ಮಲಿಕವಾಡ-ದತ್ತವಾಡ ಸೇತುವೆ ಜಲಾವೃತ
•ಮೈದುಂಬಿದ ಕೃಷ್ಣಾ, ದೂಧಗಂಗಾ, ವೇದಗಂಗಾ•ನದಿ ತೀರದ ಜನ ಸಂಚಾರ ಸ್ಥಗಿತ
Team Udayavani, Jul 2, 2019, 2:56 PM IST
ಚಿಕ್ಕೋಡಿ: ದೂಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ತಾಲೂಕಿನ ಮಲಿಕವಾಡ-ದತ್ತವಾಡ ಸೇತುವೆ ಜಲಾವೃತಗೊಂಡಿದೆ.
ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗಡಿ ಭಾಗದ ನದಿಗಳು ಮೈದುಂಬಿ ಹರಿಯುತ್ತಿವೆ. ಕೆಳಹಂತದ ಮೂರು ಸೇತುವೆಗಳು ಜಲಾವೃತಗೊಂಡು ಸಂಚಾರ ಕಡಿತಗೊಂಡಿವೆ.
ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟಪ್ರದೇಶದಲ್ಲಿ ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ 24 ಸಾವಿರ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿರುವುದರಿಂದ ಚಿಕ್ಕೋಡಿ ತಾಲೂಕಿನ ನದಿಗಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳಗೊಂಡಿವೆ. ದೂಧಗಂಗಾ, ವೇದಗಂಗಾ ನದಿ ಸಂಗಮದ ಬಳಿ ಇರುವ ಕಾರದಗಾ- ಭೋಜ ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೋಜವಾಡಿ-ಕುನ್ನುರ, ದೂಧಗಂಗಾ ನದಿಗೆ ಇರುವ ಮಲಿಕವಾಡ-ದತ್ತವಾಡ ಸೇತುವೆಗಳು ಜಲಾವೃತಗೊಂಡಿವೆ.
ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ-ಯಡೂರ ಸೇತುವೆ ಬಳಿ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ ಹಾಗೂ ಉಪನದಿಗಳಾದ ವೇದಗಂಗಾ ಮತ್ತು ದೂಧಗಂಗಾ ನದಿಗಳಿಂದ ಹರಿದು ಬರುತ್ತಿರುವ ನೀರಿನಲ್ಲಿ ಅಂತರಗಂಗೆ ಬಳ್ಳಿ ಕಲ್ಲೋಳ ಸೇತುವೆ ಬಳಿ ಬ್ಯಾರೇಜ್‌ಗೆ ತಡೆಹಿಡಿದಿದೆ. ಹೀಗಾಗಿ ನೀರಿನ ಹರಿವಿನಲ್ಲಿ ವೇಗ ಕಡಿಮೆಯಾಗಿದೆ. ಕೆಳಹಂತದ ಬ್ಯಾರೇಜಗಳು ಜಲಾವೃತಗೊಂಡಿರುವುದರಿಂದ ನದಿ ತೀರದ ರೈತರು ಸುತ್ತುವರೆದು ಪ್ರಯಾಣ ಮಾಡುತ್ತಿದ್ದಾರೆ.
ಜಲಾವೃತಗೊಂಡ ಬ್ಯಾರೇಜ್‌ಗಳ ಬಳಿ ಸೂಕ್ತ ರಕ್ಷಣೆ ಒದಗಿಸಲು ಪೊಲೀಸ್ ಇಲಾಖೆ ತಿಳಿಸಿದ್ದು, ಸೇತುವೆಗಳ ಬಳಿ ಬ್ಯಾರೇಕೆಡ್ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಕೃಷ್ಣಾ ನದಿಗೆ ಅಂತರಗಂಗೆ ಬಳ್ಳಿ ಹರಿದು ಬಂದು ಕಲ್ಲೋಳ ಬ್ಯಾರೇಜ್ ಬಳಿ ನೀರು ತಡೆಹಿಡಿಯುತ್ತಿರುವುದರಿಂದ ಅದನ್ನು ಜೆಸಿಬಿ ಸಹಾಯದಿಂದ ಹೊರತೆಗೆಯುವಂತೆ ಸ್ಥಳೀಯ ಪಿಡಿಒಗೆ ನಿರ್ದೇಶನ ನೀಡಲಾಗಿದೆ ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ತಿಳಿಸಿದ್ದಾರೆ.
ಮಹಾರಾಷ್ಟ್ರ ಮಳೆ ವಿವರ: ಕೊಯ್ನಾ 48 ಮಿಮೀ, ನವಜಾ 25 ಮಿಮೀ, ವಾರಣಾ 21 ಮಿಮೀ, ಮಹಾಬಳೇಶ್ವರ 86 ಮಿಮೀ, ರಾಧಾನಗರ 114 ಮಿಮೀ, ಪಾಟಗಾಂವ 189 ಮಿಮೀ ಹಾಗೂ ಕಾಳಮ್ಮವಾಡಿ ಪ್ರದೇಶದಲ್ಲಿ 106 ಮಿಮೀ ಮಳೆಯಾದ ಬಗ್ಗೆ ವರದಿಯಾಗಿದೆ.
ಚಿಕ್ಕೋಡಿ ಮಳೆ ವಿವರ: ಚಿಕ್ಕೋಡಿ 3.4 ಮಿಮೀ, ಸದಲಗಾ 23.5 ಮಿಮೀ, ನಿಪ್ಪಾಣಿ 13 ಮಿಮೀ, ಅಂಕಲಿ 4.6 ಮಿಮೀ, ಗಳತಗಾ 10.2 ಮಿಮೀ, ನಾಗರಮುನ್ನೋಳ್ಳಿ 8.6 ಮಿಮೀ, ಜೋಡಟ್ಟಿ 2.8 ಮಿಮೀ ಹಾಗೂ ಸೌಂದಲಗಾ ಮಳೆ ಮಾಪನ ಕೇಂದ್ರದ ಪರಿಸರದಲ್ಲಿ 8.8 ಮಿಮೀ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Bailhongal: ಯುವಕನಿಗೆ ಚಾಕು ಇರಿದು ಬರ್ಬರವಾಗಿ ಕೊ*ಲೆ
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.