ಕೃಷ್ಣೆ ತಟದ ದೇವದೂತರು


Team Udayavani, Aug 27, 2019, 11:39 AM IST

BG-TDY-2

ಚಿಕ್ಕೋಡಿ: ಅದು ಅಂತಿಂಥ ಪ್ರವಾಹವಲ್ಲ. ಅತಿ ಭಯಂಕರ ನೆರೆ. ಮಳೆಯೂ ಸಾಮಾನ್ಯವಾದುದಲ್ಲ. ರಾತೋರಾತ್ರಿ ಜನರಿಗೆ ತಾವಿದ್ದ ಮನೆಯೇ ನಡುಗಡ್ಡೆಯಾಗಿ ಜೀವವೇ ಬಾಯಿಗೆ ಬಂದ ಅನುಭವ. ಅಂಥ ಸಮಯದಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೇ ಅಂದಾಜು 7 ಸಾವಿರ ಜನರನ್ನು ರಕ್ಷಿಸಿದ ದೇವದೂತರಿವರು.

ಭೀಕರ ಪ್ರವಾಹದಲ್ಲಿ ಸಿಲುಕಿ ಜೀವ ರಕ್ಷಣೆಗೆ ಪರದಾಡುತ್ತಿದ್ದ ಸಾವಿರಾರು ಜನರನ್ನು ರಕ್ಷಣೆ ಮಾಡಿ ದಡಕ್ಕೆ ಸೇರಿಸಿದ ನಾಲ್ವರು ನಾವಿಕರು ನದಿ ತೀರದ ಸಂತ್ರಸ್ತರ ಪಾಲಿಗೆ ದೇವರಂತಾಗಿದ್ದಾರೆ. ಅವರನ್ನು ಸ್ಮರಿಸಿ ಮನದಲ್ಲಿಯೇ ಧನ್ಯವಾದ ಅರ್ಪಿಸುತ್ತಿದ್ದಾರೆ. ಇಂಗಳಿ ಗ್ರಾಮದ ರಾಜು ಅಪ್ಪಾಸಾಹೇಬ ಪನದೆ, ಗಜಾನನ ಭೋವಿ, ನೆರೆಯ ಮಹಾರಾಷ್ಟ್ರದ ಗಣೇಶವಾಡಿ ಗ್ರಾಮದ ಸದಾಶಿವ ಅಂಬಿ, ಅಲಾಸ ಗ್ರಾಮದ ಧೂಳಪ್ಪ ಅಂಬಿ ಇವರೇ ಆ ದೇವದೂತರು. ಸರ್ಕಾರದ ಎನ್‌ಡಿಆರ್‌ಎಫ್‌ ಹಾಗೂ ವಿವಿಧ ರಕ್ಷಣಾ ತಂಡಗಳು ಬರುವ ಮುನ್ನವೇ ಈ ದೋಣಿ ನಾವಿಕರು ಆರು ಸಾವಿರ ಜನರ ಜನರಿಗೆ ಜೀವದಾನ ನೀಡುವ ಕಾರ್ಯ ಇವರ ಕೈಯಿಂದ ಆಗಿದೆ. 2019ರ ಮಹಾ ಪ್ರವಾಹದಲ್ಲಿ ಇವರ ಕಾರ್ಯ ಅಮೂಲ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು.

ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ರಾಜು ಅಪ್ಪಾಸಾಹೇಬ ಪನದೆ ಮತ್ತು ಗಜಾನನ ಲಕ್ಷ್ಮಣ ಭೋವಿ ಇವರು ದೋಣಿ ಮೂಲಕ ಇಂಗಳಿ ಗ್ರಾಮದ 700 ಜನ ಹಾಗೂ ಅಥಣಿ ತಾಲೂಕಿನ ಮಳವಾಡ ಗ್ರಾಮದ 100 ಜನ ಮತ್ತು ಒಂದು ಜಾನುವಾರು ರಕ್ಷಣೆ ಮಾಡಿದ್ದಾರೆ.

