ಕಲ್ಲು ಕೆತ್ತನೆಗಾರರಿಗೆ ಕೊರೊನಾ ಕಲ್ಲೇಟು
ಲಾಕ್‌ಡೌನ್‌ದಿಂದ ಎರಡು ತಿಂಗಳಿಂದ ವ್ಯಾಪಾರವೇ ಇಲ್ಲ ಒಂದು ಹೊತ್ತಿನ ಊಟಕ್ಕೂ ಪರದಾಟ
Team Udayavani, Jun 9, 2021, 7:33 PM IST
ವರದಿ: ಮಹಾದೇವ ಪೂಜೇರಿ
ಚಿಕ್ಕೋಡಿ: ಕೊರೊನಾ ಲಾಕ್‌ಡೌನ್ ಎಲ್ಲರನ್ನು ಸಂಕಷ್ಟಕ್ಕೆ ದೂಡಿದೆ. ಆದರೆ ಕಲ್ಲು ಕೆತ್ತನೆ ಮೂಲಕ ಜೀವನ ನಡೆಸುವ ಕಲ್ಲು ಕೆತ್ತನೆಗಾರರ ಕುಟುಂಬಗಳ ಜೀವನ ಬೀಸುಕಲ್ಲಿನಲ್ಲಿ ಬೀಸಿದ ಹಿಟ್ಟಿನಂತಾಗಿದೆ. ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿರುವ ಕುಟುಂಬಗಳ ನೆರವಿಗೆ ಸರ್ಕಾರ ಧಾವಿಸಬೇಕಿದೆ.
ಚಿಕ್ಕೋಡಿ ತಾಲೂಕಿನ ಹತ್ತರವಾಟ ಕ್ರಾಸ್ ಬಳಿ ಸಂಕೇಶ್ವರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸುಮಾರು ಎಂಟು ಕುಟುಂಬಗಳು ಕಲ್ಲು ಕೆತ್ತನೆ ಮಾಡಿ ಜೀವನ ನಡೆಸುತ್ತಾ ಬಂದಿವೆ. ಕಳೆದ ಒಂದೂವರೆ ತಿಂಗಳಿಂದ ಲಾಕ್‌ಡೌನ್ ಇರುವುದರಿಂದ ಸಂತಿ-ಪ್ಯಾಟಿ ಇಲ್ಲ, ಜನ ಸಂಚಾರ ಇಲ್ಲವೇ ಇಲ್ಲ, ಹೀಗಾಗಿ ಕೆತ್ತನೆ ಮಾಡಿದ ಕಲ್ಲು ಖರೀದಿಸುವವರೇ ಇಲ್ಲವಾಗಿದ್ದರಿಂದ ಜೀವನ ನಡೆಸಲು ಹರಸಾಹಸ ಪಡುತ್ತಿದ್ದಾರೆ.
ಮೂಲತ: ನಿಪ್ಪಾಣಿ ನಗರದಿಂದ ವಲಸೆ ಬಂದು ಹತ್ತರವಾಟ ಕ್ರಾಸ್ ಬಳಿ ರಸ್ತೆ ಬದಿಯಲ್ಲಿ ಕಳೆದ 15 ವರ್ಷಗಳಿಂದ ಕಲ್ಲು ಕೆತ್ತನೆ ಮೂಲಕ ತುತ್ತಿನ ಚೀಲ ತುಂಬಿಕೊಳ್ಳುತ್ತಿದ್ದರು. ಆದರೆ ಲಾಕಡೌನ್ ಪರಿಣಾಮ ಕಲ್ಲು ಕೆತ್ತನೆಗಾರರ ಹೊಟ್ಟೆ ಮೇಲೆ ಬರೆ ಎಳೆದಂತೆ ಮಾಡಿದೆ. ಕಳೆದ ವರ್ಷ ಎರಡು ತಿಂಗಳ ಲಾಕ್‌ಡೌನ್, ಪ್ರಸಕ್ತ ವರ್ಷವೂ ಲಾಕ್‌ಡೌನ್ ಇರುವುದರಿಂದ ಜೀವನ ನಡೆಸುವುದೇ ದುಸ್ತರವಾಗಿದೆ ಎನ್ನುತ್ತಾರೆ ಕಲ್ಲು ಕೆತ್ತನೆಗಾರರು.
