ಭಾಜಿ ಮಾರ್ಕೆಟ್‌ಗೆ ಬೀಗ, ಎಪಿಎಂಸಿಗೆ ಸಿಕ್ತು ವೇಗ
ನೂತನ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಶುರು | ಪರ-ವಿರೋಧದ ಮಧ್ಯೆ ಮಾರ್ಕೆಟ್ ಸ್ಥಳಾಂತರ
Team Udayavani, May 15, 2019, 11:56 AM IST
ಬೆಳಗಾವಿ: ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಮಂಗಳವಾರ ವ್ಯಾಪಾರ-ವಹಿವಾಟು ಆರಂಭಗೊಂಡಿತು.
ಬೆಳಗಾವಿ: ಪರ-ವಿರೋಧದ ಮಧ್ಯೆಯೂ ಸಗಟು ತರಕಾರಿ ಮಾರುಕಟ್ಟೆ ಕೊನೆಗೂ ಸ್ಥಳಾಂತರಗೊಂಡಿದ್ದು, ಹಳೆಯ ಮಾರುಕಟ್ಟೆಗೆ ತರಕಾರಿ ವಾಹನಗಳನ್ನು ಪ್ರವೇಶಿಸದಂತೆ ತಡೆದ ಪೊಲೀಸರು ಎಲ್ಲವನ್ನೂ ನೂತನ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಕಳುಹಿಸಿದರು. ಮೊದಲ ದಿನವೇ ನೂತನ ಮಾರುಕಟ್ಟೆಯಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ವ್ಯಾಪಾರ ವಹಿವಾಟು ಕಂಡು ಬಂತು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಮಂಗಳವಾರದಿಂದ ಆರಂಭವಾದ ಸಗಟು ತರಕಾರಿ ಮಾರುಕಟ್ಟೆಗೆ ವ್ಯಾಪಾರಕ್ಕೆ ಬೆಂಬಲ ವ್ಯಕ್ತವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ದಂಡು ಮಂಡಳಿ ಪ್ರದೇಶದಲ್ಲಿಯ ಹಳೆಯ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರಿಸಲಾಯಿತು. ಇಲ್ಲಿಯ ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರೂ ಪೊಲೀಸರ ಕಣ್ಗಾವಲಿನಲ್ಲಿ ರೈತರ ವಾಹನಗಳನ್ನು ಎಪಿಎಂಸಿಯತ್ತ ಕಳುಹಿಸಲಾಯಿತು.
ಮಂಗಳವಾರ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳನ್ನು ಹಳೆ ಭಾಜಿ ಮಾರ್ಕೆಟ್‌ನಲ್ಲಿ ಒಳಗೆ ಬಿಡಲಿಲ್ಲ. ಸದಾ ಗಿಜಿಗುಡುತ್ತಿದ್ದ ದಂಡು ಮಂಡಳಿ ಪ್ರದೇಶದ ಮಾರ್ಕೆಟ್ ಸುತ್ತಲೂ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ತರಕಾರಿ ತುಂಬಿದ ವಾಹನಗಳನ್ನು ನೇರವಾಗಿ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ತಿರುಗಿಸಲಾಯಿತು. ರೈತರೂ ಇದಕ್ಕೆ ಕೈ ಜೋಡಿಸಿ ಎದುರು ಮಾತನಾಡದೇ ವಾಹನಗಳನ್ನು ಎಪಿಎಂಸಿಗೆ ತೆಗೆದುಕೊಂಡು ಹೋದರು.
ರಾಷ್ಟ್ರೀಯ ಹೆದ್ದಾರಿ ಮೂಲಕ ಬರುತ್ತಿದ್ದ ವಾಹನಗಳನ್ನು ಹಲಗಾ ಬ್ರಿಡ್ಜ್ ಹಾಗೂ ಬಿ.ಎಸ್. ಯಡಿಯೂರಪ್ಪ ಮಾರ್ಗದಲ್ಲಿಯೇ ತರಕಾರಿ ವಾಹನಗಳನ್ನು ಪೊಲೀಸರು ತಡೆ ಹಿಡಿದರು. ಜತೆಗೆ ಅಲಾರವಾಡ ಮಾರ್ಗದಲ್ಲಿಯೂ ಪೊಲೀಸರು ನಿಂತಿದ್ದರು. ನಗರ ಪ್ರವೇಶಿಸದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ನೇರವಾಗಿ ಎನ್‌ಎಚ್ 4 ಮಾರ್ಗದ ಮೂಲಕವೇ ಬಾಕ್ಸೈಟ್ ರಸ್ತೆಯಿಂದ ಎಪಿಎಂಸಿಗೆ ವಾಹನಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು.
ಹಳೆಯ ಭಾಜಿ ಮಾರ್ಕೆಟ್‌ನಲ್ಲಿಯ ವ್ಯಾಪಾರಸ್ಥರು ಸಭೆ ಸೇರಿ ಜಿಲ್ಲಾಡಳಿತ, ಎಪಿಎಂಸಿ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೋಟ್ಯಂತರ ರೂ. ವೆಚ್ಚ ಮಾಡಿ ಮಳಿಗೆಗಳನ್ನು ನಿರ್ಮಿಸಿದರೂ ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ನಮಗೆ ನ್ಯಾಯ ನೀಡದೇ ಎಪಿಎಂಸಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ರೈತರು ಸ್ವಯಂ ಪ್ರೇರಿತವಾಗಿ ತರಕಾರಿ ತಂದರೂ ಒಳಗೆ ಬಿಡದೇ ದಬ್ಟಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಹೊತ್ತು ಪೊಲೀಸರು ಹಾಗೂ ವ್ಯಾಪಾರಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಮೊದಲನೇಯ ದಿನವೇ ನೂತನ ಮಾರುಕಟ್ಟೆಗೆ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದು ವಿಶೇಷವಾಗಿತ್ತು. ಎಲ್ಲ ಅಂಗಡಿಗಳಲ್ಲಿಯೂ ಕಾಯಿಪಲ್ಯೆ, ತರಕಾರಿ ನಿರೀಕ್ಷೆಗಿಂತಲೂ ಹೆಚ್ಚು ಬಂದಿತ್ತು. ರೈತರು ನೇರವಾಗಿ ವಾಹನಗಳನ್ನು ಇಲ್ಲಿಗೆ ತಂದಿದ್ದರಿಂದ ವ್ಯಾಪಾರಸ್ಥರು ಖುಷಿ ಪಟ್ಟರು. ಜತೆಗೆ ಖರೀದಿದಾರರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಮಾರುಕಟ್ಟೆಗೆ ಕಳೆ ಬಂದಿತ್ತು. ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದಿಂದ ಇದೊಂದು ಶುಭ ಸಂಕೇತ ಎನ್ನುತ್ತಾರೆ ವ್ಯಾಪಾರಸ್ಥರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.