Karnataka ಅಂತರ್ಜಲ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್ ಅಂಗೀಕಾರ
Team Udayavani, Dec 17, 2024, 11:52 PM IST
ಬೆಳಗಾವಿ: ವಿಧಾನಸಭೆಯಿಂದ ಅಂಗೀಕೃತವಾದ ಕರ್ನಾಟಕ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಮಯ ಹಾಗೂ ನಿಯಂತ್ರಣ ತಿದ್ದುಪಡಿ ವಿಧೇಯಕಕ್ಕೆ ವಿಧಾನಪರಿಷತ್ತಿನಲ್ಲಿ ಅಂಗೀಕಾರ ನೀಡಲಾಯಿತು.
ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ವಿಧೇಯಕ ಮಂಡಿಸಿದರು. ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸದಸ್ಯರಾದ ಗೋವಿಂದರಾಜ್, ಡಾ| ಧನಂಜಯ ಸರ್ಜಿ, ನವೀನ್, ಸಿ.ಟಿ. ರವಿ, ರವಿಕುಮಾರ, ಐವನ್ ಡಿ’ಸೋಜಾ, ಉಮಾಶ್ರೀ ಇನ್ನಿತರರು ಮಾತನಾಡಿ, ವಿಫಲ ಕೊಳವೆ ಬಾವಿಯಿಂದ ಅನಾಹುತವಾದರೆ ದಂಡ, ಶಿಕ್ಷೆಗೆ ರೈತರು ಹಾಗೂ ಭೂ ಮಾಲಕನನ್ನು ಹೊಣೆಯಾಗಿಸುವುದು ಬೇಡ, ಏಜೆನ್ಸಿಯವರನ್ನೇ ಹೊಣೆಯಾಗಿಸಿ, ಕೊಳವೆಬಾವಿ ಕೊರೆಸಲು ಸ್ಥಳೀಯ ಸಂಸ್ಥೆಯಿಂದ ಪರವಾನಿಗೆ ಕಡ್ಡಾಯ ಹಾಗೂ ಷರತ್ತು ವಿಧಿಸಬಾರದು ಎಂದು ಆಗ್ರಹಿಸಿದರು.
ತುಳಸಿ ಗೌಡ ನಿಧನಕ್ಕೆ ಉಭಯ ಸದನ ಸಂತಾಪ
ಬೆಳಗಾವಿ: ವೃಕ್ಷಮಾತೆ ತುಳಸಿ ಗೌಡ ನಿಧನಕ್ಕೆ ಮಂಗಳವಾರ ಉಭಯ ಸದನಗಳು ಕಂಬನಿ ಮಿಡಿದವು. 81 ವರ್ಷದ ಅವರು ಜೀವನದುದ್ದಕ್ಕೂ ಲಕ್ಷಾಂತರ ಮರಗಳನ್ನು ಬೆಳೆಸಿ, ಪೋಷಣೆ ಮಾಡುವ ಮೂಲಕ “ವೃಕ್ಷಮಾತೆ’ ಎಂದೇ ಕರೆಯಲ್ಪಡುತ್ತಿದ್ದರು. ತುಳಸಿ “ಅರಣ್ಯದ ವಿಶ್ವಕೋಶ’ ಎಂದೇ ಜನಿತರಾಗಿ ದ್ದರು ಎಂದು ವಿಧಾನಸಭೆಯಲ್ಲಿ ಸ್ಪೀಕರ್ ಖಾದರ್ ಮತ್ತು ಪರಿಷತ್ತಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಸ್ಮರಿಸಿದರು.
ಅಂತ್ಯಕ್ರಿಯೆ
ಅಂಕೋಲಾ: ವೃಕ್ಷಮಾತೆ ತುಳಸಿ ಗೌಡ ಅಂತ್ಯಕ್ರಿಯೆ ಮಂಗಳವಾರ ಸಕಲ ಸರಕಾರಿ ಗೌರವಗಳೊಂದಿಗೆ ಹುಟ್ಟೂರು ಹೊನ್ನಳ್ಳಿ ಯಲ್ಲಿ ನೆರವೇರಿತು.
ಪ್ರಕೃತಿ ಸಂರಕ್ಷಣೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದ ತುಳಸಿ ಗೌಡ ಅವರು, ಸಾವಿರಾರು ಸಸಿಗಳನ್ನು ನೆಟ್ಟು ಬೆಳೆಸಿ ನಮ್ಮ ಪರಿಸರವನ್ನು ಸಂರಕ್ಷಿಸಿದ್ದಾರೆ. ಅವರ ಕಾರ್ಯಗಳು ತಲೆಮಾರುಗಳಿಗೆ ದಾರಿದೀಪವಾಗಿರಲಿದೆ.
-ನರೇಂದ್ರ ಮೋದಿ, ಪ್ರಧಾನಮಂತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.