![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Mar 24, 2022, 5:40 PM IST
ಬೆಳಗಾವಿ: ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿರಿಸಿದ ಭಗತ್ ಸಿಂಗ್ ಒಬ್ಬ ಮಹಾನ್ ದೇಶಭಕ್ತ ಹಾಗೂ ಕ್ರಾಂತಿಕಾರಿ. ಅವರಂತಹ ಮಹಾನ್ ದೇಶಭಕ್ತ ಭಾರತದ ಪ್ರತಿ ಮನೆ ಮನೆಗಳಲ್ಲಿ ಜನಿಸಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಪ್ರಮುಖ ಪ್ರೊ. ಕೇಶವ ಬಂಗೇರ ಹೇಳಿದರು.
ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಬುಧವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಮನೆಗಳಲ್ಲಿ ಭಗತ್ ಸಿಂಗ್ ಅವರಂತಹ ದೇಶ ಪ್ರೇಮಿ ಜನಿಸಬೇಕು. ಭಗತ್ ಸಿಂಗ್ ಮಹಾನ್ ದೇಶಪ್ರೇಮಿ. ಅವರ ಚಿಂತನೆ ಬಿತ್ತುವ ಕಾರ್ಯ ಆಗಬೇಕು. ದೇಶ ಸ್ವಾತಂತ್ರ್ಯಗಳಿಸುವ ನಿಟ್ಟಿನಲ್ಲಿ ಭಗತ್ ಸಿಂಗ್ ಅವರ ಆತ್ಮಾರ್ಪಣೆ ಮೆಲುಕು ಹಾಕುವಂಥದ್ದು. ದೇಶದ ರಾಷ್ಟ್ರೀಯ ಸಂಘರ್ಷದ ಕಾಲಘಟ್ಟದಲ್ಲಿ ಅವರೊಬ್ಬರು ಹೊಸ ಯುಗವೊಂದರ ಪ್ರವರ್ತಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ 73 ವರ್ಷಗಳಿಂದ ಎಬಿವಿಪಿ ವಿದ್ಯಾರ್ಥಿ ಬಂಧುಗಳಲ್ಲಿ ದೇಶಪ್ರೇಮ ಹಾಗೂ ಭಗತ್ ಸಿಂಗ್ ಅವರಂತಹ ದೇಶಪ್ರೇಮಿಗಳ ವಿಚಾರಗಳನ್ನು ಬಿತ್ತುವ ಕೆಲಸವನ್ನು ಮಾಡುತ್ತಿದೆ ಎಂದರು.
ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಚಿಂತನೆಗಳನ್ನು ತುಂಬಬೇಕು. ಯುವಕರನ್ನು ರಾಷ್ಟ್ರೀಯ ಮುಖ್ಯ ವಾಹಿನಿಗಳಲ್ಲಿ ತೆಗೆದುಕೊಂಡು ಹೋಗುವ
ದಿಸೆಯಲ್ಲಿ ವಿದ್ಯಾರ್ಥಿ ಪರಿಷತ್ತು ಕೆಲಸ ಮಾಡುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಭಗತ್ ಸಿಂಗ್ ಅವರಂತಹ ವೀರರು ಗಲ್ಲಿಗೆ ಏರಲು ಹಿಂದೇಟು
ಹಾಕಿದವರಲ್ಲ. ಗಲ್ಲಿಗೇರುವ ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬ್ರಿಟಿಷ್ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದರು. ದೇಶಪ್ರೇಮದ
ಸ್ಫೂರ್ತಿಯ ಸೆಲೆ ಅವರಾಗಿದ್ದರು. ಅವರಂತಹ ಮಹಾನ್ ದೇಶಪ್ರೇಮಿ ಇಂದಿನ ಸಂದರ್ಭದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಜನಿಸುವ ಅಗತ್ಯ ಇದೆ ಎಂದರು.
ಎಬಿವಿಪಿ ಬೆಳಗಾವಿ ನಗರ ಘಟಕ ಅಧ್ಯಕ್ಷ ಡಾ. ಎಸ್.ವಿ. ಗೋರಬಾಳ, ಸಂಘಟನಾ ಜಂಟಿ ಕಾರ್ಯದರ್ಶಿ ಪ್ರಥ್ವಿ ಕುಮಾರ್, ಭರತೇಶ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಆನಂದ ಹೊಸೂರ್, ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಜಂಟಿ ಕಾರ್ಯದರ್ಶಿ ರೋಹಿತ್ ಉಮನಾಬಾದಿಮಠ,
ನಗರ ಕಾರ್ಯದರ್ಶಿ ಕೃಷ್ಣಕುಮಾರ್ ಜೋಶಿ, ಮಲ್ಲಿಕಾರ್ಜುನ ಪೂಜಾರಿ ಸೇರಿದಂತೆ ಇತರರು ಇದ್ದರು.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
You seem to have an Ad Blocker on.
To continue reading, please turn it off or whitelist Udayavani.