ನೆರೆಯ ಮಹಾರಾಷ್ಟ್ರದ ಶಿರೋಳ ತಾಲೂಕಿನ ಗಣೇಶವಾಡಿ ಗ್ರಾಮದ ಸದಾಶಿವ ಅಂಬಿ ಹಾಗೂ ಅಲಾಸ ಗ್ರಾಮದ ಧೂಳಪ್ಪ ಅಂಬಿ ಇವರು ದೋಣಿ ಮೂಲಕ 6 ಸಾವಿರಕ್ಕಿಂತ ಹೆಚ್ಚಿನ ಜನರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ತಂದು ಬಿಟ್ಟಿದ್ದಾರೆ. ಕೃಷ್ಣಾ ನದಿ ತೀರದ ಎಲ್ಲ ಕಡೆಗಳಲ್ಲಿ ಈ ನಾಲ್ಕು ಜನ ದೋಣಿ ನಾವಿಕರ ಮಾನವೀಯತೆ ಬಗ್ಗೆ ಎಲ್ಲ ಕಡೆಗಳಿಂದ ಪ್ರಶಂಸೆಯ ಮಾತುಗಳು ವ್ಯಕ್ತವಾಗುತ್ತಿದೆ.

ಮಹಾರಾಷ್ಟ್ರದ ಗಣೇಶವಾಡಿಯಲ್ಲಿ ಗಾವಭಾಗ ಸಂಪೂರ್ಣ ಮುಳುಗಡೆಯಾಗಿತ್ತು. ಇಲ್ಲಿಯ 1840 ನಾಗರಿಕರು ಹಾಗೂ 22 ಜಾನುವಾರುಗಳನ್ನು ಅವರು ಸುರಕ್ಷಿತವಾಗಿ ದೋಣಿಯಿಂದ ಹೊರ ತೆಗೆದಿದ್ದಾರೆ. ಅದೇ ರೀತಿ ಬಣವಾಡಿಯ 14 ಜನರು, ಕವಟೆಗೂಲಂದ ಗ್ರಾಮದ 216 ಜನರು ಒಂದು ಆಕಳು, ಶೇಡಶ್ಯಾಳ ಗ್ರಾಮದ 8 ಜನರು ಈ ರೀತಿ ಒಟ್ಟು 2,064 ಜನರನ್ನು ರಕ್ಷಣೆ ಮಾಡಿದ್ದಾರೆ.

ಅದರಂತೆ ಅಲಾಸ ಎಂಬ ಗ್ರಾಮ ನಡುಗಡ್ಡೆಯಾಗಿತ್ತು. ಈ ಗ್ರಾಮದ ಸಂಖ್ಯೆ 8 ಸಾವಿರಕ್ಕಿಂತ ಹೆಚ್ಚಿದ್ದು, ಪ್ರವಾಹ ಬರುವ ಮುಂಚೆ 3500 ಹೆಚ್ಚು ಜನರು ಸುರಕ್ಷಿತ ಸ್ಥಳಗಳಿಗೆ ಹೋಗಿದ್ದರು. ಆದರೆ ತನ್ನ ಜಾನುವಾರುಗಳನ್ನು ಕಾಪಾಡಲು ಹೋಗಿದ್ದ ಸಂದರ್ಭದಲ್ಲಿ ನಾಲ್ಕೂವರೆ ಸಾವಿರ ಜನರು ನೀರಿನಲ್ಲಿ ಸಿಲುಕಿಕೊಂಡು ಪ್ರಾಣ ರಕ್ಷಣೆಗೆ ಸಹಾಯ ಹಸ್ತ ಚಾಚಿ ಕುಳಿತಿದ್ದರು. ಇದನ್ನು ಮನಗಂಡ ಧೂಳಪ್ಪ ಅಂಬಿ ಗ್ರಾಮದ ರಾಜು ಪಾಟೀಲ, ಸದಾತ ಪಠಾಣ ಕಾಶಿಮ್‌ ಕಲಾವಂತ ದಾದಾಪೀರ ಸಾಹೇಬವಾಲೆ ನೆರವಿನಿಂದ ಅಲಾಸದ 4200 ಗ್ರಾಮಸ್ಥರನ್ನು ರಕ್ಷಿಸುವ ಕಾರ್ಯ ಮಾಡಿದರು.

