ಸಮರ್ಪಕವಾಗಿ ಪರೀಕ್ಷೆ ನಿರ್ವಹಿಸಿ: ಶಾಸಕ ಯಾದವಾಡ
Team Udayavani, Jun 22, 2020, 9:26 AM IST
ರಾಮದುರ್ಗ: ಕೋವಿಡ್ ಮಧ್ಯೆಯೇ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕಾದ ಅನಿವಾರ್ಯತೆ ಇದ್ದು, ಅಧಿಕಾರಿಗಳು ಸಮರ್ಪಕವಾಗಿ ಪರೀಕ್ಷೆ ನಿರ್ವಹಿಸಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಸ್ಥಳೀಯ ತಾಪಂ ಸಭಾ ಭವನದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತೆಯ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಅಲಾಸೆ ಮಾತನಾಡಿ, ತಾಲೂಕಿನ 11 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 3447 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳನ್ನು ಸೆನಿಟೈಸ್ ಮಾಡಿ, ಎಲ್ಲ ಮಕ್ಕಳಿಗೂ ತಲಾ ಎರಡು ಮಾಸ್ಕ್ ನೀಡಿ, ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ಮಾಸ್ಕ್ ಮತ್ತು ಎಲ್ಲಾ 11 ಪರೀಕ್ಷಾ ಕೇಂದ್ರಗಳಿಗೆ ತಲಾ ಒಂದು ಥರ್ಮಲ್ ಸ್ಕ್ಯಾನರನ್ನು ಶಾಸಕರು ಸ್ವಂತ ವೆಚ್ಚದಲ್ಲಿ ನೀಡಿದರು. ಸಭೆಯಲ್ಲಿ ಜಿ.ಪಂ ಸದಸ್ಯರಾದ ರೇಣಪ್ಪ ಸೋಮಗೊಂಡ, ರಮೇಶ ದೇಶಪಾಂಡೆ, ಮಾರುತಿ ತುಪ್ಪದ, ತಾ.ಪಂ ಇಒ ಮುರಳೀಧರ ದೇಶಪಾಂಡೆ, ಗ್ರೇಡ್ -2 ತಹಶೀಲ್ದಾರ್ ಸೋಮಶೇಖರ ತಂಗೊಳ್ಳಿ, ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Belagavi: ಎಸ್‌ಡಿಎ ರುದ್ರಣ್ಣ ಮೊಬೈಲ್ ಪತ್ತೆ: ಪೊಲೀಸರಿಂದ ತನಿಖೆ ಚುರುಕು
Belagavi; ರುದ್ರಣ್ಣ ಯಡವಣ್ಣವರ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ: ಹೆಬ್ಬಾಳಕರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.