಯವಸ್ಥೆಯ ನಿಂದನೆ ಮಾಡಿದಂತೆ, ಕಾನೂನು ತಿಳಿದ ವಕೀಲರನ್ನೇ ಅವಮಾನ ಮಾಡಿ ಪೊಲೀಸ್ ಠಾಣೆಯಲ್ಲಿ ಪಿರ್ಯಾದು ಸ್ವೀಕರಿಸದೇ ಹೋದರೆ ಸಾಮಾನ್ಯ ಪ್ರಜೆಗಳ ಗತಿಯೇನು. ಶೀಘ್ರವೇ ಪಿಎಸ್‌ಐ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದು ಇಂತವರ ವಿರುದ್ದ ಪ್ರತಿಯೊಂದು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸುವ ಮೂಲಕ ಇಂತಹ ಪೊಲೀಸ್ ಅಧಿಕಾರಿಗಳಿಗೆ ಬುದ್ಧಿ ಕಲಿಸಬೇಕು ಎಂದರು.
ಹಿರಿಯ ನ್ಯಾಯವಾದಿ ಯು.ಆರ್. ಜೋಕಿ ಮಾತನಾಡಿ, ವಕೀಲರಾದ ಸಂದೀಪ ಮಾಳಿ, ಬಸವರಾಜ ಟೊಣ್ಣೆ ಹಾಗೂ ಅಶೋಕ ಹರಗಾಪೂರೆ ಇವರು ಕಕ್ಷಿದಾರನ ಪಿರ್ಯಾದು ಸಲ್ಲಿಸಲು ಪೊಲೀಸ್ ಠಾಣೆಗೆ ತೆರಳಿದ ಸಂದರ್ಭದಲ್ಲಿ ನ್ಯಾಯವಾದಿಗಳಿಗೆ ಅಪಮಾನ ಮಾಡಿರುವ ಘಟನೆ ದುರದೃಷ್ಟಕರ. ಪಿರ್ಯಾದು ಸ್ವೀಕರಿಸುವುದು ಪೊಲೀಸರ ಕರ್ತವ್ಯವಾಗಿದೆ. ಅದನ್ನು ಬಿಟ್ಟು ಕಕ್ಷಿದಾರನ ಪರ ವಕೀಲರ ನಿಂದನೆ ಮಾಡುವುದು ಕರ್ತವ್ಯಲೋಪವಾಗುತ್ತದೆ. ಆದ್ದರಿಂದ ಇವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಸ್.ವಾಯ್. ಹೊಸಟ್ಟಿ, ಪ್ರಧಾನ ಕಾರ್ಯದರ್ಶಿ ಎಲ್.ವೈ. ಅಡಿಹುಡಿ, ಸಹ ಕಾರ್ಯದರ್ಶಿ ಆರ್.ಎಸ್. ರೊಡ್ಡನವರ ಮತ್ತು ಪಿ.ಎಲ್. ಮನ್ನಿಕೇರಿ, ಖಜಾಂಚಿ ವಿ.ಕೆ. ಪಾಟೀಲ, ಮಹಿಳಾ ಪ್ರತಿನಿಧಿ ಎ.ಎಚ್. ಗೊಡ್ಯಾಗೋಳ, ಹಿರಿಯ ನ್ಯಾಯವಾದಿಗಳಾದ ಕೆ.ಎಲ್. ಹುಣಶ್ಯಾಳ, ಎಸ್.ಎಸ್. ಗೋಡಿಗೌಡರ, ಎ.ಕೆ. ಮದಗನ್ನವರ, ವಿ.ವಿ. ನಾಯಿಕ, ಬಿ.ಎನ್. ಸಣ್ಣಕ್ಕಿ, ಆರ್.ಬಿ. ಮಮದಾಪೂರ, ಎಂ.ಎಲ್. ಸವಸುದ್ದಿ, ಆರ್.ಎಂ. ಐಹೊಳಿ, ಬಿ.ವೈ. ಹೆಬ್ಟಾಳ, ಎ.ಎಸ್. ಕೌಜಲಗಿ, ಎ.ಬಿ. ಬಾಗೋಜಿ, ಎಲ್.ಬಿ. ವಡೇರ, ಪಿ.ಎಸ್. ಮಲ್ಲಾಪೂರ, ಆರ್.ಬಿ. ಕುಳ್ಳೂರ, ಎಸ್.ಎಲ್. ಪಾಟೀಲ, ವೈ.ಎಸ್. ಖಾನಟ್ಟಿ, ರಾಮನಗೌಡ ನಾಡಗೌಡರ ಮತ್ತು ಹಿರಿಯ ನ್ಯಾಯವಾದಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.