ಎಂಟು ಕುಟುಂಬದ ಸುಮಾರು 20 ಜನರು ಹುಕ್ಕೇರಿ ತಾಲೂಕಿನ ಬೋರಗಲ್ಲ ಗ್ರಾಮದಿಂದ ಕಲ್ಲು ತಂದು ಬೀಸುಕಲ್ಲು, ಒಳಕಲ್ಲು, ಹೂರಣಕಲ್ಲು, ಕಾರಕಲ್ಲು, ರುಬ್ಬು ಕಲ್ಲು ಹೀಗೆ ಹತ್ತು ಹಲವು ಬಗೆ ಕಲ್ಲು ಕೆತ್ತನೆ ಮಾಡಿ ಬೆಳಗಾವಿ, ಚಿಕ್ಕೋಡಿ, ಗೋಕಾಕ, ಮಹಾಲಿಂಗಪೂರ, ಕೊಲ್ಲಾಪೂರ, ಇಚಲಕರಂಜಿ, ಸಾಂಗ್ಲಿ, ಸಂಕೇಶ್ವರ ಹೀಗೆ ಹಲವು ಕಡೆ ಹೋಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದರು.
ಲಾಕ್‌ಡೌನ್‌ದಿಂದ ಎಲ್ಲವೂ ಸ್ಥಗಿತಗೊಂಡಿದೆ. ಪ್ರತಿ ಮಾರ್ಚ, ಎಪ್ರೀಲ್ ಮತ್ತು ಮೇ ತಿಂಗಳಲ್ಲಿ ನಡೆಯುವ ಮದುವೆ ಮುಹೂರ್ತದಲ್ಲಿ ಪ್ರತಿಯೊಂದು ಮದುವೆ ಮನೆಯಲ್ಲಿ ಬೀಸುಕಲ್ಲು, ಒಳಕಲ್ಲು ಪೂಜೆ ಮಾಡುವ ಸಂಪ್ರದಾಯ ಮೊದಲಿನಿಂದಲೂ ಬೆಳೆದು ಬಂದಿದೆ. ಕೊರೊನಾ ಲಾಕಡೌನ ಇರುವುದರಿಂದ ಮದುವೆಗಳು ನಿಂತಹೋಗಿವೆ. ಸದ್ದಿಲ್ಲದೆ ಕೆಲವು ಮದುವೆ ನಡೆದು ಹೋಗಿವೆ. ರಸ್ತೆಯಲ್ಲಿ ಸಂಚರಿಸುವ ಜನರು ವಾಹನ ನಿಲ್ಲಿಸಿ ಕೆತ್ತನೆ ಕಲ್ಲು ಖರೀದಿ ಮಾಡಿಕೊಂಡು ಹೋಗುತ್ತಿದ್ದರು. ಈಗ ಅದೂ ಇಲ್ಲ. ಇದರಿಂದ ನಮ್ಮ ಹೊಟ್ಟೆ ತುಂಬಿಸಿಕೊಳ್ಳುವುದು ಭಾರಿ ಕಷ್ಟವಾಗಿದೆ ಎಂದು ಕಲ್ಲು ಕೆತ್ತನೆಗಾರ ಮಹಿಳೆ ಅಳಲು ವ್ಯಕ್ತಪಡಿಸಿದಳು.
ನೆರವಿಗೆ ಕೈಚಾಚಿದ ಬಡ ಕುಟುಂಬಗಳು: ಕಳೆದ ವರ್ಷ ಬೇಸಿಗೆಯಲ್ಲಿ ನಮ್ಮ ಬದುಕು ಮೂರಾಬಟ್ಟೆಯಾಗಿತ್ತು. ಈ ವರ್ಷವು ಅದೇ ಸ್ಥಿತಿ ಮುಂದುವರೆದಿದೆ. ಒಂದು ಕಲ್ಲು ಕೆತ್ತನೆ ಮಾಡಲು ಎರಡು ದಿನ ಬೇಕು. ಕೆತ್ತನೆ ಮಾಡಿದ ಕಲ್ಲು ಮಾರಾಟವಾದಾಗ ಮಾತ್ರ ನಮ್ಮ ಹೊಟ್ಟೆಗೆ ಅನ್ನ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ಬದುಕು ದುಸ್ತರವಾಗಿದೆ. ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಇರುವುದರಿಂದ ಹೊಟ್ಟೆ ತುಂಬಿಸಲು ಪರದಾಟುವ ಪರಿಸ್ಥಿತಿ ನಿರ್ಮಾನವಾಗಿದೆ. ಯಾರಾದರೂ ದಾನಿಗಳು ಇದ್ದರೆ ನಮ್ಮ ನೆರವಿಗೆ ಬರಬೇಕೆಂದು ಕೆತ್ತನೆಗಾರರ ಕುಟುಂಬಗಳು ಮನವಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.