![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 5, 2021, 5:28 PM IST
ಸಾಂಬ್ರಾ: ಜೀವನದಲ್ಲಿ ಪ್ರತಿಯೊಂದು ವಿಚಾರಗಳು ಕಾನೂನು ಮತ್ತು ನಿಯಮಗಳಿಗೆ ಒಳಪಟ್ಟಿರುತ್ತದೆ. ಹಾಗಾಗಿ ಸರಿಯಾಗಿ ಕಾನೂನು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಬೆಳಗಾವಿ ಸಿವಿಲ್ ಹಾಗೂ ಜೆಎಂಎಪ್‌ಸಿ ನ್ಯಾಯಾಧೀಶರಾದ ಸುಮನ ಚಿತ್ತರಗಿ ಹೇಳಿದರು. ಅವರು ಬಾಳೆಕುಂದ್ರಿ ಖುರ್ದ ಗ್ರಾಮದ ಶ್ರೀ ಶಿದ್ದಲಿಂಗೇಶ್ವರ ಮಠದ ಶಾಲೆಯಲ್ಲಿ ಗ್ರಾ.ಪಂ ಬಾಳೆಕುಂದ್ರಿ ಮತ್ತು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ, ಮಾನವ ಹಕ್ಕುಗಳ ಹಿತರಕ್ಷಣಾ ಮಂಡಳ ಮತ್ತು ನ್ಯಾಯವಾದಿಗಳ ಸಂಘಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿಲಾಗಿದ್ದ ರಾಷ್ಟ್ರೀಯ ಕಾನೂನು ಸಾಕ್ಷರತಾ ಅಭಿಯಾನವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಬದ್ಧವಾಗಿ ಎಲ್ಲರೂ ಸರ್ವ ಸಮಾನರು. ಸಂವಿಧಾನಬದ್ಧವಾಗಿರುವ ಹಕ್ಕುಗಳನ್ನು ಅನುಭವಿಸುವ ನಾವು, ಕರ್ತವ್ಯಗಳನ್ನೂ ತಪ್ಪದೇ ಪಾಲನೆ ಮಾಡಬೇಕೆಂದರು. ಅಭಿಯಾನದಲ್ಲಿ ಜನನ ಮತ್ತು ಮರಣ, ಐಎಂವಿ, ಆಸ್ತಿ ಹಕ್ಕು, ಜೀವನಾಂಶ, ಮಾಹಿತಿ ಹಕ್ಕು ಅಧಿನಿಯಮ, ಮೂಲಭೂತ ಹಕ್ಕುಗಳು, ನೋಂದಣಿ ಕಾಯ್ದೆ, ಅಳತೆ-ಗಡಿ ಗುರುತಿನ ಕಾಯ್ದೆ, ಮಹಿಳಾ ಶೋಷಣೆ, ಮಕ್ಕಳ ಹಕ್ಕುಗಳ ರಕ್ಷಣೆ, ಫೋಕ್ಸೊ, ಪೊಲೀಸ್ ಕಾಯ್ದೆ ಸೇರಿದಂತೆ ವಿವಿಧ ಸಾಮಾನ್ಯ ಕಾನೂನುಗಳ ಬಗ್ಗೆ ತಿಳಿಸಿಕೊಡಲಾಗುತ್ತಿದೆ ಎಂದರು.
ನ್ಯಾಯವಾದಿ ಜ್ಯೋತಿ ಹಂಚಾಟೆ ಮಹಿಳೆಯರ ಮೇಲೆ ಆಗುತ್ತಿರುವ ಹಿಂಸೆ, ದೌರ್ಜನ್ಯ, ಬಲಾತ್ಕಾರ, ಹೆಣ್ಣುಮಕ್ಕಳ ಅನೈತಿಕ ಸಾಗಾಣಿಕೆ, ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಹಿತರಕ್ಷಣಾ ಮಂಡಲದ ಜಿಲ್ಲಾಧ್ಯಕ್ಷ ಗುರುನಾಥ್ ಬೋರಿ ಮತ್ತು ನ್ಯಾಯವಾದಿ ಡಾ| ರವೀಂದ್ರ ತೋಟಗೇರ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷೆ ರೇಣುಕಾ ಕರವಿನಕೊಪ್ಪ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಪದ್ಮಾ ಕೋಲಾ. ಪಿಡಿಒ ಪ್ರಕಾಶ ಕುಡಚಿ, ಕಾರ್ಯದರ್ಶಿ ಪ್ರಕಾಶ ಇಂಗಳೆ, ಗ್ರಾಪಂ.ಸದಸ್ಯ ಯುವರಾಜ ಜಾಧವ, ಪ್ರವೀಣ್ ಮುರಾರಿ, ಉದಯ ಭಾಗಣ್ಣವರ, ಹಣಮಂತ ಹಣ್ಣಿಕೇರಿ, ಅಂಜನಾ ಬೆಳಗಾವಂಕರ, ಕಮಲವ್ವಾ ನಾಯಕ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆರು ಪಾಲ್ಗೊಂಡಿದ್ದರು.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.