ಧೂಳಪ್ಪ ಅಂಬಿ ಕೃಷ್ಣಾ ನದಿಯ ಅಲಾಸ-ಅಕ್ಕಿವಾಟ ಗ್ರಾಮಗಳ ನಡುವೆ ದೋಣಿ ನಡೆಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ವಿಚಿತ್ರವೆಂದರೆ ಧೂಳಪ್ಪಗೆ ಈಜು ಬಾರದು. ನಾಲ್ಕು ತಿಂಗಳ ಹಿಂದೆ ಅಲಾಸದಲ್ಲಿ ಜಿಲ್ಲಾ ಪರಿಷತ್‌ದಿಂದ ಹೊಸ ದೋಣಿ ಇವರಿಗೆ ಸಿಕ್ಕಿದೆ. ಇದರಿಂದ ಪ್ರವಾಹದಲ್ಲಿ ಸುಮಾರು 4200 ಜನರ ರಕ್ಷಣೆ ಮಾಡಿದ್ದಾರೆ. ಇವರು ಮಾಡಿರುವ ಕಾರ್ಯವನ್ನು ನೋಡಿ ಶಿವಸೇನೆ ಯುವ ನೇತಾರ ಆದಿತ್ಯ ಠಾಕರೆ ಕುರಂದವಾಡದಲ್ಲಿ ಅವರನ್ನು ಸನ್ಮಾನಿಸಿ ಒಂದು ಲಕ್ಷ ರೂ. ಆರ್ಥಿಕ ಸಹಾಯ ಮಾಡಿದ್ದಾರೆ.

ಇಂತಹ ಭೀಕರ ಪ್ರವಾಹದಲ್ಲಿ ತನ್ನ ಪ್ರಾಣವನ್ನೇ ಲೆಕ್ಕಿಸದೇ ಬೇರೆಯವರ ಸಾವಿರಾರು ಜೀವ ಉಳಿಸಿದ ದೋಣಿ ನಾವಿಕರ ಕಾರ್ಯವನ್ನು ಗುರ್ತಿಸಲು ಸರಕಾರ ಮುಂದೆ ಬರಬೇಕು.

 

•ಮಹಾದೇವ ಪೂಜೇರಿ

ಟಾಪ್ ನ್ಯೂಸ್

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

1-ani

Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: Child trafficking network found; child rescued

Belagavi: ಮಕ್ಕಳ ಮಾರಾಟ ಜಾಲ ಪತ್ತೆ; ಮಗುವಿನ ರಕ್ಷಣೆ

School bag

ಜ.21 ರಂದು ಬೆಳಗಾವಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

Belagavi: ಪ್ರಭಾಕರ ಕೋರೆಯವರನ್ನು ಕಾಂಗ್ರೆಸ್ ಗೆ ಕರೆದಿಲ್ಲ: ಡಿಕೆ ಶಿವಕುಮಾರ್‌ ಸ್ಪಷ್ಟನೆ

Belagavi: ಪ್ರಭಾಕರ ಕೋರೆಯವರನ್ನು ಕಾಂಗ್ರೆಸ್ ಗೆ ಕರೆದಿಲ್ಲ: ಡಿಕೆ ಶಿವಕುಮಾರ್‌ ಸ್ಪಷ್ಟನೆ

Tourism: 800 ಅಡಿ ಎತ್ತರದ ಬೆಟ್ಟದಲ್ಲಿ ಭವ್ಯ ಇತಿಹಾಸ ಸಾರುವ ಗಜೇಂದ್ರಗಡ ಕೋಟೆ

Tourism: 800 ಅಡಿ ಎತ್ತರದ ಬೆಟ್ಟದಲ್ಲಿ ಭವ್ಯ ಇತಿಹಾಸ ಸಾರುವ ಗಜೇಂದ್ರಗಡ ಕೋಟೆ

ಬೆಳಗಾವಿಯ ಹಿಡಕಲ್‌ನಲ್ಲಿ ರಾಜ್ಯದ ಮೊದಲ ಡೋಮ್‌ ಮಾದರಿ ಪಕ್ಷಿಧಾಮ

Tourism: ಬೆಳಗಾವಿಯ ಹಿಡಕಲ್‌ನಲ್ಲಿ ರಾಜ್ಯದ ಮೊದಲ ಡೋಮ್‌ ಮಾದರಿ ಪಕ್ಷಿಧಾಮ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

crime

Padubidri: ಸ್ಕೂಟಿಗೆ ಈಚರ್‌ ವಾಹನ ಢಿಕ್ಕಿ; ಸವಾರನಿಗೆ ಗಾಯ

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.