![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 17, 2022, 1:30 PM IST
ಬೆಳಗಾವಿ: ಶರೀರ ಹೋಗುವ ಮುನ್ನ ದಾನ-ಧರ್ಮ, ಪರೋಪಕಾರ ಮಾಡಬೇಕು. ಆಗ ಸಾರ್ಥಕ ಬದುಕು ಸಾಧ್ಯವಾಗುತ್ತದೆ ಎಂದು ಹಿರೇಮುನವಳ್ಳಿಯ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಕಲ್ಮೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಬಜಾರ ಗಲ್ಲಿಯಲ್ಲಿ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶ್ರದ್ಧೆಯಿಂದ ದುಡಿಯುವುದರಿಂದ, ಸೇವೆ ಮಾಡುವುದರಿಂದ ಬದುಕು ಉಜ್ವಲವಾಗುತ್ತದೆ. ಭಕ್ತಿ ಎನ್ನುವ ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಇತರರಿಗೆ ಕೇಡು ಬಯಸುವ ಬದಲು ಸೇವಾ ಮನೋಭಾವ ಇದ್ದರೆ ಭಗವಂತ ಮೆಚ್ಚಿಕೊಳ್ಳುತ್ತಾನೆ ಎಂದರು.
ಗುರುವಿಗೆ ಗೌರವ ಕೊಡುವುದನ್ನು ಕಲಿಯಬೇಕು. ಗುರುವಿಗೆ ದೊಡ್ಡ ಸ್ಥಾನ ಇದೆ. ಇದನ್ನು ಯಾರೂ ಮರೆಯಬಾರದು. ಶರೀರದಲ್ಲಿ ಆತ್ಮ ಇರೋವರೆಗೆ ಬೆಲೆ ಇದೆ. ಅದು ಹೋದ ಮೇಲೆ ಬೆಲೆ ಇರುವುದಿಲ್ಲ. ಗುರುವಿನ, ತಂದೆ-ತಾಯಿಯ ಸೇವೆ ಮಾಡಿ ಪುಣ್ಯದ ಬುತ್ತಿ ಹೆಚ್ಚಿಸಿಕೊಳ್ಳಬೇಕು ಎಂದು ಶ್ರೀಗಳು ನುಡಿದರು.
ತಾರೀಹಾಳ ಅಡವಿಸಿದ್ದೇಶ್ವರ ಮಠದ ಶ್ರೀ ಅಡಿವೇಶ್ವರ ದೇವರು ಮಾತನಾಡಿ, ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಿದರೆ ಉಜ್ವಲ ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಿದೆ. ಮಕ್ಕಳನ್ನು ಪರಿವರ್ತನೆ ಮಾಡಬೇಕಿದೆ. ಮನುಷ್ಯನ ಸಂಸ್ಕಾರ ರಹಿತ ದೇಹಕ್ಕೆ ಬೆಲ ಇಲ್ಲ. ಸಂಸ್ಕಾರ ಮುಖ್ಯವಾಗಿದ್ದು, ಸಂಸ್ಕಾರಯುತವಾಗಿ ಬದುಕಿ ಮನಸ್ಸು ಕಟ್ಟುವ ಕೆಲಸ ಮಾಡಬೇಕು. ಆಸೆ-ಆಮಿಷಗಳನ್ನು ತೊರೆದು ಜೀವನ ಸಾಗಿಸಬೇಕು ಎಂದು ಹೇಳಿದರು.
ಶುದ್ಧ ಮನಸ್ಸು ಇಲ್ಲದವರು ತಾರತಮ್ಯ, ಭೇದಭಾವ ಮಾಡುತ್ತಾರೆ. ಬದುಕಿನಲ್ಲಿ ಒಳ್ಳೆಯದನ್ನು ಅಳವಡಿಸಿಕೊಳ್ಳಬೇಕು. ಭಾರತೀಯ ಸಂಸ್ಕೃತಿಯಲ್ಲಿ ವಿಜ್ಞಾನ ಇದೆ. ಪ್ರತಿಯೊಂದ ಪದ್ಧತಿ, ಸಂಪ್ರದಾಯಗಳಲ್ಲಿ ವಿಜ್ಞಾನ ಅಡಗಿದೆ ಎಂದರು.
ಶ್ರೀ ಶ್ರೀಶೈಲ ಹಿರೇಮಠ ಸ್ವಾಮೀಜಿ ಮಾತನಾಡಿ, ಹಿಂದೆ ಗುರು, ಮುಂದೆ ಗುರಿ ಇದ್ದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ. ಬದುಕಿನ ಬಂಡಿ ಸಾಗಬೇಕಾದರೆ ಏನಾದರೂ ಗುರಿ ಇಟ್ಟುಕೊಳ್ಳಬೇಕು. ಜೀವನದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಜನ ಸೇವೆಗೆ ಬದ್ಧರಾಗಬೇಕು. ಆಗ ನಾವು ಮಾಡಿರುವ ಸೇವೆಯನ್ನು ಭಗವಂತ ಒಪ್ಪಿಕೊಳ್ಳುತ್ತಾನೆ ಎಂದರು.
ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ದೇವಣ್ಣ ಬಂಗೇನ್ನವರ, ಶ್ರೀ ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಸನಗೌಡ ಹುಂಕರಿಪಾಟೀಲ, ಗ್ರಾಪಂ ಅಧ್ಯಕ್ಷ ಮಹೇಶ ಸುಗಣೇನ್ನವರ, ಶ್ರೀ ಗುರುಕುಮಾರೇಶ್ವರ ಜ್ಯೋತಿಷ್ಯಾಲಯದ ವೇದಮೂರ್ತಿ ಗುರುಸಿದ್ದಯ್ಯ ಹಿರೇಮಠ, ಉದಯವಾಣಿ ವರದಿಗಾರ ಭೈರೋಬಾ ಕಾಂಬಳೆ ಇದ್ದರು. ವಿಶ್ವನಾಥ ಹೆಬ್ಬಳ್ಳಿ ನಿರೂಪಿಸಿದರು.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.