ಪುರಾಣ ಕೇಳಿದರೆ ಜೀವನ ಪಾವನ: ಗಿರಿಮಲ್ಲ ಬೆಳ್ಳುಂಡಗಿ
ಪ್ರಚಾರದ ಮೋಹ ಬಿಟ್ಟು ದೈವಿಕ ಪ್ರಜ್ಞೆ ಮೂಡಿಸಿಕೊಳ್ಳುವ ಕೆಲಸ ಸಮಾಜದಲ್ಲಿ ಆಗಬೇಕಿದೆ
Team Udayavani, Aug 12, 2024, 4:59 PM IST
■ ಉದಯವಾಣಿ ಸಮಾಚಾರ
ತೆಲಸಂಗ: ಪುರಾಣ-ಪುಣ್ಯಕಥೆಗಳ ಶ್ರವಣದಿಂದ ಜೀವನ ಪಾವನವಾಗುತ್ತದೆ ಎಂದು ಸಿರಡೋಣದ ಡೊಳ್ಳಿನ ಹಾಡುಗಳ ಹಿರಿಯ ನಿರ್ದೇಶಕ ಗಿರಿಮಲ್ಲ ಬೆಳ್ಳುಂಡಗಿ ಹೇಳಿದರು. ಕನ್ನಾಳ ಗ್ರಾಮದ ಸಿದ್ಧರಾಮೇಶ್ವರ ದೇವಸ್ಥಾನದ ವನದಲ್ಲಿ ನಡೆದ 38ನೇ ಸತ್ಸಂಗ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುರಾಣ ಶ್ರವಣ ಕಾರ್ಯಕ್ರಮ, ಸತ್ಸಂಗ, ಸತ್ಸಂಪ್ರದಾಯದಿಂದ ಜೀವನ ಪಾವನಗೊಂಡು ಶಾಂತಿ ನೆಲೆಸಿದೆ. ಮನುಷ್ಯ ಹೊಟ್ಟೆ ಹಸಿವು ಹೇಗಾದರೂ ಹೋಗಲಾಡಿಸಬಲ್ಲ. ಆದರೆ ಜ್ಞಾನದ ಹಸಿವನ್ನು ಸತ್ಸಂಗದಿಂದ ಮಾತ್ರ ನೀಗಿಸಿಕೊಳ್ಳಲು ಸಾಧ್ಯ. ಸತ್ಸಂಗದ ಮೂಲಕ ದೊರಕಿದ ನಿಶ್ಚಲವಾದ ಭಕ್ತಿ ಮೂಲಕ ಜೀವನದಲ್ಲಿ ಮುಕ್ತಿ ಕಾಣಬಹುದಲ್ಲದೇ ಪುಣ್ಯ ಪ್ರಾಪ್ತಿ ಪಡೆದು ಸಾರ್ಥಕ ಬದುಕು ನಡೆಸಬಹುದು ಎಂದರು.
ನಿವೃತ್ತ ಶಿಕ್ಷಕ ಬಿ.ಜಿ. ಸಾರ್ವಾಡ ಮಾತನಾಡಿ, ಇಂದಿನ ದಿನಗಳಲ್ಲಿ ಮನೆಯಿಂದಲೇ ಸಂಸ್ಕಾರ ನೀಡುವ ಕಾರ್ಯ ನಡೆಯಬೇಕು. ಸಾಮಾಜಿಕವಾಗಿ ಇಂದು ಮನೆ-ಮನಸ್ಸು ಒಂದಾಗಿಸುವ ಕೆಲಸ ನಡೆಯಬೇಕು ಎಂದರು.
ನಿವೃತ್ತ ಶಿಕ್ಷಕ ಬಿ.ಎನ್. ಅವಟಿ ಮಾತನಾಡಿ, ಚಂಚಲ ಮನಸ್ಸಿಗೆ ಬುದ್ಧಿ ನೀಡಿ ಎಚ್ಚರಿಸುತ್ತ ಕರ್ತವ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಚಂಚಲ ಮನಸ್ಸಿನ ಕಡಿವಾಣಕ್ಕೆ ಸಂಸ್ಕಾರ ಬೇಕು. ಪ್ರಚಾರದ ಮೋಹ ಬಿಟ್ಟು ದೈವಿಕ ಪ್ರಜ್ಞೆ ಮೂಡಿಸಿಕೊಳ್ಳುವ ಕೆಲಸ ಸಮಾಜದಲ್ಲಿ ಆಗಬೇಕಿದೆ ಎಂದರು.
ಕನ್ನಾಳದ ಬಸವಲಿಂಗ ಸ್ವಾಮೀಜಿ, ಹಿರಿಯರಾದ ನಾನಾಗೌಡ ಪಾಟೀಲ, ಯಂಕಣ್ಣಾ ಅಸ್ಕಿ, ಧರೆಪ್ಪಾ ದಳವಾಯಿ, ಶೇಖರ ವಳಸಂಗ ಸೇರಿದಂತೆ ಇತರರಿದ್ದರು. ಶ್ರೀಶೈಲ ಇಸರಗೊಂಡ ನಿರೂಪಿಸಿದರು. ಸಂಜೀವ ಅಸ್ಕಿ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.